
*ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯು ಯಾರಿಂದಲೂ ಕದಿಯಲಾಗದ ಆಸ್ತಿಯಾಗಿದೆ. ಮಾದಿಗ ಸಮಾಜದ ಬಂಧುಗಳು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿ ಮಾಡಿ ಸಾಧನೆ ಮಾಡಲು ಬೆನ್ನು ತಟ್ಟಿ ಪ್ರೋತ್ಸಾಹಿಸಿ: ಅರಕಲವಾಡಿ ನಾಗೇಂದ್ರ ಮನವಿ.

ಆದಿಜಾಂಬವ ಮಾದಿಗ ಸಮಾಜದ ಬಂಧುಗಳು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿ ಮಾಡಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬಂದು ಸಾಧನೆ ಮಾಡಿ ಮುನ್ನಡೆಯುವಂತೆ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು ಎಂದು ನಾಡಿನ ಖ್ಯಾತ ವಿಚಾರವಾದಿಗಳು ಹಾಗೂ ಚಿಂತಕರಾದ ಅರಕಲವಾಡಿ ನಾಗೇಂದ್ರ ಹೇಳಿದರು.ಅವರು ಕೃಷ್ಣರಾಜಪೇಟೆ ಪಟ್ಟಣದ ರಾಮದಾಸ್ ಹೋಟೇಲ್ ನ ಸಭಾಂಗಣದಲ್ಲಿ ಕೆ.ಆರ್.ಪೇಟೆ ತಾಲೂಕಿನ ಮಾದಿಗರ ಕ್ಷೇಮಾಭಿವೃದ್ಧಿ ಸಮಿತಿ ಹಾಗೂ ತೇಗನಹಳ್ಳಿಯ ಆದಿ ಜಾಂಬವ ಯುವ ಕ್ಷೇಮಾಭಿವೃದ್ಧಿ ಸೇವಾ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಮೀಸಲಾತಿಯಲ್ಲಿ ಒಳ ಮೀಸಲಾತಿ ಮಹತ್ವ ಮತ್ತು ಶಿಕ್ಷಣದ ಮೂಲಕ ನಿರುದ್ಯೋಗ ಹೋಗಲಾಡಿಸುವುದು ಹೇಗೆ ಎಂಬ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು
.ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳು ಸಮೀಪಿಸುತ್ತಿದ್ದರು . ಬಿಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಆಶಯಗಳು ಇಂದಿಗೂ ಸಮರ್ಥವಾಗಿ ಜಾರಿಯಲಿಲ್ಲ ಆದಿ ಜಾಂಬವ ಮಾದಿಗರ ಸಮುದಾಯದ ವಿದ್ಯಾವಂತ ನಿರುದ್ಯೋಗಿ ಯುವ ಜನರಿಗೆ ಮೀಸಲಾತಿಯ ಪ್ರಯೋಜನ ಹಾಗೂ ಒಳ ಮೀಸಲಾತಿಯು ಸಮರ್ಪಕವಾಗಿ ಜಾರಿಯಾಗಿಲ್ಲದಿರುವುದು ವಿಷಾಧಕರ ಸಂಗತಿಯಾಗಿದೆ. ಮಾದಿಗ ಸಮಾಜದ ಬಂಧುಗಳು ಶಿಕ್ಷಣದ ಮಹತ್ವವನ್ನು ತಿಳಿಯದೇ, ಸಮಾಜದ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯನ್ನು ನೀಡದೆ ಕೂಲಿ ಕೆಲಸಕ್ಕೆ ಹಚ್ಚಿ ನಿರಂತರವಾಗಿ ನಮ್ಮನ್ನು ನಾವೇ ಶೋಷಣೆ ಮಾಡಿಕೊಂಡು ಆತ್ಮ ವಂಚನೆ ಮಾಡಿಕೊಳ್ಳುತ್ತಿರುವುದೇ ಮುಖ್ಯ ಕಾರಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ನಾಗೇಂದ್ರ ಸಮಾಜದ ಬಂಧುಗಳು ತಮ್ಮ ಹೊಟ್ಟೆ ಬಟ್ಟೆಯನ್ನು ಕಟ್ಟಿಯಾದರೂ, ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿ ಮಾಡಿಸಿ ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯ ಮೂಲಕ ಸಾಧನೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಕೈಮುಗಿದು ಮನವಿ ಮಾಡಿದರು.
. ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯು ಯಾರಿಂದಲೂ ಕದಿಯಲಾಗದ ಆಸ್ತಿಯಾಗಿರುವುದರಿಂದ ನಾವು ನಮ್ಮ ಸಮಾಜವನ್ನು ಕೆಳ ಸ್ಥರದಿಂದ ಮೇಲಕ್ಕೆ ಎತ್ತಿ ಸಮಾಜದ ಮುಖ್ಯ ವಾಹಿನಿಗೆ ತರಲು ಅಕ್ಷರದ ಶಕ್ತಿಯು ಪ್ರಬಲವಾದ ಅಸ್ತ್ರವಾಗಿದೆ ಎಂಬ ಸತ್ಯವನ್ನು ಅರಿಯಬೇಕು ನಮ್ಮಲ್ಲಿನ ಕೀಳರಿಮೆಯನ್ನು ಹೋಗಲಾಡಿಸಿಕೊಂಡು ಆತ್ಮವಿಶ್ವಾಸದಿಂದ ಸಮಾಜದಲ್ಲಿ ಎದುರಾಗುವ ಅಡೆ-ತಡೆಗಳು ಹಾಗೂ ನೋವು ನಲಿವುಗಳನ್ನು ಎದುರಿಸಿ, ನೋವನ್ನು ನುಂಗಿಕೊಂಡು ಸಮಾಜಮುಖಿಯಾಗಿ ಹೆಜ್ಜೆ ಹಾಕುವ ಮೂಲಕ ಸಾಧನೆ ಮಾಡಬೇಕು ಎಂದು ನಾಗೇಂದ್ರ ಕರೆ ನೀಡಿದರು.ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕರಾದ ಡಾಲು ರವಿ ಮಾಜ ಸೇವಕ ಹಾಗೂ ರಾಜ್ಯ ಆರ್‌ಟಿಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾದಿಗ ಸಮುದಾಯದ ಬಂಧುಗಳು ಕಡ್ಡಾಯವಾಗಿ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಮೂಲಕ ಸಾಧನೆ ಮಾಡಬೇಕು. ಸಂವಿಧಾನ ಬದ್ಧವಾಗಿ ದೊರೆಯುವ ಮೀಸಲಾತಿ ಸೇರಿದಂತೆ ಒಳ ಮೀಸಲಾತಿಯ ಎಲ್ಲಾ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸರ್ಕಾರಿ ಉದ್ಯೋಗವನ್ನು ಪಡೆದುಕೊಂಡು ಸ್ವಾವಲಂಭಿಗಳಾಗಿ ಪ್ರಗತಿಯ ದಿಕ್ಕಿನತ ಸಾಗಬೇಕು ಎಂದು ಕರೆ ನೀಡಿದರು.ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿರುವ ವಿದ್ಯಾರ್ಥಿಗಳಿಗೆ ತೇಗನಹಳ್ಳಿಯ ಆದಿ ಜಾಂಬವ ಯುವ ಕ್ಷೇಮಾಭಿವೃದ್ಧಿ ಸೇವಾ ಟ್ರಸ್ಟ್ ಅಧ್ಯಕ್ಷ ಟಿಸಿ ರಘು ಹಾಗೂ ಕೆ.ಆರ್.ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಸ್.