ಮರಳು ಸಾಗಿಸುತ್ತಿದ್ದ ಟಿಪ್ಪರ್ ಗಾಡಿಗಳನ್ನು ವಶಕ್ಕೆ ಪಡೆದ ಪೋಲೀಸರು.

*ಮರಳು ಸಾಗಿಸುತ್ತಿದ್ದ ಟಿಪ್ಪರ್ ಗಾಡಿಗಳನ್ನು ವಶಕ್ಕೆ ಪಡೆದ ಪೋಲೀಸರು

*ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕುಂದ್ರಳ್ಳಿ ತಾಂಡಾ ಕಡೆಯಿಂದ ಲಕ್ಷ್ಮೇಶ್ವರ ಪಟ್ಟಣದ ಕಡೆಗೆ ಕಳೆದ ಗುರುವಾರ ನಸುಕಿನ ಜಾವ ಎರಡು ಟಿಪ್ಟರ್‌ಗಳಲ್ಲಿ ಯಾವುದೇ ಪರ್ಮಿಟ್ ಇಲ್ಲದೆ ಅಕ್ರಮವಾಗಿ ಎಲ್ಲಿಂದಲೊ ಮರಳನ್ನು ಕಳ್ಳತನ ಮಾಡಿ ಟಿಪ್ಪರ್‌ಗಳಲ್ಲಿ ಲೋಡ್ ಮಾಡಿಕೊಂಡು ಹೋಗುತ್ತಿರುವ ಸಮಯದಲ್ಲಿ ಪೊಲೀಸ್ ಜೀಪ್ ನೋಡಿ ಟಿಪ್ಪರ್‌ಗಳನ್ನು ರಸ್ತೆ ಬದಿ ನಿಲ್ಲಿಸಿ ಚಾಲಕರು ಪರಾರಿ ಆದ ಘಟನೆ ಜರುಗಿದೆ.

ಸಂದರ್ಭದಲ್ಲಿ ಎರಡು ಟಿಪ್ಪರಗಳನ್ನು ಪಿಎಸ್ಐ ಚನ್ನಯ್ಯ ದೇವೂರು ಇವರು ತಮ್ಮ ವಶಕ್ಕೆ ಪಡೆದುಕೊಂಡಿದ್ದು ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಕೆಎ-25 ಎಬಿ-7935 ಹಾಗೂ ಕೆಎ-25 ಡಿ-8540 ಈ ಎರಡು ವಾಹನ ಚಾಲಕರ ಮತ್ತು ಮಾಲೀಕರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳುವ ಮೂಲಕ ತನಿಖೆಯನ್ನು ಕೈಗೊಂಡಿದ್ದಾರೆ.

*ವರದಿ*✍️ಚಂದ್ರಶೇಖರ ಸೋಮಣ್ಣವರ

Leave a Reply

Your email address will not be published. Required fields are marked *