
ಗದಗ ಜಿಲ್ಲೆಗೆ ನೂತನ ಪೋಲೀಸ್ ಅಧೀಕ್ಷಕರನ್ನಾಗಿ ಸನ್ 2019 ನೆ ಬ್ಯಾಚಿನ ಐಪಿಎಸ್ ಅಧಿಕಾರಿ ರೋಹನ್ ಜಗದೀಶ್ ಇವರನ್ನು ಸರ್ಕಾರ ನೇಮಿಸಿ ಆದೇಶಿಸಿದೆ.ಬೆಳಗಾವಿ ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೋಲೀಸ್ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರೋಹನ್ ಜಗದೀಶ್ ಇವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶಿಸಿದೆ.ಈ ಮೊದಲು ಕಾರ್ಯ ನಿರ್ವಹಿಸಿದ ಪೋಲೀಸ್ ಅಧೀಕ್ಷಕರಾದ ಬಿ.ಎಸ್.ನೇಮಗೌಡ ಇವರನ್ನು ಬೆಂಗಳೂರು ನಗರದ ಸಿಟಿ ಉತ್ತರ ವಿಭಾಗದ ಡಿಸಿಪಿ ಆಗಿ ಸರ್ಕಾರ ನೇಮಕ ಮಾಡಿ ಆದೇಶಿಸಿದೆ.

*ವರದಿ*✍️ಚಂದ್ರಶೇಖರ ಸೋಮಣ್ಣವರ