
ಅಂದರು, ವಿಕಲಚೇತನರು, ವೃದ್ಧರು, ನಿರೊದ್ಯೋಗ ಮಹಿಳೆ&ಪುರುಷರಿಗೆ ಸ್ವಾವಲಂಬಿ ಜೀವನಕ್ಕೆ ಆಧಾರ ಸ್ಥಂಭವಾದ ನರೇಗಾ ಯೋಜನೆ, ಕೂಲಿಕಾರ್ಮಿಕರಿಗೆ ಉಚಿತವಾಗಿ ಆರೋಗ್ಯ ತಪಸಣೆ ಶಿಬಿರಗದಗ ಕರ್ನಾಟಕ ವಾರ್ತೆ ಜುನ್ 9: ಉದ್ಯೋಗ ಖಾತ್ರಿ ಕೆಲಸದಲ್ಲಿ ದೈಹಿಕ ನ್ಯೂನ್ಯತೆ ಎದುರಿಸುತ್ತಿರುವ ಅಂಧರು, ಕೈ ಇಲ್ಲದವರು, ಮೂಗರು, ಕಿವುಡರು ಹೀಗೆ ಕಷ್ಟದ ಬದುಕು ಸಡೆಸುತ್ತಿರುವ ವಿಕಲಚೇತನರು ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿ ನರೇಗಾದಡಿ ಕೆಲಸ ಮಾಡುತ್ತಿದ್ದಾರೆ. ಮಹಾತ್ಮಾಗಾಂದ್ಧಿ ಉದ್ಯೋಗ ಖಾತ್ರಿ ಯೋಜನೆಯು ಬಡ ವಿದ್ಯಾರ್ಥಿಗಳು ನರೇಗಾ ಯೋಜನೆಯಡಿ ಸಮಾನ ಕೆಲಸಕ್ಕೆ ಸಮಾನ ಕೂಲಿ ಪಡಿದುಕೂಳ್ಳುತ್ತಿದ್ದಾರೆ, ವಿಕಲಚೇತನರಿಗೆ, ವಿದ್ಯಾರ್ಥಿಗಳು ವಯೋವೃದ್ಧರು, ಬುದ್ಧಿಮಾಂದ್ಯರು ಮಹಿಳೆ&ಪುರುಷರಿಗೆ ಕೆಲಸದಲ್ಲಿ ರಿಯಾಯಿತಿ ನೀಡುತ್ತಿರುವುದರಿಂದ ಎಷ್ಟೋ ವಿಕಲಚೇತನರಿಗೆ, ಬುದ್ಧಿಮಾಂದ್ಯರಿಗೆ ವಯೋವೃದ್ಧರ ಕುಟುಂಬಗಳಿಗೆ ಉದ್ಯೋಗ ಖಾತ್ರಿ ಬದುಕು ಕಟ್ಟಿಕೊಟ್ಟಿದೆ. ನರೇಗಾ ಯೋಜನೆಯು ಸರ್ವ ಕಾಲದಲ್ಲಿಯು ಪ್ರತಿಯೊಬ್ಬರಿಗೂ ಸಲ್ಲುತ್ತಿದೆ. ತಿಂಗಳ ಮಾಸಾಶನದಲ್ಲೇ ಮಾತ್ರ ಜೀವನ ನಡೆಸುತ್ತಿದ್ದ ಇವರಿಗೆ ಈಗ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ನೆರವಾಗಿದೆ.

