ಶಕ್ತಿ ಯೋಜನೆ : ವಿಶೇಷ ಲೇಖನಮಹಿಳೆಯರ ಸುಸ್ಥಿರ ಬದುಕಿಗೆ ‘ಶಕ್ತಿಯೇ ಆಕರ

ಗದಗ (ಕರ್ನಾಟಕ ವಾರ್ತೆ) ಜೂನ್ 2 : ಪಂಚ ಗ್ಯಾರಂಟಿಗಳಲ್ಲಿ ಕರ್ನಾಟಕದ ಬಡ ಮಧ್ಯಮ ಮಹಿಳೆರಿಗೆ “ಶಕ್ತಿ ಯೋಜನೆ ಮಹಿಳಾ ಕಾರ್ಮಿಕರು, ಮಹಿಳಾ ವ್ಯಾಪಾರಸ್ಥರು, ಕಾಯಿಪಲ್ಯ ಮಾರುವವರು ವಲಸೆ ಮಹಿಳಾ ಕಾರ್ಮಿಕರು, ರೈತ ಮಹಿಳೆಯರು ಗ್ರಾಮದಿಂದ ಸಿಟಿ ಮಾರ್ಕೆಟ್ ಬರುವವರು ಸಣ್ಣ ಪ್ರಮಾಣದ ವಸ್ತುಗಳ ವ್ಯಾಪಾರ ಮಾಡುವರು ಈ ಯೋಜನೆಯಿಂದ ಸಂತಸ ವ್ಯಕ್ತಪಡಿಸುತ್ತಾರೆ .ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಿಂದ ಸಮಾಜದಲ್ಲಿನ ಧನಾತ್ಮಕ ಬದಲಾವಣೆ ಆಗುತ್ತಿವೆ. ಮನೆಯ ನಾಲ್ಕು ಗೋಡೆಗಳ ಮಧ್ಯೆಯೇ ಕಾಲ ಕಳೆಯುತ್ತಿದ್ದ ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣ, ಉದ್ಯೋಗ, ಪ್ರವಾಸ ಮುಂತಾದ ಚಟುವಟಿಕೆಗಳನ್ನು ಕೈಗೊಳ್ಳಲು ಸಾಧ್ಯವಾಗಿದ್ದು ಶಕ್ತಿ ಯೋಜನೆ.ಪ್ರಯಾಣ ವೆಚ್ಚ ಉಳಿತಾಯದಿಂದ ಮಹಿಳೆಯರಿಗೆ ದೈನಂದಿನ ಬದುಕಿನಲ್ಲಿ ಮತ್ತಷ್ಟು ಬಲ ತುಂಬಿದೆ.ಪ್ರತಿ ದಿನ 50 ರಿಂದ 60 ಲಕ್ಷ ಮಹಿಳಾ ಪ್ರಯಾಣಿಕರಿಗೆ ಈ ಯೋಜನೆಯಿಂದ ಅನುಕೂಲವಾಗುತ್ತಿದೆ. ಮಹಿಳೆಯರು ದೂರದ ಪಟ್ಟಣಗಳಿಗೆ ತೆರಳಿ ಹೆಚ್ಚಿನ ಆದಾಯದ ಉದ್ಯೋಗ ಹೊಂದಲು ಸಹಕಾರಿಯಾಗಿದೆ.ಮಹಿಳೆಯರು ಉಳಿಸುತ್ತಿರುವ ಹಣವನ್ನು ಬಳಕೆ ಚಟುವಟಿಕೆಗಳಿಗೆ ಬಳಸಲಾಗುತ್ತಿದ್ದು, ಇದು ಸರಕಾರದ ಆದಾಯವಾಗಿ ಪರಿಣಮಿಸುತ್ತದೆ ಎಂದು ಅಧ್ಯಯನವು ತಿಳಿಸಿದೆ.