
ಗೋವಾ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಹು.ಲಿ.ಅಮರನಾಥ್ ರವರ ಅಧ್ಯಕ್ಷತೆಯಲ್ಲಿ ಉತ್ತರ ಗೋವಾದ ಮಾಂಡ್ರೆಮ್ ನಲ್ಲಿರುವ ಮೊರ್ಜಿಮ್ ಗ್ರಾಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆಯನ್ನು ಹೊರ ರಾಜ್ಯವಾದ ಗೋವಾದಲ್ಲಿ ಪ್ರಾರ್ಥನೆ ಸಲ್ಲಿಸಿ ಕಾರ್ಯಕ್ರಮವನ್ನು ರಾಜ್ಯಾಧ್ಯಕ್ಷರಾದ ಹು.ಲಿ.ಅಮರನಾಥ್ ರವರು ಚಾಲನೆ ನೀಡಿ ಮಾತನಾಡಿ.
ಪ್ರತಿ ವರ್ಷ ಜುಲೈ 01ರಂದು ಕನ್ನಡ ಪತ್ರಿಕಾ ದಿನವನ್ನು ಆಚರಿಸಲಾಗುತ್ತದೆ. ಜರ್ಮನಿಯ ಹರ್ಮನ್ ಮೊಗ್ಲಿಂಗ್ ಎಂಬುವರು 1843 ಜುಲೈ ೦1 ರಂದು ಕನ್ನಡದ ಮೊದಲ ಪತ್ರಿಕೆ “ಮಂಗಳೂರು ಸಮಾಚಾರ” ಆರಂಭವಾದ ದಿನವನ್ನು ಸ್ಮರಿಸಲು ಈ ಆಚರಣೆ ಮಾಡಲಾಗುತ್ತದೆ. ಈ ಪತ್ರಿಕೆಯು ಕನ್ನಡ ಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಪತ್ರಿಕಾ ದಿನಾಚರಣೆಯು ಪತ್ರಿಕೋದ್ಯಮದ ಮಹತ್ವ ಮತ್ತು ಸಮಾಜದಲ್ಲಿ ಪತ್ರಿಕೆಗಳ ಪಾತ್ರವನ್ನು ನೆನಪಿಸುತ್ತದೆ ಎಂದು ತಿಳಿಸಿದರು.
*ಭಾರತದ ಮೊದಲ ಪತ್ರಿಕೆ*ಭಾರತದ ಮೊದಲ ಪತ್ರಿಕೆಯು ಜೇಮ್ಸ್ ಅಗಸ್ಟಸ್ ಹಿಕಿ ಅವರು 1780 ರಲ್ಲಿ ಸ್ಥಾಪಿಸಿದ ಬೆಂಗಾಲ್ ಗೆಜೆಟ್ ಆಗಿದೆ. ಇದನ್ನು “ಹಿಕೀಸ್ ಬೆಂಗಾಲ್ ಗೆಜೆಟ್” ಅಥವಾ “ಕಲ್ಕತ್ತಾ ಜನರಲ್ ಅಡ್ವರ್ಟೈಸರ್” ಎಂದೂ ಕರೆಯಲಾಗುತ್ತಿತ್ತು. ಇದು ಭಾರತದಲ್ಲಿ ಪ್ರಕಟವಾದ ಮೊದಲ ಇಂಗ್ಲಿಷ್ ಭಾಷೆಯ ವಾರಪತ್ರಿಕೆಯಾಗಿದೆ.
ನಂತರ ಮಂಡ್ಯ ಜಿಲ್ಲಾಧ್ಯಕ್ಷರಾದ ಕೃಷ್ಣಪ್ಪ ಮಾತನಾಡಿ ಪತ್ರಿಕೋದ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಪರಿಗಣಿಸಲ್ಪಟ್ಟಿದೆ. ಜನರು ಹಾಗೂ ಸರ್ಕಾರಗಳ ನಡುವೆ ಇರುವ ಮಹತ್ವದ ಕೊಂಡಿ ಎಂದರೆ ಅದು ಪತ್ರಿಕೋದ್ಯಮ. ಇಂದಿನ ಈ ಡಿಜಿಟಲ್ ಜಗತ್ತಿನಲ್ಲಿ ಪತ್ರಿಕೋದ್ಯಮ ಸೇರಿದಂತೆ ಎಲ್ಲವೂ ಡಿಜಿಟಲೀಕರಣವಾಗಿದೆ.
ಮೊಬೈಲ್‌ನಲ್ಲಿಯೇ ಎಲ್ಲಾ ಕ್ಷಣ ಕ್ಷಣದ ಸುದ್ದಿಗಳನ್ನು ನಾವು ತಿಳಿದುಕೊಳ್ಳಬಹುದಾಗಿದೆ. ಹೌದು ಈಗೀಗ ಸುದ್ದಿಗಳನ್ನು ತಿಳಿಯಬೇಕೆಂದರೆ ಪತ್ರಿಕೆ ಬೇಕೆಂದಿಲ್ಲ. ಕೈಯಲ್ಲಿ ಸ್ಮಾರ್ಟ್ ಫೋನ್ ಮತ್ತು ಇಂಟರ್ನೆಟ್ ಇದ್ದರೆ ಸಾಕು, ಕುಳಿತಲ್ಲಿಯೇ ಜಗತ್ತಿನಲ್ಲಿ ನಡೆಯುವ ಕ್ಷಣ ಕ್ಷಣದ ಸುದ್ದಿಯನ್ನು ತಿಳಿಯಬಹುದು.ಆದರೆ ಸ್ವಲ್ಪ ವರ್ಷಗಳ ಹಿಂದೆ ಜನ ಸುದ್ದಿಗಳನ್ನು ತಿಳಿಯಲು ಪತ್ರಿಕೆಯನ್ನೇ ಅವಲಂಬಿಸಿದ್ದರು.
ಹೀಗೆ ಪತ್ರಿಕೆಗಳು ವಹಿಸುವ ನಿರ್ಣಾಯಕ ಪಾತ್ರವನ್ನು ಜನರಿಗೆ ತಿಳಿಸಲು ಜನವರಿ 29 ರಂದು ಭಾರತೀಯ ಪತ್ರಿಕಾ ದಿನವನ್ನು ಆಚರಿಸಲಾಗುತ್ತದೆ.ಅದೇ ರೀತಿ ಜುಲೈ 01 ರಂದು ಕರ್ನಾಟಕದಲ್ಲಿ ಪತ್ರಿಕಾ ದಿನವನ್ನು (Press Day) ಆಚರಿಸಲಾಗುತ್ತದೆ ಎಂದು ತಿಳಿಸಿದರು

,ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಹು.ಲಿ.ಅಮರನಾಥ್, ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಪ್ರಕಾಶ್, ಹಾಗೂ ಪದಾಧಿಕಾರಿಗಳು ಮಂಡ್ಯ ಜಿಲ್ಲಾಧ್ಯಕ್ಷರಾದ ಕೃಷ್ಣಪ್ಪ , ಹಾಗೂ ಪದಾಧಿಕಾರಿಗಳು ಹಾಸನ ಜಿಲ್ಲಾ ರಘುಗೌಡ , ಹಾಗೂ ಪತ್ರಿಕಾ ಮಿತ್ರರು ಸಕಲೇಶಪುರ ತಾಲೂಕು ಅಧ್ಯಕ್ಷರಾದ ಬೈರಪ್ಪ ಸಂಕೇಶ್ವರ್,ಕೆ.ಆರ್.ಪೇಟೆ ತಾಲೂಕು ಅಧ್ಯಕ್ಷರಾದ ಲೋಕೇಶ್. ಪಾಂಡವಪುರ ತಾಲೂಕು ಪ್ರಧಾನ ಕಾರ್ಯದರ್ಶಿ ಕೃಷ್ಣ ಸೇರಿದಂತೆ ವಿವಿಧ ಜಿಲ್ಲೆ-ತಾಲ್ಲೋಕಿನ ಹಿರಿಯ ಪತ್ರಕರ್ತ ಸಂಮಿತ್ರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು,
