ಮೊಳಕಾಲ್ಮುರು : ತಾಲೂಕಿನ ಬೊಮ್ಮದೇವರಹಳ್ಳಿಯ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು…
ಗ್ರಾಮೀಣ ಪ್ರದೇಶದ ಜನರ ಸಂಕಷ್ಟವನ್ನು ಕಂಡ ಅಂದಿನ ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್ ರವರು ಮೊದಲ ಬಾರಿಗೆ ಮೂರು ಜಿಲ್ಲೆಗಳಲ್ಲಿ ನರೇಗಾ ಕಾರ್ಯಕ್ರಮವನ್ನು ರೂಪಿಸಿದ್ದರು.. ಈ ಸಂದರ್ಭದಲ್ಲಿ ಅಂದಿನ ಚಿತ್ರದುರ್ಗ ಸಂಸದರಾಗಿದ್ದ ಎನ್. ವೈ .ಹನುಮಂತಪ್ಪನವರ ಶ್ರಮದಿಂದ… ಮೊದಲ ಬಾರಿಗೆ ನರೇಗಾ ಯೋಜನೆ ಪಡೆದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು..
ಅಂದಿನಿಂದ ಇಲ್ಲಿಯವರೆಗೂ ಕೂಡ ಈ ಯೋಜನೆ ಬಹಳ ಗ್ರಾಮೀಣ ಭಾಗದ ಕುಟುಂಬಗಳಿಗೆ ಅನುಕೂಲವಾಗಿದೆ,.
ಈ ಯೋಜನೆ ಪ್ರಾರಂಭವಾದ ಮೊದಲಿನಲ್ಲಿ ಮೊಳಕಾಲ್ಮುರು ತಾಲೂಕಿನಲ್ಲಿ ಶಾಸಕನಾಗಿ ನಾನೇ ಚಾಲನೆ ನೀಡಿದ್ದೆ,.. ನರೇಗಾ ಯೋಜನೆಯ ಜೊತೆಗೆ ಕೂಸಿನ ಮನೆ ಕಾರ್ಯಕ್ರಮಗಳು ಎಷ್ಟೋ ಬಡ ಕುಟುಂಬಗಳು ಗುಳೆ ಹೋಗುವುದು ತಡೆದು ಜೀವನಕ್ಕೆ ಆಸರೆಯಾಗಿದೆ..
ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಎಚ್ ಹನುಮಂತಪ್ಪ.., ತಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಪಾರ್ವತಿ ಟಿ.ಡಿ. ಈರಣ್ಣ.. ಜಿಲ್ಲಾ ಪಂಚಾಯತ್ ಎ. ಇ.ಇ .ಲಿಂಗರಾಜು… ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಸ್ ಬಾಂಡ್ರಪ್ಪ,.. ರಾಂಪುರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎನ್. ಗುಂಡಪ್ಪ,.. ಮೇಟಿ ಲಿಂಗಾರೆಡ್ಡಿ… ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು..ಪಂಚಾಯಿತಿ ಸರ್ವ ಸಿಬ್ಬಂದಿ. ನರೇಗಾ ಕೂಲಿಕಾರರು ಹಾಗೂ ಊರಿನ ಗ್ರಾಮಸ್ಥರು ಸೇರಿದ್ದರು.