
* (ಇಂದು ಸಮಸ್ತ ನಾಡಿನಾದ್ಯೇoತ ಮುಸ್ಲಿಂ ಸಮುದಾಯದ ಭಾಂದವರು ಶ್ರದ್ದಾ ಭಕ್ತಿಯಿಂದ ಆಚರೀಸಲ್ಪಡುವ ಬಕ್ರೀದ್ ಹಬ್ಬದ ಪ್ರಯುಕ್ತ ವಿಶೇಷ ಲೇಖನ )

ಪ್ರವಾದಿ ಹಜರತ್ ಇಬ್ರಾಹಿಂ ಅವರ ತ್ಯಾಗ, ಬಲಿದಾನ, ಅಚಲ ದೈವಭಕ್ತಿ ಹಾಗೂ ಅವರ ಪುತ್ರ ಹಜರತ್ ಇಸ್ಮಾಯಿಲ್ ಅವರ ದೈವಭಕ್ತಿಯನ್ನು ಸಾಂಕೇತಿಸುವ ದಿನವಾಗಿದೆ. ಈ ಬಕ್ರೀದ್ ಹಬ್ಬದಂದು ತ್ಯಾಗ-ಬಲಿದಾನವನ್ನು ಸ್ಮರಿಸಲಾಗುತ್ತದೆ. *ತ್ಯಾಗ ಬಲಿದಾನದ ಪ್ರತೀಕವೇ ಬಕ್ರೀದ್ ಹಬ್ಬದ ವೈಶಿಷ್ಟೇತೆ :-*ಮುಸ್ಲಿಂ ಸಮುದಾಯದ ಬಾಂಧವರ ಪ್ರಮುಖ ಹಬ್ಬಗಳಲ್ಲಿ ಬಕ್ರೀದ್ ಹಬ್ಬವು ಕೂಡಾ ಒಂದು. ಈ ಹಬ್ಬವನ್ನು ಈದ್-ಉಲ್-ಅಜಾ ಎಂದೂ ಕರೆಯುತ್ತಾರೆ. ರಂಜಾನ್ ಮುಗಿದ 70 ದಿನಗಳ ನಂತರ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತದೆ. ಹೀಗಾಗಿ ಈ ಹಬ್ಬವನ್ನು ಇಸ್ಲಾಮಿಕ್ ಕ್ಯಾಲೆಂಡರ್‌ನ ಕೊನೆಯ ತಿಂಗಳ ಜು-ಅಲ್-ಹಿಜ್‌ನಲ್ಲಿ ಆಚರಿಸಲಾಗುತ್ತದೆ. ಆದರೆ ಈ ಈದ್-ಉಲ್-ಅದಾ ಆಚರಣೆಗೆ ನಿರ್ದಿಷ್ಟ ದಿನಾಂಕ ಎಂಬುದಿಲ್ಲ ಚಂದ್ರನು ಗೋಚರಿಸಿದ ನಂತರವೇ ಬಕ್ರೀದ್ ಆಚರಿಸುವ ಸಂಪ್ರದಾಯವಿದೆ. ಈ ಬಾರಿ ಬಕ್ರೀದ್ ಹಬ್ಬವನ್ನು ಜೂನ್ 07 ರಂದು ಶನಿವಾರದಂದು ಆಚರಿಸಲಾಗುತ್ತಿದೆ.*ಬಕ್ರೀದ್ ಹಬ್ಬದ ಆಚರಣೆಯ ಐತಿಹಾಸಿಕ ಹಿನ್ನೆಲೆ :-*ಬಕ್ರೀದ್ ಆಚರಣೆಯ ಹಿಂದೆ ಹಜರತ್ ಇಬ್ರಾಹಿಂ ಅವರ ತ್ಯಾಗ ಬಲಿದಾನದ ಕಥೆಯಿದೆ. ಹಜರತ್ ಇಬ್ರಾಹಿಂ ಎನ್ನುವವರು ದೇವರ ಮೇಲೆ ಅಪಾರ ನಂಬಿಕೆಯನ್ನು ಹೊಂದಿದ್ದ ವ್ಯಕ್ತಿಯಾಗಿದ್ದರು. ಹೀಗಿರುವಾಗ ಒಂದೊಮ್ಮೆ ಹಜರತ್ ಇಬ್ರಾಹಿಂ ತನ್ನ ಮಗನನ್ನು ತ್ಯಾಗ ಮಾಡುತ್ತಿದ್ದಾನೆ ಎಂದು ಕನಸು ಕಾಣುತ್ತಾನೆ. ಕನಸನ್ನು ಸಂದೇಶವೆಂದು ಭಾವಿಸಿ, ತನ್ನ ಮಗನನ್ನು ಬಲಿ ಕೊಡಲು ಮುಂದಾಗುತ್ತಾನೆ. ಆದರೆ ದೇವರು ಮಗನ ಬದಲು ಪ್ರಾಣಿಯನ್ನು ಬಲಿ ಕೊಡುವ ಸಂದೇಶವನ್ನು ನೀಡುತ್ತಿದ್ದಂತೆ, ಮಗನ ಬದಲಿಗೆ ತನ್ನ ಪ್ರೀತಿಯ ಕುರಿ ಮರಿಯನ್ನು ಬಲಿ ನೀಡುತ್ತಾನೆ. ಇದನ್ನು ಬಕ್ರಾ-ಈದ್’ ಅಂದರೆ ಬಕ್ರೀದ್ ಎಂದು ಕರೆಯಲಾಗುತ್ತದೆ. ಈ ಕಾರಣದಿಂದಲೇ ಈದ್-ಉಲ್-ಅಜಾ ದಿನದಂದು ಮೇಕೆಯನ್ನು ಬಲಿಕೊಡುವ ಸಂಪ್ರದಾಯವು ಪ್ರಾರಂಭವಾಯಿತು ಎನ್ನಬಹುದು.*ವೈವಿಧ್ಯಮಯ ಸಂಪ್ರದಾಯಬದ್ದ ಹಾಗೂ ಬಕ್ರೀದ್ ಹಬ್ಬದ ಆಚರಣೆ :-*ತ್ಯಾಗ ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಈ ದಿನದಂದು ಮುಸ್ಲಿಂ ಬಾಂಧವರು ಬೆಳಿಗ್ಗೆ ಎದ್ದು ನಮಾಜ್ ಮಾಡಲು ಹೋಗುತ್ತಾರೆ. ಮುಸ್ಲಿಂರ ಈ ಹಬ್ಬದಂದು ತಮ್ಮ ಮನೆಗಳಲ್ಲಿ ಸಾಕಿರುವ ಅಥವಾ ಹಬ್ಬಕ್ಕೆ ಕೆಲವೇ ದಿನವಿರುವಾಗಲೇ ತಂದ ಮೇಕೆಗಳನ್ನು ಬಲಿ ಕೊಡುವ ಪದ್ಧತಿಯಿದೆ. ಮೇಕೆಯನ್ನು ಬಲಿ ಕೊಟ್ಟ ಬಳಿಕ, ಈ ಮಾಂಸವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಮೊದಲ ಭಾಗವನ್ನು ಸಂಬಂಧಿಕರು, ಸ್ನೇಹಿತರು ಮತ್ತು ನೆರೆಹೊರೆಯವರಿಗೆ ನೀಡಲಾಗುತ್ತದೆ. ಎರಡನೆಯ ಭಾಗವನ್ನು ಬಡವರು ಮತ್ತು ನಿರ್ಗತಿಕರಿಗೆ ಹಾಗೂ ಮೂರನೇ ಭಾಗವನ್ನು ಕುಟುಂಬದವರು ಇಟ್ಟುಕೊಳ್ಳುತ್ತಾರೆ. ಈ ದೇವರ ಪ್ರಸಾದವನ್ನು ಅಡುಗೆ ಮಾಡಿ ಕುಟುಂಬ ಸದಸ್ಯರು ಸವಿದು ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ.*ಹಜ್ಜ್ ಯಾತ್ರೆಯ ಪವಿತ್ರ ಬಕ್ರೀದ್ಬಕ್ರೀದ್ ಹಬ್ಬ:-* ಹಜ್ ಯಾತ್ರೆಯ ಸಂಭ್ರಮ. ಈ ಹಬ್ಬದ ಶುಭ ಸಂದರ್ಭದಲ್ಲಿಯೇ ಹಜ್ ಯಾತ್ರೆ ಭಕ್ತಿ ವೈಭವದಿಂಧ ನಡೆಯುತ್ತದೆ. ಆರೋಗ್ಯ ಹಾಗೂ ಆರ್ಥಿಕವಾಗಿ ಯೋಗ್ಯನಾಗಿರುವ ವ್ಯಕ್ತಿ ಜೀವನದಲ್ಲೊಮ್ಮೆ ಹಜ್ಜ್ ಯಾತ್ರೆ ಕೈಗೊಳ್ಳಬೇಕು. ವಿಶ್ವದೆಲ್ಲೆಡೆಯಿಂದ ಲಕ್ಷೋಪಲಕ್ಷ ಮುಸ್ಲಿಮರು ವರ್ಷಕ್ಕೊಮ್ಮೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಮೆಕ್ಕಾ ನಗರದಲ್ಲಿ ಹೇಗೆ ಒಟ್ಟುಗೂಡುತ್ತಾರೆ, ಬಡವ, ಬಲ್ಲಿದ, ರಾಜ, ಮಂತ್ರಿ, ಸಚಿವ ಎಂಬ ಯಾವ ಬೇಧವೂ ಅಲ್ಲಿಲ್ಲ, ಅಲ್ಲಿ ಕೇವಲ ಎರಡು ತುಂಡು ಶುಭ್ರವಾದ ಶ್ವೇತ ಬಟ್ಟೆ (ಪವಿತ್ರ ಎಹರಾಮ್) ಧರಿಸಿ ಹಜ್ ಧಾರ್ಮಿಕ ವಿಧಾನದಲ್ಲಿ ಪಾಲ್ಗೊಳ್ಳುತ್ತಾರೆ. ಕಾಬಾ ಬಳಿಯಲ್ಲೇ ಇರುವ ಎಂದೂ ಕಡಿಮೆಯಾಗದೆ ಸದಾ ಹರಿಯುತ್ತಲೇ ಇರುವ ಮರುಭೂಮಿಯ ಬುಗ್ಗೆಯೇ ಝಮಝಮ್ ನ ಬಾವಿ. ಅತ್ಯದ್ಭುತ ಗುಣಗಳುಳ್ಳ ಇದರ ನೀರನ್ನು ಲೋಕದ ಮೂಲೆ ಮೂಲೆಗೆ ಮಕ್ಕಾ ಯಾತ್ರಿಗಳು ಕೊಂಡೊಯ್ಯುತ್ತಾರೆ. ಇಬ್ರಾಹೀಮ ಮತ್ತು ಇಸ್ಮಾಯೀಲರು ಕೂಡಿ ಅಲ್ಲಾಹನ ಆಜ್ಞೆಯಂತೆ ಭೂಮಂಡಲದ ಕೇಂದ್ರ ಭಾಗದಲ್ಲಿ ನಿರ್ಮಿಸಿದ, ಮುಸ್ಲಿಮರೆಲ್ಲರೂ ನಮಾಝಿಗೆ ಅಭಿಮುಖವಾಗಿಸುವ ಕಾಬಾ ಭವನಕ್ಕೆ ಪ್ರದಕ್ಷಿಣೆಯಿಂದ ಹಿಡಿದು, ಹಾಜಿರಾರು ನೀರಿಗಾಗಿ ಓಡಾಡಿದ ಸಫಾ ಮರ್ವ ಬೆಟ್ಟಗಳಿಗೆ ಏರುವ ಎಲ್ಲಾ ವಿಧಿಗಳೂ ಹಜ್ಜ್ ನ ಭಾಗಗಳಾಗಿವೆ. ಹಜ್ ಯಾತ್ರ ನಿರ್ವಹಣೆ ಸಂದರ್ಭದಲ್ಲಿ ಹೃದಯಾಂತರಾಳದಿಂದ ತಮ್ಮ ಗತ ತಪ್ಪುಗಳ ಬಗ್ಗೆ ಪಶ್ಚಾತ್ತಾಪ ಪಟ್ಟು ರೋದಿಸಿ ಕ್ಷಮೆಯಾಚಿ ಪ್ರಾರ್ಥಿಸಿದರೆ ದೇವನು ಪ್ರಾಥನೆಯನ್ನು ಸ್ವೀಕರಿಸಿ ಪರಿಶುದ್ಧಗೊಳಿಸುತ್ತಾನೆಯೆಂದು ಪ್ರವಾದಿ ನುಡಿದಿರುತ್ತಾರೆ. ವಿವಿಧ ವಿಧಿಗಳ ಮೂಲಕ ತನ್ನನ್ನು ಸಂಸ್ಕರಿಸಿ, ದೇವವಿಶ್ವಾಸ ಮತ್ತು ದೇವ ಭಯ ವೃದ್ಧಿಸಿ ಹೊಸ ಜೀವನ ಆರಂಭಿಸುವ ಬದ್ಧತೆಯೊಂದಿಗೆ ಹಾಜಿಗಳು ಮರಳುತ್ತಾರೆ.

ಗದಗ 06/06/2025ಬರಕತ ಅಲಿ ಮುಲ್ಲಾ ನಗರಸಭಾ ಸದಸ್ಯರು ಗದಗ- ಬೆಟಗೇರಿ.ಫೋ :- 98863 50112