ಇವರಲ್ಲದೆ ಇದೇ ರೀತಿ ಹಲವು ಮಂದಿಗೆ ಆಯಾ ಗ್ರಾಮಸ್ಥರು, ಪಂಚಾಯತಿಯವರು ಆಸಕ್ತಿ ವಹಿಸಿ ಕೆಲಸ ಒದಗಿಸುತ್ತೀರುವುದು ವಿಕಲಚೇತನರ ಸಂತಸ ಜೀವನಕ್ಕೆ ಅನಕೂಲವಾಗಿದೆ. ನಾನು ವಿಕಲಾಂಗನಾಗಿ ಹುಟ್ಟಿದ್ದೇ ತಪ್ಪಾಯ್ತಾ ಎಂಬ ಭಾವ ಮೂಡಿದವರಿಗೆ, ನರೇಗಾ ಯೋಜನೆ ಹೊಸ ಬದುಕಿನ ಭರವಸೆ, ಜೋತೆಗೆ ಪ್ರೀತಿ ಜೊತೆಗೆ ಕಾಳಜಿ ನೀಡಿದೆ. ನರೇಗಾ ಯೋಜನೆಯೂ ನಮಗೆ ಕೆಲಸ ಹಾಗೂ ಹೆಚ್ಚಿನ ಕೂಲಿ ನೀಡುವುದರ ಜೊತೆಗೆ ನೆಮ್ಮದಿಯೂ ನೀಡುತ್ತಿದೆ.ಹುಲಗೆಪ್ಪ ಚಲವಾದಿ ಖುಷಿ ವ್ಯಕ್ತಪಡಿಸುತ್ತಾರೆ. ಬೇಸಿಗೆ ಅವಧಿಯಲ್ಲಿ ದುಡಿಯೋಣ ಬಾ ಅಭಿಯಾನದಡಿ ನಿರಂತರ ನರೇಗಾ ಕೆಲಸ ನೀಡುತ್ತಿರುವುದರಿಂದ ವಿಕಲಚೇತನರಿಗೆ ಇದ್ದೂರಲ್ಲೇ ಕೆಲಸ ಸಿಗುತ್ತಿದೆ. ನರೇಗಾ ಕೂಲಿ ದಿನಕ್ಕೆ 370 ರೂ.ಗೆ ಹೆಚ್ಚಿಸಿದ್ದರಿಂದ ಅಂಗವಿಕಲರು ಖುಷಿಯಿಂದ ನರೇಗಾ ಕೆಲಸ ಮಾಡುತ್ತಾ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

ಎಂದು ಹೇಳುತ್ತಾರೆ ಮಲ್ಲಯ್ಯ ಕೊರವನವರ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತಿ ಗದಗಅಂಗವಿಕಲರ ಕಲ್ಯಾಣಾಧಿಕಾರಿಗಳು ಕೇ ಮಹಾಂತೇಶ2025 ನೇ ವರ್ಷದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಗದಗ ನರೇಗಾ ಯೋಜನೇಯಡಿ ಜಾಬ್ ಕಾರ್ಡ ಹೊಂದಿದ ವಿಕಲಚೇತನರ ಮಾಹಿತಿ,ನರೇಗಾ ಯೋಜನೇಯಡಿ ಜಾಬ್ ಕಾರ್ಡ ಹೊಂದಿದ ವಿಕಲಚೇತನರ ಗದಗ ಜಿಲ್ಲೆಯ ಒಟ್ಟು ಅಂಕಿ ಆಂಸ ಗಂಡು 3593, ಹೆಣ್ಣು 2624 ಒಟ್ಟು ಗದಗ ಜಿಲ್ಲೆ ಜಾಬ್ ಕಾರ್ಡ ಹೊಂದಿದ ವಿಕಲಚೇತನರ ಸಂಖ್ಯೆ 6217. ಗದಗ ತಾಲೂಕುವರು ಅಂಕಿ ಅಂಶ, ಗಂಡು 1027, ಹೆಣ್ಣು 813 ಒಟ್ಟು 1840. ನರಗುಂದ ತಾಲೂಕು ಗಂಡು 428, ಹೆಣ್ಣು 319, ಒಟ್ಟು 747. ಮುಂಡರಗಿ ತಾಲೂಕು ಗಂಡು 512, ಹೆಣ್ಣು 408, ಒಟ್ಟು 920. ಶಿರಹಟ್ಟಿ ತಾಲೂಕು ಗಂಡು 716,ಹೆಣ್ಣು 476 ಒಟ್ಟು 1192. ರೋಣ ತಾಲೂಕು ಗಂಡು 910, ಹೆಣ್ಣು 608 ಒಟ್ಟು 1518 ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಕೇ ಮಹಾಂತೇಶ ಇವರು ಮಾಹಿತಿ ಒದಗಿಸಿದರುಸಮಾನ ವೇತನದ ಲಾಭ ಪಡೆಯಿರಿ ಸಹಾಯಕ Application ಪೂಜಾರ ಸಲಹೆ,ಬೇಸಿಗೆಯಲ್ಲಿ ಕೂಲಿಕಾರ್ಮಿಕರಿಗೆ ಕೆಲಸದ ಅಭಾವವಿರುತ್ತದೆ.

