
* ಕನ್ನಡ ಕಿರಣ ಶಿಕ್ಷಣ ಸಮಿತಿ ಯ, ಬಿ.ಎಸ್.ಡಬ್ಲ್ಯೂ ಕಾಲೇಜು ಮತ್ತು ಪಿಜಿ (ಎಂ.ಎಸ್.ಡಬ್ಲ್ಯೂ) ಸ್ನಾತಕೋತ್ತರ ಕೇಂದ್ರ ರಾಜೀವ್ ಗಾಂಧಿ ನಗರ ಗದಗದಲ್ಲಿ ಅಂತಿಮ ವರ್ಷದ ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಭಾರತ ಸರಕಾರದ ಆಹಾರ ನಿಗಮದ ರಾಜ್ಯ ನಿರ್ದೇಶಕರು ಹಾಗೂ ಮಹಾವಿದ್ಯಾಲಯದ ಚೇರ್ಮನ್ನರಾದ ಸನ್ಮಾನ್ಯ ಶ್ರೀ ರವೀಂದ್ರನಾಥ ಬಿ ದಂಡಿನ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಸಮಾಜಕಾರ್ಯ ವಿಭಾಗವು ಭಾರತೀಯ ಸಂಸ್ಕೃತಿಯನ್ನು, ಉಳಿಸಿ ಬೆಳಸುವುಲ್ಲಿ ಸಮಾಜ ಕಾರ್ಯಕರ್ತನ ಪಾತ್ರ, ಬಹು ಮುಖ್ಯವಾಗಿದೆ ಎಂದರು. ಕೆ ಎಸ್ ಎಸ್ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ ಎಸ್ ಕೆ ವಂಡಕರ್ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸಮಾಜಕಾರ್ಯ ಪದವಿಯು ವಿಶೇಷ ಮತ್ತು ಸಮಾಜ ಸೇವೆ ಯಾಗಿದ್ದು ಸಮಾಜದಲ್ಲಿ ಇರುವ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಶ್ರೇಷ್ಠವಾದದ್ದು ಎಂದರು.

ಇದೆ ಸಂದರ್ಭದಲ್ಲಿ ಮಹಾವಿದ್ಯಾಲಯದ ಸಂಯೋಜಕರಾದ ಡಾ. ವಸಂತ ಅಗಸಿಮನಿ, ಪ್ರೊ ಶ್ರೀಧರ್ ಕಾಂಬಳೆ , ಪ್ರೊ ಪಿ. ಕೆ. ಕನ್ಯಾಳ, ಶ್ರೀಮತಿ ಪೂರ್ಣಿಮಾ, ಮಹಾವಿದ್ಯಾಲಯದ ಪ್ರಥಮ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.