
*ವಿಜಯಪುರ*|ವಿದ್ಯಾ ಕೇಂದ್ರವಾಗಿ ಸಾವಿರಾರು ಮಕ್ಕಳಿಗೆ ಅಕ್ಷರ ಜ್ಞಾನ ನೀಡಿದ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಸರ್ಕಾರಿ ಗಂಡು ಮಕ್ಕಳ ಶಾಲಾ ಕಟ್ಟಡ ಪಾಲು ಬಿದ್ದಿದೆ. ಬ್ರಿಟಿಷ್ ಆಡಳಿತ ಅವಧಿಯಲ್ಲಿ 1860 ಏ.1ರಂದು ಪ್ರಾರಂಭಗೊಂಡ ಈ ಶಾಲೆಗೆ ಸುಮಾರು 165 ವರ್ಷಗಳ ಇತಿಹಾಸವಿದೆ. ವಿಶಿಷ್ಟ ವಿನ್ಯಾಸದಿಂದಲೂ ಹೆಸರುವಾಸಿಯಾದ ಈ ಕಟ್ಟಡವು ಕಲ್ಲು, ಗಾರಿ ಹಾಗೂ ಗಚ್ಚಿನಿಂದ ನಿರ್ಮಾಣಗೊಂಡಿದೆ. ಸಂಪೂರ್ಣ ಕಲ್ಲಿನ ಚಾವಣಿ ಹೊಂದಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಕಲಾದಗಿ ಜಿಲ್ಲೆ ಇದ್ದಾಗ ದೇವರಿಬ್ಬರಗಿ ತಾಲೂಕು ಸ್ನಾನಮಾನ ಹೊಂದಿತ್ತು. ಆ ಸಮಯದಲ್ಲಿ ನ್ಯಾಯಾಲಯ ಹಾಗೂ ಪೊಲೀಸ್ ಠಾಣೆಯಾಗಿ ಕಾರ್ಯನಿರ್ವಹಿಸಿ ಹೆಸರುವಾಸಿಯಾಗಿತ್ತು ಎಂದು ಹೇಳಲಾಗುತ್ತದೆ.

ನಂತರದಲ್ಲಿ ಸರಕಾರಿ ಪ್ರಾಥಮಿಕ ವಿದ್ಯಾ ಕೇಂದ್ರವಾಗಿ ಅನೇಕ ಬಡ ಮಕ್ಕಳಿಗೆ ಅಕ್ಷರ ಜ್ಞಾನ ನೀಡಿದೆ. ಸದಾ ಮಕ್ಕಳ ಕಲರವ, ಪ್ರಾರ್ಥನಾ ಗೀತೆ, ಏರು ಧ್ವನಿಯ ಗುರುಗಳ ಪಾಠ, ಸಂಜೆಯಾದರೆ ಗಂಟೆಯ ಡಣ ಡಣ ನಾದ ಎಲ್ಲವೂ ಎಂದು ಮಾಯವಾಗಿ ಸಂಪೂರ್ಣ ನಿರ್ಲಕ್ಷಕ್ಕೆ ಒಳಗಾಗಿದೆ. ಸಂಜೆಯಾದರೆ ಸಾಕು ಕಿಡಿಗೇಡಿಗಳಿಗೆ ಮಧ್ಯೆ ವ್ಯಸನಿಗಳಿಗೆ, ಪಾನ ಬೇಡ ಜಿಗಿಯುವವರಿಗೆ ಹಾಗೂ ಅನೈತಿಕ ಕೆಲಸಗಳಿಗೆ ಪ್ರಶಸ್ತ ಸ್ತಳವಾಗಿ ಮಾರ್ಪಟ್ಟಿದೆ. ಕಟ್ಟಡದ ಸುತ್ತಲೂ ಶೌಚ ಹಾಗೂ ಮೂತ್ರ ವಿಸರ್ಜನೆಯ ದರ್ವಾ ಸೇನೆ ಕಂಡು ಬರುತ್ತಿದೆ. ಒಂದು ಸಮಯದಲ್ಲಿ, ಅಕ್ಷರ ದಾಸೋಹ ಮಾಡಿದ ಶಾಲೆಯ ಸ್ಥಿತಿ ಕಂಡು ಹಳೆಯ ವಿದ್ಯಾರ್ಥಿಗಳು ಮರುಕ ವ್ಯಕ್ತಪಡಿಸುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಐತಿಹಾಸಿಕ ಕಟ್ಟಡವನ್ನು ಸದುಪಯೋಗಪಡಿಸಿಕೊಳ್ಳಬೇಕು. ಎಂದು ಪಿಕೆಪಿಎಸ್ ನಿರ್ದೇಶಕ ರಾಘವೇಂದ್ರ ಭಾವಿಮನಿ, ಸುನೀಲ ಪಾಟೀಲ, ಅನಿಲ ಕೋಟಿನ, ಸೋಮಶೇಖರ ಸೊನ್ನದ, ಶಿವಾನಂದ ರುದ್ರಗೌಡರ ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ದಿನ ಪ್ರತಿನಿಧಿಗೆ ಪ್ರತಿಕ್ರಿಯೆಸಿದ ಬಿ ಇ ಒ ಎಂ.ಬಿ. ಯಡ್ರಾಮಿ ಮಾತನಾಡಿ, ಕಟ್ಟಡವು ಶಿಕ್ಷಣ ಇಲಾಖೆ ಅಡಿಯಲ್ಲಿದೆ. ನೂತನ ತಾಲೂಕು ಘೋಷಣೆ ನಂತರದಲ್ಲಿ ನ್ಯಾಯಾಲಯಕ್ಕಾಗಿ ಬಳಸಲಾಗುತ್ತದೆ ಎಂದು ತಿಳಿದುಬಂದಿತ್ತು. ನಂತರದಲ್ಲಿ ಏಕೆ ಕೈ ಬಿಡಲಾಯಿತು ಎಂಬುದು ಗೊತ್ತಿಲ್ಲ. ಪ್ರತ್ಯಕ್ಷ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ರಮೇಶ್ ಮಸಬಿನಾಳ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಮಾತನಾಡಿ, ಬಾಲ್ಯದ ಶಿಕ್ಷಣವನ್ನು ಇದೇ ಶಾಲೆಯಲ್ಲಿ ಪೂರೈಸಿದ್ದೇನೆ. ಅಂದು ಆಡಿ ಬೆಳೆದ ಶಾಲೆ ಎಂದು ಆಳು ಕೊಂಪೆಯಾಗಿದ್ದು ಕಂಡು ಮನಸ್ಸಿಗೆ ನೋವಾಗುತ್ತದೆ. ಕಟ್ಟಡದ ಸಂಪೂರ್ಣ ಸದುಪಯೋಗಕ್ಕೆ ನನ್ನ ಮಿತಿ ಒಳಗೆ ಹಾಗೂ ಸಂಬಂಧಿಸಿದ ಅಧಿಕಾರಿ ವರ್ಗದೊಡನೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವೆ ಎಂದರು.