ಇದರ ಪರಿಹಾರಕ್ಕಾಗಿ ಉದ್ಯೋಗ ಖಾತ್ರಿ ಸಂಜೀವಿನಿಯAತೆ ಕಾರ್ಯನಿರ್ವಹಿಸುತ್ತಿದೆ. ಇದರ ಸದ್ಬಳಕೆ ಎಲ್ಲ ಗ್ರಾಮೀಣರ ಕೈಯಲ್ಲಿ ಇದೆ. ಗ್ರಾಮೀಣ ಪ್ರದೇಶದ ಮಹಿಳೆಯರು ಸ್ವ-ಸಹಾಯ ಸಂಘಗಳ ಮೂಲಕ ಒಟ್ಟಾಗಿ ಸೇರುವ ಪ್ರಯತ್ನವಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ವೈದ್ಯಕೀಯ ವೆಚ್ಚವನ್ನು ಭರಿಸುವುದು ಗ್ರಾಮೀಣ ಪ್ರದೇಶದ ಕೂಲಿಕಾರ್ಮಿಕರಿಗೆ ಕಷ್ಟ.

ಹೀಗಾಗಿ ತಾಲೂಕು ಪಂಚಾಯತ ಮತ್ತು ಗ್ರಾಮ ಪಂಚಾಯತ ವತಿಯಿಂದ ನರೇಗಾ ಕೂಲಿಕಾರ್ಮಿಕರಿಗೆ ಉಚಿತವಾಗಿ ಆರೋಗ್ಯ ತಪಸಣೆ ಶಿಬಿರವನ್ನು ಆಯೋಜಿಸಲಾಗಿದೆ.ವಿಶೇಷ ಚೇತನ ದಂಪತಿಗಳು ಸಾಕ್ಷಿಯಾಗಿದ್ದಾರೆಅಂಗ ವೈಕಲ್ಯಕ್ಕೆ ನರೇಗಾ ಊರುಗೋಲು ದೈಹಿಕ ನ್ಯೂನ್ಯತೆ ಇರುವವರನ್ನು ತುಚ್ಛವಾಗಿ ಕಾಣುವುದೇ ಹೆಚ್ಚು. ಅವರಿಂದ ಏನೂ ಮಾಡಲು ಸಾಧ್ಯವಿಲ್ಲ ಎನ್ನುವುದು ಹಲವರ ಊಹೆ. ಆದರೆ ತಾವು ಕೂಡ ದುಡಿದು ಸ್ವಾವಲಂಬಿಗಳಾಗಬಹುದು ಎನ್ನುವುದಕ್ಕೆ ಈ ವಿಶೇಷ ಚೇತನ ದಂಪತಿಗಳು ಸಾಕ್ಷಿಯಾಗಿದ್ದಾರೆ.

