ಹಾವೇರಿ : ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಕೇಂದ್ರ ಬಿಜೆಪಿ ಸರ್ಕಾರದ ಬೆಲೆ ಏರಿಕೆ ನೀತಿಯ ವಿರುದ್ಧ ಬೃಹತ್ ಪ್ರತಿಭಟನಾ ರಾಲಿ ಹಮ್ಮಿಕೊಳ್ಳಲಾಗಿತ್ತು ರಾಲಿಯಲ್ಲಿ ಕೆ.ಪಿ.ಸಿ.ಸಿ ಶಿಕ್ಷಕರ ಮತ್ತು ಪದವೀಧರ ಘಟಕದ ನಿಕಟಪೂರ್ವ ರಾಜ್ಯಾಧ್ಯಕ್ಷರಾದ ಡಾ. ಆರ್. ಎಂ.ಕುಬೇರಪ್ಷನವರು ಭಾಗವಹಿಸಿ ರಾಲಿ ಅನ್ನು ಉದ್ದೇಶಿಸಿ ಮಾತನಾಡುತ್ತಾ ಕೇಂದ್ರದ ಬಿಜೆಪಿ ಸರ್ಕಾರವು ಜನಸಾಮಾನ್ಯರು ಬಳಸುತ್ತಿರುವ ಗ್ಯಾಸ್, ಪೇಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ಏರಿಸಿ ಜನಸಾಮಾನ್ಯರು ಬದಕುವುದೇ ಕಷ್ಟವಾಗಿದೆ ಅದನ್ನು ಪ್ರಶ್ನಿಸಿದರೆ ಇ.ಡಿ. ಐ.ಟಿ. ದಾಳಿಯನ್ನು ಮಾಡಿಸಿ ಅವರ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಲೆ ಇದೆ ಎಂದು ಸಭೆಗೆ ತಿಳಿಸಿದರು. ರಾಲಿಯಲ್ಲಿ ಜಿಲ್ಲಾ ಆಧ್ಯಕ್ಷರಾದ ಶ್ರೀ ಸಂಜೀವ ನೀರಲಗಿ ಮಾಜಿ ಶಾಸಕರಾದ ಅಜ್ಜಂಪೀರ್ ಖಾದ್ರಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಶ್ರೀ ಎಂ.ಎಂ.ಹೀರೆಮಠ. ಹಾಗೂ ಕೋಟ್ರೇಶಪ್ಪ ಬಸೆಗಣಿ, ಶ್ರೀ ಬೀಷ್ಟನಗೌಡ್ರ, ಶ್ರೀ ಗಾಜಿ ಗೌಡ್ರು, ಮುಂತಾದ ಕಾಂಗ್ರೆಸ್ ಮುಖಂಡರು ರಾಲಿಯಲ್ಲಿ ಭಾಗವಹಿಸಿದ್ದರು.
ಹಾವೇರಿಯಲ್ಲಿ ನಡೆದ ಕೆಂದ್ರ ಬಿ.ಜೆ.ಪಿ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಡಾ.ಆರ್.ಎಂ ಕುಬೇರಪ್ಪ ಭಾಗಿ.