ಎಂ. ಮಂಜುನಾಥಸ್ವಾಮಿ ನೆನಪಿನ ಕಾಣಿಕೆಯನ್ನು ವಿತರಿಸಿ ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಆದಿ ಜಾಂಬವ ಯುವ ಕ್ಷೇಮಾಭಿವೃದ್ಧಿ ಸೇವಾ ಟ್ರಸ್ಟ್ ಅಧ್ಯಕ್ಷ ರಘು, ಉಪಾಧ್ಯಕ್ಷ ನಾಗೇಶ್, ಗೌರವಾಧ್ಯಕ್ಷರಾದ ದಾಸಯ್ಯ ಕಾರ್ಯದರ್ಶಿ ಟಿ.ಜೆ.ಉಮೇಶ್, ಖಜಾಂಚಿ ವಿನೋದ್ ಕುಮಾರ್ ಆಡಳಿತ ಮಂಡಳಿಯ ನಿರ್ದೇಶಕರಾದ ಮರಿಯಯ್ಯ, ಸತೀಶ್, ರಮೇಶ್, ಪ್ರಮೋದ, ಸತೀಶ್, ಅರುಣ್ ಕುಮಾರ್, ಹರಿಹರಪುರ ನಿತಿನ್ ಶರ್ಮಾ, ಯಗಚಗುಪ್ಪೆ ಸೋಮಶೇಖರ್, ಮಾಜಿ ಸೈನಿಕರಾದ ಜಯರಾಮ್, ಸ್ಟುಡಿಯೋ ಜ್ಞಾನೇಶ್, ಹೊಸಹೊಳಲಿನ ಮೊಟ್ಟೆ ಹರೀಶ್, ಕಾಂತರಾಜು, ತೇಗನಹಳ್ಳಿ ಕರ್ಣ, ಮೂಡನಹಳ್ಳಿ ವೆಂಕಟೇಶ್ ಹರಿಹರಪುರ ಶಿವಕುಮಾರ್, ಬಂಡಿಹೊಳೆ ಗ್ರಾಮ ಪಂಚಾಯಿತಿ ಸದಸ್ಯ ಬಿ.ಬಿ. ಕಾವಲು ಮೋಹನ್, ಹೊಸ ಹೊಳಲು ಮಂಜುನಾಥ್ ಸೇರಿದಂತೆ ಡಾ.ಬಾಬೂ ಜಗಜೀವನ್ ರಾಮ್ ಒಕ್ಕೂಟದ ಪದಾಧಿಕಾರಿಗಳು, ಕರ್ನಾಟಕ ಮಾದಿಗ ದಂಡೋರ ಸಮಿತಿಯ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ಮಾತಂಗಿ ಮಾದಿಗ ಸಮಾಜ ಪರಿವರ್ತನಾ ವೇದಿಕೆಯ ಸದಸ್ಯರುಗಳು, ಆದಿ ಜಾಂಬವ ಯುವ ಕ್ಷೇಮಾಭಿವೃದ್ಧಿ ಸೇವಾ ಟ್ರಸ್ಟ್, ವಿಶ್ವಜ್ಞಾನಿ ಡಾ. ಬಿ.ಆರ್.ಅಂಬೇಡ್ಕರ್ ಸೇವಾ ಸಮಿತಿಯ ಪದಾಧಿಕಾರಿಗಳು, ಸ್ವ-ಸಹಾಯ ಸಂಘಗಳ ಪ್ರತಿನಿಧಿಗಳು, ಯುವಕರು ಹಾಗೂ ಸಮಾಜದ ಯಜಮಾನರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕೃಷ್ಣರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಸುರೇಶ್ ಸ್ವಾಗತಿಸಿದರು, ರಾಜ್ಯ ಉಚ್ಚ ನ್ಯಾಯಾಲಯದ ವಕೀಲರಾದ ಮೂಡನಹಳ್ಳಿ ಎಂ.ಕೆ.ಶಂಕರ್ ವಂದಿಸಿದರೆ ಎಂ.ಎಲ್.ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು. ಮಾದಿಗರ ಕ್ಷೇಮಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಹಾಡಿದ ಕ್ರಾಂತಿ ಗೀತೆಗಳು ಗಮನ ಸೆಳೆದವು.

*ವರದಿ.ಎಂ.ಕೆ.ಹರಿಚರಣ್ ತಿಲಕ್, ಕೃಷ್ಣರಾಜಪೇಟೆ, ಮಂಡ್ಯ*.
