
ಶಿಡ್ಲಘಟ್ಟ : ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ 11 ಮತಗಳ ಪಡೆದ ಜಯಭೇರಿ ಬಾರಿಸಿದ್ದಾರೆ ಕಾಂಗ್ರೆಸ್ ಬೆಂಬಲದ ಅಭ್ಯರ್ಥಿ 9 ಮತಗಳು ಪಡೆದ ಸೋಲು ಅನುಭವಿಸಿದ್ದು ನೂತನ ಅಧ್ಯಕ್ಷರಾಗಿ ಬಿ.ತಿಮ್ಮಸಂದ್ರ ಗ್ರಾಮದ ರಾಮಕೃಷ್ಣಪ್ಪ ರವರು ಆಯ್ಕೆಯಾಗಿದ್ದಾರೆ.ಹಿಂದಿನ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಬಿ.ತಿಮ್ಮಸಂದ್ರ ರಾಮಕೃಷ್ಣಪ್ಪ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಹಾರಡಿ ಬೈರೇಗೌಡ ರವರು ಎರಡು ನಾಮಪತ್ರ ಸಲ್ಲಿಕೆಯಾಗಿತ್ತು.ಶಾಸಕರಾದ ಬಿ.ಎನ್ ರವಿಕುಮಾರ್ ರವರ ಸಹಕಾರದೊಂದಿಗೆ ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಬಿ.ತಿಮ್ಮಸಂದ್ರ ರಾಮಕೃಷ್ಣಪ್ಪ ಅವರು ಆಯ್ಕೆಯಾಗಿದ್ದಾರೆ.ನೂತನ ಅಧ್ಯಕ್ಷ ಬಿ.ತಿಮ್ಮಸಂದ್ರರಾಮಕೃಷ್ಣಪ್ಪ ಮಾತನಾಡಿ ಸರ್ಕಾರದ ಸವಲತ್ತುಗಳನ್ನು ಬಳಸಿ ಪಂಚಾಯಿತಿ ಅಭಿವೃದ್ಧಿಗೆ ಶ್ರಮಿಸಿ ಎಲ್ಲಾ ಸದಸ್ಯರ ಜತೆಗೂಡಿ ಗ್ರಾಮಗಳ ಅಭಿವೃದ್ಧಿಗೂ ಒತ್ತು ನೀಡಲಾಗುವುದು ಆ ಮೂಲಕ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡುತ್ತೇನೆ ಎಂದರು.ಅಧ್ಯಕ್ಷರ ಬೆಂಬಲಿಗರು ಸಿಹಿ ವಿತರಿಸಿ ಸಂಭ್ರಮಿಸಿದರು.ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಗೆ ಚುನಾವಣಾ ಅಧಿಕಾರಿಯಾಗಿ ಕೃಷಿ ಇಲಾಖೆ ಅಧಿಕಾರಿ ರವಿ ರವರು ಕಾರ್ಯ ನಿರ್ವಹಿಸಿದರು.

.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಎಚ್.ಪಿ ನಾಗರಾಜ್,ಸಿದ್ದಲಿಂಗಪ್ಪ, ವಿ ಲೋಕೇಶ್,ರಾಮದಾಸ್,
ಮುನಿರಾಜು,ರಾಜಣ್ಣ,ನಾಗಮಣಿ ಕೇಶವಮೂರ್ತಿ,ಅಶ್ವಿನಿ, ನಾಗಲಕ್ಷ್ಮಿ,ನಾಗರತ್ನಮ್ಮ,ಮುಂಜುನಾಥ್, ಮುಖಂಡರಾದ ಎಚ್.ಪಿ.ಆಂಜಿನಪ್ಪ ಹೇಮಾರ್ಲಹಳ್ಳಿ ಕೇಶವಮೂರ್ತಿ,ದೇವಣ್ಣ,ರಾಮಣ್ಣ,ಶಾಂತಕುಮಾರ್, ರಾಘು,ವೆಂಕಟರೆಡ್ಡಿ,ಮಂಜುನಾಥ್, ದೇವರಾಜ್, ಆಂಜಿನಪ್ಪ ಮುಂತಾದವರು ಹಾಜರಿದ್ದರು.