ಶಕ್ತಿ ಯೋಜನೆಯು ಓದುವ ಹೆಣ್ಣು ಮಕ್ಕಳ ಕನಸುಗಳಿಗೆ ರೆಕ್ಕೆ ಮೂಡಿಸಿದೆ. ಮಹಿಳಾ ಸಬಲೀಕರಣಕ್ಕೆ ಪ್ರಮುಖ ಪಾತ್ರ ವಹಿಸಿದ. ಶಕ್ತಿ ಯೋಜನೆಗೆ ಜಿಲ್ಲೆಯಲ್ಲಿ 2023 ರ ಜೂನ್ 11 ರಂದು ಚಾಲನೆ ನೀಡಲಾಗಿದೆ.ಗದಗ ವಿಭಾಗದಲ್ಲಿ 2023 ರ ಜೂನ 11 ರಿಂದ ಮೇ 2025 ರವರೆಗೆ 9,82,79,355 ಮಹಿಳಾ ಪ್ರಯಾಣಿಕರಿಗೆ ರೂ.3,16,21,18,544 ಮೊತ್ತದ ಉಚಿತ ಪ್ರಯಾಣದ ಸೌಲಭ್ಯ ಪಡೆದಿರುತ್ತಾರೆ.2023 ರ ಜೂನ 11 ರಿಂದ 2025ಮೇ ವರೆಗೆ ಗದಗ ಘಟಕದಿಂದ 2,86,67,990, ರೋಣ ಘಟಕದಿಂದ1,48,76,841 ಲಕ್ಷೆ÷್ಮÃಶ್ವರ ಘಟಕದಿಂದ1,36,50,898. ನರಗುಂದ ಘಟಕದಿಂದ 1,31,81,195.ಮುಂಡರಗಿ ಘಟಕದಿಂದ 1,27,36,194.ಗಜೇಂದ್ರಗಡ ಘಟಕದಿಂದ.1,07,79,083. ಶಿರಹಟ್ಟಿ ಘಟಕದಿಂದ 43,87,154. ಮಹಿಳಾ ಪ್ರಯಾಣಿಕರು ಈ ಯೋಜನೆ ಸದುಪಯೋಗ ಪಡೆದುಕೊಂಡಿದ್ದಾರೆ.ರಾದಾ ವಿ ಯಶೋಗಾಥೆ :ಪಂಚ ಗ್ಯಾರಂಟಿಗಳಲ್ಲಿ ” ಶಕ್ತಿ ಯೋಜನೆ” ಈ ಯೋಜನೆಯಿಂದ ದಿನನಿತ್ಯದ ಬಟ್ಟೆ ವ್ಯಾಪಾರದಲ್ಲಿ ಹೆಚ್ಚು ಲಾಭವನ್ನು ಗಳಿಸಲು ಸಹಕಾರಿಯಾಗಿದೆ. ಬೇರೆಬೇರೆ ಜಿಲ್ಲೆ ಗಳಿಗೆ ಬೇಟಿ ಮಾಡುತ್ತೇವೆ ಮತ್ತು ಗದಗ ಹುಬ್ಬಳ್ಳಿ ಅಲ್ಲಿನ ಹೊಸದಾದ ಡಿಸೈನ್ ಬಟ್ಟೆಗಳನ್ನು ಹೊಲೆಸೆಲ್ ದರದಲ್ಲಿ ತಂದು ನಮ್ಮ ವಿಜಯನಗರ ಜಿಲ್ಲೆಯ ಗಾಳೆಮ್ಮನ ಗುಡಿಯ ಗ್ರಾಮದಲ್ಲಿ ನಮ್ಮ ಮನೆಯಲ್ಲಿಯೇ ಮಾರಾಟ ಮಾಡುತ್ತೇವೆ ಇದರಿಂದ ಅಧಿಕ ಲಾಭ ಗಳಿಸಿದ್ದೇವೆ ಮತ್ತು “ಗೃಹ ಲಕ್ಷಿ” ಯೋಜನೆಯ ಮೂಲಕ ಒಂದು ವµðÀದ ಅವದಿಯಲ್ಲಿ ಬಂದಿರುವ ಹಣದಿಂದ ಇ.ಎಮ್.ಐ ಮೂಲಕ 52 ಇಂಚಿನ ಟಿವಿ ಕರೀದಿ ಮಾಡಿದ್ದೇವೆ ಮತ್ತು ಹೊಲಿಗೆ ಯಂತ್ರದ ಬಿಸಿನೆಸ್ ಕೂಡಾ ಚನ್ನಾಗಿ ನಡಿತಾ ಇದೆ.