
*ಕಾಮಗಾರಿ ಮಾಡದೆ ಬೋಗಸ್ ಬಿಲ್ಲ ತೆಗೆದಿದ್ದಾರೆ: ಫಕ್ಕೀರೇಶ ನಡುವಿನಕೇರಿ*
ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿಯ ಅನುದಾನದಲ್ಲಿ ನೆಡೆಯುವ ಕಾಮಗಾರಿಗಳಲ್ಲಿ ಒಬ್ಬರೇ ಗುತ್ತಿಗೆದಾರರ ಹೆಸರಲ್ಲಿ ಒಂದು ಕೋಟಿಗೂ ಅಧಿಕ ರೂ.ಮೊತ್ತದ ಕಾಮಗಾರಿಯ ಅಗ್ರಿಮೆಂಟ್ ಆಗಿರುವುದಕ್ಕೆ ಕಾರಣ ಏನು ಇಲ್ಲದೆ ಈ ಕಾಮಗಾರಿಗಳಲ್ಲಿ ಕೆಲಸ ಮಾಡದೆ ಬಿಲ್ಲ್ ತೆಗೆದಿದ್ದಾರೆ ಎಂದು ಕೆಡಿಪಿ ನಾಮನಿರ್ದೇಶತ ಸದಸ್ಯರಾದ ಫಕ್ಕೀರೇಶ ನಡುವಿನಕೇರಿ ಅವರು ಆರೋಪ ಮಾಡಿದರು.

ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಕಳೆದ ಶುಕ್ರವಾರ ಸಾಮರ್ಥ ಸೌಧದಲ್ಲಿ ನೆಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯತಿ ವಿಷಯ ಬಂದಾಗ ಕೆಡಿಪಿ ಸಭೆಗೆ ಹೊಸದಾಗಿ ನಾಮ ನಿರ್ಧೇಶತ ಸದಸ್ಯರಾದ ಫಕ್ಕೀರೇಶ ನಡುವಿನಕೇರಿ ಅವರು ಆರೋಪ ಮಾಡಿದರು.ಈ ಸಂದರ್ಭದಲ್ಲಿ ಶಾಸಕರು ಅಗ್ರಿಮೆಂಟ್ ಕಾಮಗಾರಿಗಳ ಬಗ್ಗೆ ಸ್ಪಷ್ಟೀಕರಣ ನೀಡಲು ಮುಂದಾದರೂ ಕೂಡಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ವಲ್ಪ ಸಮಯ ವಾಕ್ ಸಮರ ಹಾಗೂ ಗೊಂದಲದ ವಾತಾವರಣ ಸೃಷ್ಟಿಯಾಯಿತು.

*ವರದಿ*✍️ಚಂದ್ರಶೇಖರ ಸೋಮಣ್ಣವರ
