ಕುರಿ ಕಾಯುವವರೆಗೂ ಹಿತರಕ್ಷಣೆ ಕಾಯ್ದೆಯನ್ನು ರೂಪಿಸಿ ಜಾರಿಗೆ ತರಲು ಬೃಹತ್ ಪ್ರತಿಭಟನೆ.

*ಕುರಿ ಕಾಯುವವರೆಗೂ ಹಿತರಕ್ಷಣೆ ಕಾಯ್ದೆಯನ್ನು ರೂಪಿಸಿ ಜಾರಿಗೆ ತರಲು ಬೃಹತ್ ಪ್ರತಿಭಟನೆ.**500ಕ್ಕೂ ಹೆಚ್ಚು ಕುರಿಗಳೊಂದಿಗೆ ಪ್ರಮುಖ ರಸ್ತೆ ಮುಖಾಂತರ ಪ್ರತಿಭಟನೆ…

*ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯಲ್ಲಿ ಶೋಷಿತ ಸಮುದಾಯಗಳ ಪರ ಹಾಗೂ ವಿವಿಧ ವೃತ್ತಿಪರರ ಹಿತ ರಕ್ಷಣೆಗೆ ವಿವಿಧ ವಿಶೇಷ ಕಾಯ್ದೆಗಳನ್ನು ಜಾರಿ ಮಾಡಿ ಅವರ ಹಿತ ರಕ್ಷಣೆ ಮಾಡಿದ್ದು ಅದೇ ರೀತಿ ಕುರಿಗಾರಿಕೆ ಮೇಲೆ ಉಪಜೀವನ ನಡೆಸುತ್ತಿರುವ ಕುರಿಗಾರರ ಮೇಲೆ ಆಗುತ್ತಿರುವ ದೌರ್ಜನಗಳು ಹಲ್ಲೆ, ನಿಂದನೆ ಪ್ರಾಣಪಾಯ, ಕಳ್ಳತನ,ಅತ್ಯಾಚಾರ, ಇತ್ಯಾದಿ ದುಷ್ಕೃತ್ಯಗಳು ಕಡಿವಾಣ ಹಾಕಲು ಕುರಿಗಾಹಿಗಳ ಹಿತರಕ್ಷನೆ ಕಾಯ್ದೆಯನ್ನು ರೂಪಿಸಿ ಜಾರಿಗೆ ತರಬೇಕೆಂದು ಬನಹಟ್ಟಿಯ ಈಶ್ವರಲಿಂಗ ಮೈದಾನದಿಂದ ಸಮಸ್ತ ಕುರುಬ ಸಮಾಜ ಹಾಗೂ ಕುರಿಗಾಹಿಗಳು ಜೊತೆಗೆ 500 ಕ್ಕೂ ಹೆಚ್ಚಿನ ಕುರಿಗಳೊಂದಿಗೆ ಪ್ರಮುಖ ರಸ್ತೆ ಮುಖಾಂತರ ಪ್ರತಿಭಟನೆ ಮಾಡಿದರು.

ಇಡೀ ರಾಜ್ಯದಲ್ಲಿ ಕುರಿಗಾರರ ಮೇಲೆ ನಿರಂತರವಾಗಿ ಹಲ್ಲೆ , ಜೀವ ಬೆದರಿಕೆ.ಕೊಲೆ, ಅತ್ಯಾಚಾರ,ಕುರಿ ಕಳ್ಳತನ,ಅಧಿಕಾರಿಗಳಿಂದ ನಿರಂತರ ಕಿರುಕುಳ,ದೌರ್ಜನ್ಯಗಳು ನಡೆಯುತ್ತಿವೆ, ಇತ್ಯಾದಿ ದೋಸ್ತ್ ಕೃತ್ಯಗಳ ಕಡಿವಾಳಕ್ಕಾಗಿ ಸಾಂಪ್ರದಾಯಿಕ ಕುರಿ ಗಾಯಗಳ ಹಿತ ರಕ್ತ ಕಾಯ್ದೆಯನ್ನು ರೂಪಿಸಿ ಜಾರಿಗೆ ತರಬೇಕೆಂದು ಯಲ್ಲಪ್ಪ ಹೆಗಡೆ ಕುರಿಗಾಹಿಗಳ ಪರವಾಗಿ ಆಗ್ರಹಿಸಿದರು. ಈ ಪ್ರತಿಭಟನೆಯಲ್ಲಿ ಇದು ಅಷ್ಟೇ ಅಲ್ಲದೆ ತಹಸಿಲ್ದಾರರ ಕಚೇರಿಯ ಮುಂದೆ ಕುರಿಗಾಹಿಗಳನ್ನು ಮಾತ್ರ ಒಳಗೆ ಬಿಡುತ್ತೇವೆ.ಕುರಿಗಳನ್ನು ಒಳಗೆ ಬಿಡುವುದಿಲ್ಲ ಎಂದು ಪೊಲೀಸ್ ಇಲಾಖೆ ಕುರಿಗಳನ್ನು ಕಚೇರಿಯ ಗೇಟ್ ಹೊರಗಡೆ ನಿಲ್ಲಿಸಿದರು.ಕುರಿ ಕಾಯಿಗಳು ದಿನನಿತ್ಯ ಕುರಿಗಳನ್ನು ನಂಬಿಕೊಂಡು ಉಪಜೀವನ ನಡೆಸುತ್ತಿದ್ದೇವೆ. ಕುರಿಗಳನ್ನು ಹೊರಗೆ ಇಟ್ಟು ನಾವು ಪ್ರತಿಭಟನೆ ಮಾಡಿ ವ್ಯರ್ಥವಾಗುತ್ತದೆ ಅಧಿಕಾರಿಗಳು ಕುರಿಗಳನ್ನು ಇಲ್ಲಿಯೇ ಒಳಗಡೆ ಬಿಡದೆ ಹೋದರೆ ನಾಳೆ ದಿನ ಫಾರೆಸ್ಟ್ ಗುಡ್ -ಗಾಡುಗಳಲ್ಲಿ ಮೇಯಿಸಲು ಹೇಗೆ ಬಿಡುತ್ತೀರಿ ಎಂಬ ಹಠ ಹಿಡಿದರು, ಸ್ಥಳಕ್ಕೆ ದೌಡಾಯಿಸಿದ ಜಮಖಂಡಿಯ ಡಿ ವಾಯ್ ಎಸ್ ಪಿ,ಸಾಹೇಬರು ಮತ್ತು ದಂಡಾಧಿಕಾರಿಗಳಿಗೆ ಕುರುಬ ಸಮಾಜದ ಮುಖಂಡರು ಮನವರಿಕೆ ಮಾಡಿ ಕುರಿಗಳನ್ನು ಒಳಗಡೆ ಬಿಡಿಸಿದರು.