ಇದರಿಂದಾಗಿ ನಮ್ಮ ಜೀವನದಲ್ಲಿ ನಾವು “ಶಕ್ತಿ ಯೋಜನೆ” ಇಂದ ನಮ್ಮ ಬದುಕು ಕಟ್ಟಿಕೊಳ್ಳಲು ಮತ್ತು ಸ್ವತಂತ್ರ ವಾಗಿ ಕೆಲಸ ನಿರ್ವಹಣೆ ಸರಳವಾಗಿದೆ.ಮತ್ತು ಸ್ವಾವಲಂಬಿ ಜೀವನಕ್ಕೆ ಆಧಾರವಾಗಿದೆ ಎಂದು ಹೇಳುತ್ತಾರೆ. ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿನ ಜನರು ನಾವು ಮನೆಯಲ್ಲಿ 3 ಜನ ಸೊಸೆಯರು ಬಟ್ಟೆಗಳ ಖರೀದಿ ವ್ಯಾಪಾರ ದಿಂದ ಚಿರಪರಿಚಿತರಾಗಿದ್ದೆವೆ ಎಂದು ಹೇಳುತ್ತಾರೆ..ತುಂಬಿ ತುಳುಕುತ್ತಿರುವ ಬಸ್ಸುಗಳು:ಸರಕಾರಿ ಬಸ್ಗಳಲ್ಲಿ ಉಚಿತ ಶಕ್ತಿ ಯೋÃಜನೆಯ ಪ್ರಯಾಣಿಕರ ಸಂಖ್ಯೆಯಲ್ಲಿನ ಏರಿಕೆ ಅದರಲ್ಲೂ ಮಹಿಳಾ ಪ್ರಯಾಣಿಕರದಟ್ಟಣೆಯನ್ನು ಹೆಚ್ಚಿಸಿದೆ ಮತ್ತು ಭರ್ತಿಯಾಗಿ ಓಡುತ್ತಿವೆ.ವಿದ್ಯಾರ್ಥಿಗಳು:ಬಡ, ಮಧ್ಯಮವರ್ಗದ ಕುಟುಂಬಕ್ಕೆ 1-2 ಸಾವಿರ ಮಾಸಿಕವಾಗಿ ಉಳಿತಾಯವಾದರೂ ಕೂಡಾ ಅದು ಅತೀ ದೊಡ್ಡ ಮೊತ್ತವೇ ಆಗುತ್ತದೆ. ಅದರಲ್ಲೂ ಒಂದು ಕುಟುಂಬದಲ್ಲಿ ವಿದ್ಯಾರ್ಥಿನಿಯರು ಇದ್ದರೆ, ಅವರ ಶಾಲಾ ಓಡಾಟದ ಖರ್ಚು ಉಳಿತಾಯವಾಗಲಿದೆ. ಅದು ವಿದ್ಯಾ÷್ಯರ್ಥಿನಿಯ ಒಟ್ಟು ಶಿಕ್ಷಣದ ವೆಚ್ಚದಲ್ಲಿ ಕಡಿಮೆಯಾಗಲು ಸಹಾಯಕವಾಗಲಿದೆ.ಕರ್ನಾಟಕದ ಜಿಎಸ್ಟಿ ಸಂಗ್ರಹಕ್ಕೆ ಕೊಡುಗೆ ನೀಡುತ್ತಿದೆ. ಮತ್ತು ಕಾರ್ಮಿಕ ಬಲದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತಿದೆ ಎಂದು ಸರಕಾರಿ ಸ್ವಾಮ್ಯದ ಹಣಕಾಸು ನೀತಿ ಸಂಸ್ಥೆ (ಎಫ್ಪಿಐ) ನಡೆಸಿದ ಅಧ್ಯಯನವು ತಿಳಿಸಿದೆ.