
ಗದಗ : ಗಾನ ಗಂಧರ್ವ ಕಲಾ ಟ್ರಸ್ಟ್ (ರಿ). ಗದಗ- ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಬೆಂಗಳೂರು ಸಹಕಾರದೊಂದಿಗೆ ಸೆ .17 ರಂದು ಸಂಜೆ 6 ಗಂಟೆಗೆ ವಿವೇಕಾನಂದ ಬಡಾವಣೆಯ ನಾದಶ್ರೀ ಸಂಗೀತ ಪಾಠಶಾಲೆ ಆವರಣದಲ್ಲಿ ನಡೆಯಲಿದೆ.ಪೂಜ್ಯ. ಪುಟ್ಟರಾಜ ಗವಾಯಿಗಳವರ 15ನೇ ಪುಣ್ಯಾರಾಧನೆ ಹಾಗೂ ನಾದಶ್ರೀ ಸಂಗೀತ ಪಾಠಶಾಲೆಯ 2ನೇ ವಾರ್ಷಿಕೋತ್ಸವದ ದಿವ್ಯ ಸಾನಿದ್ಯವನ್ನು .ಮ. ನಿ. ಪ್ರ. ಅಭಿನವ ಡಾ. ಕೊಟ್ಟೂರೇಶ್ವರ ಮಹಾಸ್ವಾಮಿಗಳು ಹಠಯೋಗಿ ಕೊಟ್ಟೂರೇಶ್ವರ ಮಠ, ಸುಕ್ಷೇತ್ರ ಹರ್ಲಾಪುರ ನಡೆಯಲಿದೆ.ಮುಂಡರಗಿ ಬ್ರಹನ್ಮಠದ ಡಾ. ವೀರೇಶ್ವರ ಶರಣರ ಸಮ್ಮುಖದಲ್ಲಿಗಾನಗಂಧರ್ವ ಕಲಾ ಟ್ರಸ್ಟ್ ಬಿ. ಎಂ. ಪಂಚಾಕ್ಷರಿ ಅಧ್ಯಕ್ಷ ಇವರ ಅಧ್ಯಕ್ಷತೆ ವಹಿಸುವರು.ರಾಜೀವ ಗಾಂಧಿ ನಗರ ಪೊಲೀಸ್ ಠಾಣೆಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪಿ ಎಸ್ ಐ . ಮಾರುತಿ. ಎಸ್. ಜೋಗದಂಡಕರ ಕಾರ್ಯಕ್ರಮ ಉದ್ಘಾಟನೆ ಮಾಡಲ್ಲಿದ್ದಾರೆ.ಕಾರ್ಯಕ್ರಮದ ಅತಿಥಿಗಗಳಾಗಿ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ, ಡಾ. ಬಸವರಾಜ ಬಳ್ಳಾರಿ.ಗಣ್ಯ ವರ್ತಕಶರಣಪ್ಪ,ಸಂಗಪ್ಪ ಗುಡಿಮನಿ, ನವರತ್ನ ಜ್ಯೂವೆಲರ್ಸ್ ಮಾಲೀಕ ಸಿದ್ದಲಿಂಗೇಶ ಮುರಶಿಳ್ಳಿನ ಆಗಮಿಸುವರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಉಮೇಶ ಸಿ. ಕಪ್ಪತ್ತನವರ, ಶ ದ್ರುವಕುಮಾರ ಬಸಪ್ಪ ಮೆಣಸಿನಕಾಯಿ, ಅಂಬಾದಾಸ ಜಮಾದಾರರಿಗೆ ಸನ್ಮಾನ ನಡೆಯಲಿದೆ.ಹೊಸಪೇಟೆ ಗುಂಡಿಭಾರತ ಗಾಯನ,ಪುಟ್ಟರಾಜೇಶ ಗುತ್ತರಗಿ. ಪುಣೆಯವರಿಂದ ತಬಲಾ ಹಾಗೂ ಹಾರ್ಮೋನಿಯಂ ಸೇವೆ, ಗದಗ ಹರ್ಷತ್ ಕುಮಾರ್ ಸ್ವರನಮನ ಕಾರ್ಯಕ್ರಮ ನಡೆಸಿಕೊಡುವರು. ಗದಗ ಹರ್ಷತ್ ಕುಮಾರ್ ಎಂ. ಕಲಕಂಬಿ ಭರತನಾಟ್ಯ, ನಾದಶ್ರೀ ಸಂಗೀತ ಪಾಠಶಾಲೆ ಮಕ್ಕಳಿಂದ ಹಾಡು – ನೃತ್ಯಗಳ ಪ್ರದರ್ಶನ ನಡೆಯಲಿದೆ ಎಂದು ಗಾನಗಂಧರ್ವ ಕಲಾಟ್ರಸ್ಟ್ ಕಾರ್ಯದರ್ಶಿ ಸಿದ್ದಲಿಂಗಯ್ಯ ಶಾಸ್ತ್ರಿ ಎಸ್. ಗಡ್ಡದಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
