ಗಂಗಾವತಿ: ತಾಲೂಕಾ ಜಂಗಮ ಕ್ಷೇಮಾಭಿವೃದ್ಧಿ ಸಂಘ ಕಾರಟಗಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಂಘಕ್ಕೆ ಗೌರವಾಧ್ಯಕ್ಷರಾಗಿ ಸಿದ್ದಯ್ಯ ಸ್ವಾಮಿ, ನೂತನ ಅಧ್ಯಕ್ಷರಾಗಿ ಶಿವಕುಮಾರ್ ಸ್ವಾಮಿ ಹಿರೇಮಠ, ಉಪಾಧ್ಯಕ್ಷರಾಗಿ ಶಿವಪುತ್ರಯ್ಯ ಹಿರೇಮಠ ಮತ್ತು ಚಂದ್ರಯ್ಯ ಸ್ವಾಮಿ ಸೋಮನಾಳ, ಕಾರ್ಯದರ್ಶಿಯಾಗಿ ವೀರೇಶ ಸ್ವಾಮಿ ಎರಡೋಣಿ, ಖಜಂಚಿಯಾಗಿ ವೃಷಭೇಂದ್ರ ಸ್ವಾಮಿ ಕಾರಟಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಂಗಮ ಸಮಾಜ ಹಿರಿಯ ದುರೀಣರು ಮಾಜಿ ಕಾಡಾ ಅಧ್ಯಕ್ಷ ಬಿ.ಹೆಚ್.ಎಂ.ತಿಪ್ಪೇರುದ್ರಸ್ವಾಮಿ ಹಾಗೂ ಬಿಜೆಪಿ ಹಿರಿಯ ಮುಖಂಡರು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎಚ್.ಎಂ.ಸಿದ್ದರಾಮಯ್ಯ ಹಾಗೂ ಇನ್ನೂರವ ಸಮಾಜದ ಮುಖಂಡರಾದ ಹಾಗೂ ಆಯ್ಕೆಯಾದ ಪದಾಧಿಕಾರಿಗಳು ಸ್ನೇಹ ಪೂರ್ವಕವಾಗಿ ಸನ್ಮಾನಿಸಿ ಗೌರವಿಸಿದರು. ನಂತರ ಸಮಾಜದ ಹಿರಿಯ ಮಾಜಿ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಬಿ.ಹೆಚ್.ಎಂ. ಮಾತನಾಡಿ ನೂತನ ಪದಾಧಿಕಾರಿಗಳು ಜಂಗಮ ಸಮಾಜದ ಏಳಿಗೆಗಾಗಿ ಮತ್ತು ಅದರ ಶ್ರೇಯೋಭಿವೃದ್ಧಿಗಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಬದ್ಧತೆಯಿಂದ ನಡೆದುಕೊಳ್ಳುವಂತೆ ಸಲಹೆ ಸೂಚನೆಗಳನ್ನು ನೀಡಿದರು. ಎಂತಹ ಕಷ್ಟದಲ್ಲಿ ಕೂಡ ಸಮಾಜವನ್ನು ಮುನ್ನಡೆಸುವ ದೃಢ ನಿರ್ಧಾರವನ್ನು ಹೊಂದಿರಬೇಕು ಮತ್ತು ಬಡ ಸಮಾಜದಲ್ಲಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ, ಬಡವರ ಅಭಿವೃದ್ಧಿಗಾಗಿ ನಿಮ್ಮಗಳ ಹೃದಯ ಸದಾ ಮಿಡಿಯುವಂತೆ ಇರಬೇಕು. ಜಂಗಮ ಸಮಾಜ ತನ್ನದೇ ಆದ ಒಂದು ಪವಿತ್ರ ಸ್ಥಾನವನ್ನು ಈ ಸಮಾಜದಲ್ಲಿ ಹೊಂದಿದೆ, ಆ ಸ್ಥಾನಕ್ಕೆ ಎಂದು ಧಕ್ಕೆ ಬರದ ಹಾಗೆ ಸಮಾಜವನ್ನು ಮುನ್ನಡೆಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಚನ್ನಮಲ್ಲಯ್ಯ ಸ್ವಾಮಿ,ಎಚ್.ಎಮ್. ವಿರೂಪಾಕ್ಷಯ್ಯ ಸ್ವಾಮಿ, ಹೆಚ್.ಎಂ. ಬಸವರಾಜ್ ಸ್ವಾಮಿ, ಶ್ರೀಮತಿ ಪಾರ್ವತಿ ಸಿದ್ದರಾಮಯ್ಯ ಸ್ವಾಮಿ, ಶರಣಯ್ಯ ಸ್ವಾಮಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಗಂಗಾವತಿ : ಜಂಗಮ ಕ್ಷೇಮಾಭಿವೃದ್ಧಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಬಿ.ಎಚ್.ಎಂ ತಿಪ್ಪೇರುದ್ರಸ್ವಾಮಿ ಭಾಗಿ