ಗದಗ ತಾಲೂಕಿನ ನಾಗಾವಿ ಗ್ರಾಮದಲ್ಲಿ ನರೇಗಾದಡಿ ಮೂರು ವಾರಗಳಿಂದ ಬದು ನಿರ್ಮಾಣ ಕೆಲಸ ನೀಡಲಾಗಿದೆ. ಗ್ರಾಮದ ಅಂಗವಿಕಲ ದಂಪತಿಗಳಾದ ಹುಲಗೆಪ್ಪ ಸುಬ್ಬಪ್ಪ ಚಲವಾದಿ ಮತ್ತು ಶಾಂತವ್ವ ಹುಲಗೆಪ್ಪ ಚಲವಾದಿ ಅವರು ಮೂರು ನಾಲ್ಕು ವರ್ಷಗಳಿಂದ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹುಲಗೆಪ್ಪ ಅವರಿಗೆ ಒಂದು ಕಣ್ಣು ಸರಿಯಾಗಿ ಕಾಣುವುದಿಲ್ಲ. ಅವರ ಪತ್ನಿ ಶಾಂತವ್ವ ಅವರದು ಒಂದು ಕೈ ಅಶಕ್ತವಾಗಿದೆ. ಹೀಗಿದ್ದರೂ ದುಡಿಯುವ ಉತ್ಸಾಹ ದಂಪತಿಗಳಲ್ಲಿ ಕಡಿಮೆಯಾಗಿಲ್ಲ.

ದಂಪತಿಗೆ ಮೂವರು ಮಕ್ಕಳು ಅವರಲ್ಲಿ ಇಬ್ಬರು ಹೆಣ್ಣು ಮಕ್ಕಳು ಅವರಿಗೆ ಮದುವೆಯಾಗಿದೆ. ಓರ್ವ ಮಗನಿಂದು ಅವನು ಸಹ ನಿತ್ಯ ದುಡಿಮೆಗೆ ಗಾರೆ ಕೆಲಸ ಮಾಡುತ್ತಾರೆ. ತುಂಬು ಕುಟುಂಬದಲ್ಲಿ ವಾಸವಾಗಿರುವ ದಂಪತಿಗಳಿಗೆ ಯಾವುದೇ ಜಮೀನು ಆಸ್ತಿ ಇಲ್ಲ. ಊರಿನಲ್ಲಿ ವಾಸಿಸಲು ಸ್ವತಃ ಮನೆ ಅಷ್ಟೆ ಇದೆ. ಮನೆಯ ಖರ್ಚು ವೆಚ್ಚಕ್ಕೆ ಅಲ್ಪ ಸಹಾಯವಾಗಲಿ ಎಂಬ ಉದ್ದೇಶದಿಂದ ಉದ್ಯೋಗ ಖಾತ್ರಿಯಲ್ಲಿ ಪ್ರಸಕ್ತ ವರ್ಷ ಮೂರು ವಾರಗಳಿಂದ ಕೆಲಸ ಮಾಡುತ್ತಿದ್ದಾರೆ.ಉದ್ಯೋಗ ಖಾತ್ರಿಯಲ್ಲಿ ಯಾವುದೇ ತಾರತಮ್ಯವಿಲ್ಲದೆ ಕೆಲಸ ಒದಗಿಸುತ್ತಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ. ಮೊದಲ ವರ್ಷ ಉದ್ಯೋಗ ಖಾತ್ರಿ ಯಾಗಿದೆ ವಿಕಲಚೇತನ ಆಗಿದ್ದರಿಂದ ನನ್ನ ಕಡೆಯಿಂದ ಕೆಲಸ ಮಾಡಲು ಆಗುವುದಿಲ್ಲ ನನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಎಲ್ಲಿಯೋ ಕೆಲಸಕ್ಕೆ ಹೋಗುತ್ತಿರಲ್ಲಿ. ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯಡಿ ವಿಕಲಚೇತನರು, ಬುದ್ಧಿ ಮಾಂದ್ಯರು ವಯೋವೃದ್ಧರು ಕೆಲಸಕ್ಕೆ ಬರಬಹುದು ಎಂದು ಮಾಹಿತಿ ಪಡೆದು ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಜಾಬ್ ಪಡೆದು ಈ ವರ್ಷ ಕೆಲಸಕ್ಕೆ ಬಂದಿದ್ದೇನೆ. ಉದ್ಯೋಗ ಖಾತ್ರಿಯಲ್ಲಿ ಒಂದೇ ಕೈಯಲ್ಲಿ ಕೆಲಸ ಮಾಡಲು ಆಗುವುದಿಲ್ಲ. ಹಾಗಾಗಿ ಕೆಲಸದ ಸ್ಥಳದಲ್ಲಿ ಕೂಲಿಕಾರರಿಗೆ ನೀರನ್ನು ಕೊಡುವ ಮೂಲಕ ನಾನು ಎಲ್ಲರಂತೆ ಕೆಲಸದಲ್ಲಿ ತೊಡಗಿದ್ದೇನೆ ಎನ್ನುತ್ತಾರೆ ಸೈನಾಜಾ ಇನಾಮದಾರ. 3 ವರ್ಷವಿದ್ದಾಗ ಆಕ್ಸಿಡೆಂಟ್ ಆಗಿ ಬಲಗೈಯನ್ನು ಸಂಪೂರ್ಣವಾಗಿ ಕಳೆದು ಕೊಂಡು ವಿಕಲಚೇತನವಾಗಿರುವ ಸೈನಾಜಾ ಇನಾಮದಾರ ಅವರಿಗೆ ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡುವ ಮೂಲಕ ಜೀವನಕ್ಕೆ ಆಸರೆಯಾಗಿದೆ. ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದವರಾದ ಸೈನಾಜಾ ಇನಾಮದಾರ ಅವರು ವಯಸ್ಸಾದ ತಾಯಿ ಮತ್ತು ತಂಗಿಯ ಜೊತೆಗೆ ವಾಸವಾಗಿದ್ದು, ಯಾವುದೇ ಆಸ್ತಿ ಇಲ್ಲ. ದುಡಿದು ತಿನ್ನಲು ಸಾಧ್ಯವಾಗದ ಕಾರಣ ವಿಕಲಚೇತನರಿಗೆ ಸರ್ಕಾರದಿಂದ ದೊರೆಯುವ ಪ್ರತಿ ತಿಂಗಳ ಪಗಾರದ ಮೇಲೆ ಜೀವನ ಸಾಗಿಸುತ್ತಿದ್ದಾರೆ. ಈ ವರ್ಷ ಉದ್ಯೋಗ ಖಾತ್ರಿಯ ಬದು ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುವ ಮೂಲಕ ಜೀವನಕ್ಕೆ ಸಹಕಾರಿಯಾಗಲಿದೆ. -ಯೋಜನೆಯಡಿಯಲ್ಲಿ ಕೆಲಸದ ಮೂಲಕ ಜೀವನಕ್ಕೆ ಆಸರೆಯಾಗಿದೆ, ವಿಕಲಚೇತನ ಸೈನಾಜಾ ಇನಾಮದಾರ ಕಳಸಪ್ಪ ಅವರು ಹುಟ್ಟುತ್ತಾ ವಿಕಲಚೇತನ ಕೊಣ್ಣೂರ ಗ್ರಾಮದ ನಿವಾಸಿಯಾದ ಕಳಸಪ್ಪ ಕಳಸಣ್ಣನವರ ಹುಟ್ಟುತ್ತಾ ವಿಕಲಚೇತನರಾಗಿದ್ದು, ಅವರಿಗೆ ಹೆಂಡತಿ, ಮಕ್ಕಳೊಂದಿಗೆ ಜೀವನ ಸಾಗಿಸುತ್ತಿರುವ ಈ ಕುಟುಂಬಕ್ಕೆ ನರೇಗಾ ವರದಾನವಾಗಿದೆ. ಕಳಸಪ್ಪ ಅವರಿಗೆ ಎಡಲು ಪಾದ ಡೊಂಕ್ಕಾಗಿದ್ದು, ಕಾಳಿನ ಬೆಳವಣಿಗೆ ಸರಿಯಾಗಿಲ್ಲ. ಬಾರದ ಕೆಲಸ ಮಾಡಲಾಗುವುದಿಲ್ಲ. ಆದರೂ ಅದರಲ್ಲಿಯೂ ನಡೆದಾಡುವುದು, ಕೆಲಸ ಮಾಡುತ್ತಿದ್ದಾರೆ. ಅವರಿಗೆ ವಿಕಲಚೇತನ ಎಂದಿಗೂ ಅಡ್ಡಿ ಬರಲಿಲ್ಲ. ದುಡಿಯುವುದಕ್ಕೆ ಯಾವುದೇ ಹಿಂಜರಿಕೆ ಇಲ್ಲದೆ. ಪ್ರತಿ ವರ್ಷ ಉದ್ಯೋಗ ಖಾತ್ರಿ ಕೆಲಸ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. 3 ವರ್ಷ ಇದ್ದಾಗ ಆಕ್ಸಿಡೆಂಟ್ ಆಗಿ ಬಲಗೈ ಕಳೆದುಕೊಂಡು ವಿಕಲಚೇತನರಾಗಿರುವ ನಮಗೆ ಹೊರಗಡೆ ಹೋಗಿ ದುಡಿಯಲು ಸಾಧ್ಯವಾಗುತ್ತಿರಲಿಲ್ಲ. ಜೊತೆಗೆ ನಮಗೂ ಯಾರು ಕೆಲಸ ಕೊಡ್ತಿರಲಿಲ್ಲ. ಕೊಟ್ಟರು ಒಂದೇ ಕೈಯಲ್ಲಿ ಕೆಲಸ ಮಾಡಲು ಕಷ್ಟವಾಗುತ್ತಿರುವುದರಿಂದ ಮನೆಯಲ್ಲಿ ಇರುತ್ತಿದ್ದೆ. ನರೇಗಾ ಯೋಜನೆ ನಮಗೆ ಕೆಲಸ ನೀಡಿರುವುದು ತುಂಬಾ ಖುಷಿಯಾಗಿದೆ. ಮೊದಲ ವರ್ಷ ಒಡ್ಡಿನ ಕೆಲಸಕ್ಕೆ ಬಂದಿದ್ದು ಕೂಲಿಕಾರರಿಗೆ ನೀರು ಕೊಡುವ ಕೆಲಸಕ್ಕೆ ಹಚ್ಚಿದ್ದಾರೆ ಎಲ್ಲರಂತೆ ನಾನು ಕೆಲಸ ಮಾಡುತ್ತಿನೆ ಎಂಬ ಖುಷಿ ನನಗಿದೆ.ಸೈನಾಜಾ ಇನಾಮದಾರ್, ವಿಕಲಚೇತನ ಕೂಲಿಕಾರರು. ಕೊಣ್ಣೂರ ಗ್ರಾಮ ಪಂಚಾಯತಿಯಲ್ಲಿ ವಿಕಲಚೇತರಿಗೆ ನರೇಗಾ ಯೋಜನೆಯಡಿ ಜಾಬ್ ನೀಡಿ ನರೇಗಾ ಯೋಜನೆಯ ಬಗ್ಗೆ ಮಾಹಿತಿ ನೀಡಿ ಕೆಲಸಕ್ಕೆ ಬರುವಂತೆ ಪ್ರೇರೆಪಿಸಲಾಯಿತು. ಆ ನಿಟ್ಟಿನಲ್ಲಿ ವಿಕಲಚೇತರು ಒಡ್ಡಿನ ಕೆಲಸಕ್ಕೆ ಬರುತ್ತಿದ್ದಾರೆ. ಅವರು ವಿಕಲಚೇತನರಾಗಿದ್ದರಿಂದ ಅವರ ಶಕ್ತಿಗನುಸಾರವಾಗಿ ಕೆಲಸ ನೀಡಲಾಗುತ್ತದೆ. ಕೋಟ್..ಜಿ.