ನಂತರ ಬೃಹತ್ ಪ್ರತಿಭಟನೆ ಮಾಡಿ ಸರ್ಕಾರವು 2024 25 ನೇ ಸಾಲಿನ ಬಜೆಟ್ ನಲ್ಲಿ ಕುರಿ ಗಾಯಗಳಿಗೆ ಸಂಬಂಧಿಸಿದಂತೆ ದೌರ್ಜನ್ಯ ತಡೆ ಕಾಯ್ದೆ ರೂಪಿಸಲು ಪ್ರಸ್ತಾಪಿಸಿದ್ದು ಅದರಂತೆ ಈಗ ಸರ್ಕಾರದ ಮುಂದೆ ದಿ ಟ್ರೆಡಿಷನಲ್ ಮ್ಯಾಜಿತರಿ ಶಪರ್ಡ್ಸ್ (ಪ್ರೊಟೆಕ್ಷನ್ ಅಗಿನೆಸ್ಟ್ ಅಟ್ರಾಕ್ಟಿಕ್ಸ್ ಅಂಡ್ ಪ್ರಾವಿಜನ್ ಆಫ್ ವೆಲ್ಫೇರ್ಫ) ಬಿಲ್- 2025 (ರಿಪೋರ್ಟ್ ಬಿ ಫೈಲ್ ಇನ್ 16 ಮಾರ್ಚ್ 2025) ಮಸೂದೆ ಇರುವುದನ್ನು ನಾವು ಸ್ವಾಗತಿಸುತ್ತೇವೆ ಈ ಮಸೂದೆಯನ್ನು ಸರ್ಕಾರವು ಮುಂದಿನ ಅಧಿವೇಶನದಲ್ಲಿ ಕಾಯ್ದೆಯಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಬೃಹತ್ ಪ್ರತಿಭಟನೆ ಮಾಡಿ ರಬಕವಿ-ಬನಹಟ್ಟಿ ತಾಲೂಕಾ ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಕಳಿಸಿಕೊಡುತ್ತೇವೆ ಎಂದರು.

.ಈ ಸಂದರ್ಭದಲ್ಲಿ ಯಲ್ಲಪ್ಪ ಹೆಗಡೆ. ರಂಗನಗೌಡ ಪಾಟೀಲ್. ಮಲ್ಲಪ್ಪ ಸಿಂಗಾಡಿ. ಮಾಳು ಹಿಪ್ಪರಗಿ. ಹೊನ್ನಪ್ಪ ಬಿರಡಿ. ಗಂಗಾಧರ್ ಮೇಟಿ. ಪರಪ್ಪ ಪೂಜಾರಿ.ಶಂಕರ ಆಲ್ಕನೂರು. ಬೀರಪ್ಪ ಸಂಗೋಳ್ಳಿ. ಕರಿಯಪ್ಪ ಭುಜಂಗ. ಇನ್ನು ಅನೇಕ ಕುರುಬ,ಸಮಾಜದ,ಹಿರಿಯರು ಮುಖಂಡರು,ಯುವಕರು ಕುರಿಗಾಹಿಗಳು.ಪ್ರತಿಭಟನೆ ಉದ್ದಕ್ಕೂ ಬಿಗಿ ಭದ್ರತೆ ನೀಡಿದ ಪೊಲೀಸ ಜಮಖಂಡಿ ಡಿ ವೈ ಎಸ್ ಪಿ .ಶ್ರೀ ರೋಷನ್ ಸೈಯದ ಸರ್. ಬನಹಟ್ಟಿ ಸರ್ಕಲ್ ಸಿಪಿಐ ಶ್ರೀ ಸಂಜೀವ ಬಳಗಾರ.ಪಿಎಸ್ಐ ಗಳಾದ ಶ್ರೀಮತಿ ಶಾಂತಾ ಹಳ್ಳಿ.ಶ್ರೀ ಕಿರಣ ಸತ್ತಿಗೇರಿ ಹಾಗೂ ಶ್ರೀ ಹನುಮಂತ ಸಿಂಗನ್ನವರ್. ಇನ್ನು ಅನೇಕ ಪೊಲೀಸ್ ಸಿಬ್ಬಂದಿ ವರ್ಗದವರು ಹೋರಾಟಕ್ಕೆ ಅನುಕೂಲ ಮಾಡಿಕೊಟ್ಟರು.

*ವರದಿ:-**ಶಾನೂರ್ ಗೊಲಬಾಂವಿ*

Leave a Reply

Your email address will not be published. Required fields are marked *