ನೀರಾವರಿ ಹೋರಾಟ ಕ್ಷೇತ್ರಕ್ಕೆ ನಾಯನಹಳ್ಳಿ ಆರ್.ಆಂಜನೇಯರೆಡ್ಡಿ , ಕೃಷಿ ಕ್ಷೇತ್ರದಲ್ಲಿ ಪ್ರಗತಿಪರ ರೈತರಾದ ಮೇಲೂರು ಬಿ.ಎನ್.ಸಚಿನ್ ಹಾಗು ಕೋಲಾರ ಸಿ.ಎನ್.ಹರೀಶ್(ಸಿಎಂಆರ್) :

ಶಿಡ್ಲಘಟ್ಟ : ಕೃಷಿ, ನೀರಾವರಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ “ನಾಡಪ್ರಭು ಕೆಂಪೇಗೌಡ ಫೌಂಡೇಷನ್ ” ವತಿಯಿಂದ ನೀಡಲಾಗುವ ಬೆಂಗಳೂರು ನಿರ್ಮಾತೃ ‘ನಾಡಪ್ರಭು ಕೆಂಪೇಗೌಡ ಪ್ರಶಸ್ತಿ’ ಗೆ ಮೂವರು ಭಾಜನರಾಗಿದ್ದು ಅರಮನೆ ಮೈದಾನದಲ್ಲಿ ನಡೆದ ಕೆಂಪೇಗೌಡ ಜಯಂತಿಯಲ್ಲಿ ರಾಜ್ಯಾಪಾಲರಾದ ಥಾವರ್ ಚಂದ್ ಗೆಹಲೋಥ್ ಅವರು ಪ್ರಶಸ್ತಿ ಪ್ರಧಾನ ಮಾಡಿದರು.
ಬೆಂಗಳೂರು ಅರಮನೆ ಮೈದಾನದಲ್ಲಿ ನಾಡಪ್ರಭು ಕೆಂಪೇಗೌಡ ಪೌಂಡೇಶನ್ ವತಿಯಿಂದ ಕೋಲಾರ ಹಾಗು ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದ ಮೂರು ಜನರಿಗೆ ಕೃಷಿ ಮತ್ತು ನೀರಾವರಿ ಹೋರಾಟಗಾರರಿಗೆ ರಾಜ್ಯ ಮಟ್ಟದ ಕೆಂಪೇಗೌಡ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.
ಚಿಕ್ಕಬಳ್ಳಾಪುರ,ಕೋಲಾರ ಹಾಗು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸಲು ಕಳೆದ ಹಲವಾರು ದಶಕಗಳಿಂದ ಹೋರಾಟ ನಡೆಸುತ್ತಿರುವ ನಾಯನಹಳ್ಳಿ ಆರ್.ಆಂಜನೇಯರೆಡ್ಡಿ , ಕೃಷಿ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕು ಮೇಲೂರು ಗ್ರಾಮದ ವಿನೂತನ ತಂತ್ರಜ್ಞಾನ ಪ್ರಗತಿಪರ ರೈತರಾದ ಬಿ.ಎನ್.ಸಚಿನ್ ಹಾಗು ಕೋಲಾರ ಜಿಲ್ಲೆಯ ಸಿ.ಎನ್.ಹರೀಶ್ (ಸಿಎಂಆರ್) ಪ್ರತಿಷ್ಠಿತ ನಾಡಪ್ರಭು ಕೆಂಪೇಗೌಡ ಜಿಲ್ಲಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಪ್ರಶಸ್ತಿಯು 25 ಸಾವಿರ ರೂ.ಗಳ ನಗದು, ಬೆಳ್ಳಿ ಪದಕ ಹಾಗು ಸ್ಮರಣ ಸಂಚಿಕೆಯನ್ನು ಒಳಗೊಂಡಿದ್ದು ಇತ್ತೀಚಿಗೆ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ದಿನಾಚರಣೆಯಂದು ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ ಸಭಾಂಗಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಆದಿಚುಂಚನಗಿರಿ ಪೀಠಾದ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ,ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ಬಿಜೆಪಿಯ ರಾಜ್ಯಾದ್ಯಕ್ಷರಾದ

ಬಿ.ವಿ.ವಿಜಯೇಂದ್ರ ,ವಿಪಕ್ಷ ನಾಯಕ ಆರ್ ಅಶೋಕ್ , ಮಾಜಿ ಉಪಮುಖ್ಯಮಂತ್ರಿ ಹಾಗು ಶಾಸಕ ಡಾ.ಸಿ.ಎನ್.ಅಶ್ವತ್ ನಾರಾಯಣ ಸೇರಿದಂತೆ ಹಲವು ಗಣ್ಯರಿಂದ ಪ್ರಶಸ್ತಿ ಪ್ರದಾನ ನಡೆಯಿತು.
ಪ್ರತಿಷ್ಠಿತ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ವಿಜೇತರಾದ