ಉದ್ಯೋಗದಲ್ಲಿರುವ ಮಹಿಳೆಯರು :ಇತ್ತೀಚಿನ ಅಧ್ಯಯನದ ಪ್ರಕಾರ, ‘ಶಕ್ತಿ ಯೋಜನೆ’ಯು ಹೆಚ್ಚಿನ ಮಹಿಳೆಯರು ಉದ್ಯೋಗ ಚಟುವಟಿಕೆಗಳಲ್ಲಿ ಭಾಗವಹಿಸಲು ಕೊಡುಗೆ ನೀಡುತ್ತಿದೆ. ಈ ಅಧ್ಯಯನವು ‘ಶಕ್ತಿ ಯೋಜನೆ’ ಅನುಷ್ಠಾನದ ಮೊದಲು ಮತ್ತು ನಂತರ ಮಹಿಳಾ ಕಾರ್ಮಿಕ ಬಲ ಭಾಗವಹಿಸುವಿಕೆ ದರ ಮತ್ತು ಕಾರ್ಮಿಕರ ಜನಸಂಖ್ಯಾ ದರ ಗಳ ತ್ರೆöÊಮಾಸಿಕ ಹೋಲಿಕೆಯನ್ನು ಬಳಸುತ್ತದೆ.ಒಟ್ಟಾರೆಯಾಗಿ ಹಿಂದುಳಿದ, ಪ.ಜಾ ಮತ್ತು ಪ.ಪಂಗಡ, ಅಲ್ಪಸಂಖ್ಯಾತರ , ಮಹಿಳೆಯರು ಮತ್ತು ಮಕ್ಕಳಿಗಾಗಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಅನುಷ್ಟಾನಿತ ಯೋಜನೆಗಳ ಸೌಕರ್ಯ ಅರ್ಹರಿಗೆ ತಲುಪುತ್ತಿರುವ ರೀತಿಯಲ್ಲಿ ಈ ಅದೇ ರೀತಿ ಪಂಚಗ್ಯಾರAಟಿ ಯೋಜನೆಯಲ್ಲಿ ಶಕ್ತಿ ಯೋಜನೆ ಸೌಲಭ್ಯ ಸದುಪಯೋಗಬೇಕಾಗಿದೆ ಎಂದರೆ ತಪ್ಪಾಗಲಾರದು. ತಾಲೂಕುಗಳಲ್ಲಿ ಗ್ಯಾರಂಟಿ ಯೋಜನೆಗಳ ಸೌಲಭ್ಯ ವಿತರಣೆಗೆ ಸಮಸ್ಯೆಗಳೇನಾದರೂ ಇದ್ದಲ್ಲಿ ತಾಲೂಕಾ ಅಧ್ಯಕ್ಷರ ಗಮನಕ್ಕೆ ತರಬೇಕು. -ಬಿ.ಬಿ.ಅಸೂಟಿ, ಅಧ್ಯಕ್ಷರು, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಟಾನ ಪ್ರಾಧಿಕಾರ ಗದಗ.ಬಡಜನರ ಬದುಕಿನಲ್ಲಿ ಬದಲಾವಣೆ ತರುವ ಯೋಜನೆಗಳು ಪಂಚ ಗ್ಯಾರಂಟಿ ಯೋಜನೆಗಳಾಗಿವೆ. ಗ್ಯಾರಂಟಿ ಸಮಿತಿ ಸದಸ್ಯರು ಅಧಿಕಾರಿಗಳು ಸಮರ್ಪಕ ಅನುಷ್ಟಾನ ಮಾಡುವ ಮೂಲಕ ಬಡವರ ಬದುಕು ಬಂಗಾರವಾಗಿಸಿ.-ಡಾ.ಎಚ್.ಕೆ.ಪಾಟೀಲ, ಗದಗ ಜಿಲ್ಲಾ ಉಸ್ತುವಾರಿ ಸಚಿವರು ರಾಘವೇಂದ್ರ ಶಾಂತಗೇರಿ ಅಪ್ರೆಂಟಿಸ್, ವಾರ್ತಾ ಮತ್ತು ಸಾ.ಸಂ. ಇಲಾಖೆ. ಗದಗ

Leave a Reply

Your email address will not be published. Required fields are marked *