ಪಂ. ಸಿಇಒ ಭರತ್ಎಲ್ಲರೂ ಇದರ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಗಂಡು-ಹೆಣ್ಣಿಗೆ ಸಮಾನ ಕೆಲಸಕ್ಕೆ ಸಮಾನ ಕೂಲಿ ನೀಡಲಾಗುವದು. ಪ್ರತಿ ಕುಟುಂಬಕ್ಕೆ ಒಂದು ವರ್ಷದಲ್ಲಿ 100 ದಿನಗಳ ಉದ್ಯೋಗ ನೀಡಲಾಗುತ್ತಿದೆ. ಗ್ರಾಮೀಣ ಭಾಗದ ಜನರು ಉದ್ಯೋಗ ಅರಸಿ ಬೇರೆ ರಾಜ್ಯ, ಜಿಲ್ಲೆ ಹಾಗೂ ನಗರಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಎಲ್ಲರೂ ತಮ್ಮ ಸ್ವಂತ ಊರಿನಲ್ಲಿಯೇ ಇದ್ದು ಉದ್ಯೋಗ ಮಾಡಿ ಕೂಲಿ ಪಡೆಯಬಹುದು ಎಂದು ಹೇಳುತ್ತಾರೆ.ಮಂಜುನಾಥ ಗಣಿ, ಪಿಡಿಒ ಗ್ರಾ.ಪಂ. ಕೊಣ್ಣೂರ. ವಿಕಲಚೇತನರಾಗಿದ್ದರೂ ನರೇಗಾ ಯೋಜನೆಯಡಿ ಕೆಲಸ ಮಾಡಲು ಆಸಕ್ತಿಯಿಂದ ಮುಂದೆ ಬಂದಿರುವುದು ಒಳ್ಳೆಯದು. ಇದರಂತೆ ಎಲ್ಲಾ ಗ್ರಾಮ ಪಂಚಾಯತಿಯಲ್ಲಿ ಬೇರೆ ಬೇರೆ ದೈಹಿಕ ನ್ಯೂನತೆ ಇರುವವರು ಇದ್ದಾರೆ ಅವರು ಕೂಡಾ ನರೇಗಾ ಕೆಲಸಕ್ಕೆ ಬರಹುದು. ಸಮಾನ ಕೆಲಸಕ್ಕೆ ಸಮಾನ ವೇತನ ವಿಕಚೇತನರಿಗೆ, ಹಿರಿಯ ನಾಗರಿಗರಿಕೆ ಇತರೆ ಎಲ್ಲರೂ ಸಮಾನ ಕೂಲಿ ನೀಡಲಾಗುತ್ತದೆ. ಎಲ್ಲರೂ ಉದ್ಯೋಗ ಖಾತ್ರಿ ಕೆಲಸ ಸದ್ಬಳಕೆ ಮಾಡಿಕೊಳ್ಳಿ.ಎಸ್.ಕೆ. ಇನಾಮದಾರ, ಕಾರ್ಯನಿರ್ವಾಹಕ ಅಧಿಕಾರಿಗಳು ತಾ.ಪಂ. ನರಗುಂದ. ನರೇಗಾ ಯೋಜನೆಯಡಿಯಲ್ಲಿ ವಿಕಲಚೇತನರಿಗೆ, ಬುದ್ಧಿಮಾಂದ್ಯರಿಗೆ, ಹಿರಿಯ ನಾಗರಿಕರಿಗೆ ಪ್ರತ್ಯೇಕ ಜಾಬ್ ಕಾರ್ಡ್ ನೀಡಲಾಗುತ್ತದೆ. ಉದ್ಯೋಗ ಖಾತ್ರಿ ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡಲಾಗುವುದು. ಅವರಿಗೆ ನರೇಗಾ ಯೋಜನೆಯಡಿಯಲ್ಲಿ ಸಾಮಾರ್ಥ್ಯಕ್ಕೆ ಅನುಸಾರ ಕೆಲಸ ನೀಡಿ ದಿನಕ್ಕೆ 370 ರೂ. ಕೂಲಿ ನೀಡಲಾಗುವುದು.