
*ಭಾರತ ವಿದ್ಯಾರ್ಥಿ ಫೆಡರೇಷನ್ (SFI)* ********”***************** ಆರ್.ಸಿ.ಬಿ. ತಂಡದ ಗೆಲುವಿನ ಸಂಭ್ರಮಾಚರಣೆಗೆ ಸಾವಿರಾರು ಜನರು ಸೇರುವುದನ್ನು ರಾಜ್ಯ ಸರ್ಕಾರ ಅಂದಾಜಿಸಿ ಸರಿಯಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲ್ಲದ ಪರಿಣಾಮ ಭದ್ರತಾ ವೈಫಲ್ಯದಿಂದ ಕಾಲ್ತುಳಿತ ಸಂಭವಿಸಿ 11 ಜನರ ಸಾವು ಮತ್ತು ಹಲವಾರು ಮಂದಿ ಗಂಭೀರವಾದ ಸ್ಥಿತಿಗೆ ದೂಡುವಂತೆ ಮಾಡಿರುವುದನ್ನು ಎಸ್ ಎಫ್ ಐ ಗದಗ ಜಿಲ್ಲಾ ಸಮಿತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.ಜೂನ್ 3ರ ರಾತ್ರಿ ನಡೆದ ಐಪಿಎಲ್ ಪೈನಲ್ ಪಂದ್ಯದಲ್ಲಿ ಆರ್.ಸಿ.ಬಿ. ತಂಡವು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಗೆಲುವು ಪಡೆದು ಟ್ರೋಫಿ ತನ್ನದಾಗಿಸಿಕೊಂಡಿತ್ತು. ಈ ಗೆಲುವಿನ ಸಂಭ್ರಮಾಚರಣೆಯನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್.ಸಿ.ಬಿ. ಫ್ರಾಂಚೈಸಿ ಮತ್ತು ವಿಧಾನ ಸೌಧ ಮುಂಭಾಗ ರಾಜ್ಯ ಸರ್ಕಾರ ಆಯೋಜಿಸಿದ್ದವು. ಈ ಸಂಭ್ರಮಾಚರಣೆಗೆ ಕನಿಷ್ಡ ವ್ಯವಸ್ಥೆಗಳನ್ನು ಮಾಡಿಕೊಳ್ಳದೆ ಎರಡು ಕಡೆ ಕಾರ್ಯಕ್ರಮಕ್ಕೆ ಅವಕಾಶ ನೀಡಿದ್ದು ಸರಿಯಾದ ಕ್ರಮವಲ್ಲ. ಎರಡು ಕಡೆ ಕಾರ್ಯಕ್ರಮವನ್ನು ಆಯೋಜಿಸಿದ ಮೇಲೆ ಅದಕ್ಕೆ ತಕ್ಕಂತಹ ಸಿದ್ಧತೆಯನ್ನು ರಾಜ್ಯ ಸರ್ಕಾರ ಮಾಡಬೇಕಿತ್ತು. ಆರ್.ಸಿ.ಬಿ. ಫ್ರಾಂಚೈಸಿ ಮಾಲೀಕರು ಸಹ ಸೂಕ್ತ ಭದ್ರತೆ ಪಡೆಯಬೇಕಿತ್ತು. ಇಡೀ ಪೋಲೀಸ್ ಇಲಾಖೆಯ ಭದ್ರತೆ ವಿಧಾನ ಸೌಧ ಕಾರ್ಯಕ್ರಮಕ್ಕೆ ನೀಡಿ, ಚಿನ್ನಸ್ವಾಮಿ ಸ್ಟೇಡಿಯಂ ಕಾರ್ಯಕ್ರಮದ ಭದ್ರತಾ ಕೆಲಸಗಳಿಗೆ ನಿರ್ಲಕ್ಷ್ಯತೆ ವಹಿಸಿದಂತೆ ಕಾಣುತ್ತದೆ. ಅಲ್ಲದೆ ಚಿನ್ನಸ್ವಾಮಿ ಸ್ಟೇಡಿಯಂನ ಗೇಟ್ ನ್ನು ಒಮ್ಮೆಲೆ ತೆರೆದಿದ್ದು ನೂಕುನುಗ್ಗಲು ಹೆಚ್ಚಾಗಿ ಈ ದುರಂತಕ್ಕೆ ಎಡೆಮಾಡಿಕೊಟ್ಟಂತಿದೆ. ಇದು ರಾಜ್ಯ ಗೃಹ ಇಲಾಖೆಯ ವೈಫಲ್ಯವಾಗಿದೆ.ಭಾರತ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಗೆದ್ದಾಗ, ಕರ್ನಾಟಕ ತಂಡ ರಣಜಿ ಟ್ರೋಫಿ ಗೆದ್ದಾಗ ನೀಡದಿರುವ ಮಹತ್ವ ಹಾಗೂ ಕ್ರೀಡೆಗಳಿಗೆ ಪ್ರೋತ್ಸಾಹ, ಅನುದಾನ ನೀಡಿದ ರಾಜ್ಯ ಸರ್ಕಾರ ಆರ್.ಸಿ.ಬಿ. ಫ್ರಾಂಚೈಸಿ ತಂಡ ಗೆಲುವಿಗೆ ಮಹತ್ವ ನೀಡಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ಆಯೋಜಿಸಿದ್ದು ದುರದೃಷ್ಟಕರವಾಗಿದೆ.ಘಟನೆಯಲ್ಲಿ ನ ಎಲ್ಲಾ ಗಾಯಾಳುಗಳ ಚಿಕಿತ್ಸೆ ವೆಚ್ಚಗಳು ಮತ್ತು ಆರೈಕೆ ಅವಧಿಯ ವೆಚ್ಚಗಳನ್ನು ಹಾಗೂ ಮೃತ ವ್ಯಕ್ತಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ರಾಜ್ಯ ಸರ್ಕಾರ ಹಾಗೂ ಆರ್.ಸಿ.ಬಿ. ಫ್ರಾಂಚೈಸಿ ಮಾಲಿಕರು ಘೋಷಿಸಬೇಕೆಂದು ಎಸ್ ಎಫ್ ಐ ಗದಗ ಜಿಲ್ಲಾ ಸಮಿತಿಯು ಒತ್ತಾಯಿಸುತ್ತದೆ.

*ಚಂದ್ರು ರಾಠೋಡ* ಜಿಲ್ಲಾಧ್ಯಕ್ಷರುಭಾರತ ವಿದ್ಯಾರ್ಥಿ ಫೆಡರೇಷನ್ (SFI)8123280578