
*ಕೂಡ್ಲಿಗಿ : ಮಗುವಿನ ಮೇಲೆ ಬೀದಿನಾಯಿ ದಾಳಿ ತೀವ್ರ ಗಾಯ*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ , ಡಾ॥ ಬಿ.ಆರ್ ಅಂಬೇಡ್ಕರ್ ನಗರದಲ್ಲಿ. 2ವರ್ಷದ ಮಗುವಿನ ಮೇಲೆ , ಬೀದಿ ನಾಯಿ ದಾಳಿ ನಡೆಸಿ ತೀವ್ರ ಗಾಯಗೊಂಡಿರುವ ಘಟನೆ. ಆಗಸ್ಟ್ 21ರಂದು ಜರುಗಿದ್ದು , ತಡವಾಗಿ ಬೆಳಕಿಗೆ ಬಂದಿದೆ.ಮಗು ಜೈ ಭೀಮ ಎಂಬ ಎರೆಡು ವರ್ಷದ ಮಗು , ತನ್ನ ಮನೆಯ ಅಂಗಳದಲ್ಲಿ ಆಟ ವಾಡುತ್ತಿದ್ದ ಸಮಯದಲ್ಲಿ. ಬೀದಿ ನಾಯಿ ದಿಡೀರ್ ದಾಳಿ ನಡೆಸಿದ್ದು , ಮಗುವಿನ ತಲೆ ಹಾಗೂ ಕಣ್ಣಿನ ಭಾಗದಲ್ಲಿ. ಚರ್ಮ ಕಿತ್ತುದ್ದು ರಕ್ತ ಸ್ರಾವ ಗೊಂಡಿದೆ ಎಂದು ತಿಳಿದುಬಂದಿದ್ದು , ಕೂಡಲೇ ನೆರೆದವರು ಹಾಗೂ ಮಗುವಿನ ಪೋಷಕರು ಮಗುವನ್ನು ರಕ್ಷಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮಗುವನ್ನು , ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿದೆ ಎಂದು ಪೋಷಕರು ತಿಳಿಸಿದ್ದಾರೆ. ಮಗುವಿನ ಮುಖ ತೀವ್ರ ಗಾಯದಿಂದಾಗಿ , ಅತೀವ ಭಾವು ಕಂಡಿದ್ದು ಮಗು ತೀವ್ರ ನೋವಿನಿಂದಾಗಿ. ನಿತ್ಯವೂ ಬಳಲುತಿದ್ದು ನರಕ ಯಾತನೆ ಅನುಭವಿಸುತ್ತಿದ್ದು , ಮಗುವಿನ ರೋಧನ ಮನೆತುಂಬ ಮಾರ್ಧನಿಸುತ್ತಿದೆ. ಇದನ್ನು ಕಳೆದ ಮೂರು ದಿನಗಳಿಂದ ಗಮನಿಸುತ್ತಿದ್ದು , ತೀವ್ರ ಆತಂಕ ಸೃಷ್ಠಿಸಿದೆ ಎಂದು ಮಗು ಜೈ ಭೀಮನ ತಾಯಿ ಶೃತಿ ತಿಳಿಸಿದ್ದಾರೆ. ವೈದ್ಯರು ಚಿಕಿತ್ಸೆ ನೀಡಿದ್ದು , ಸದ್ಯ ಮಗು ಮನೆಯಲ್ಲಿಯೇ ತಂಗಿ ಜೊತೆಗೆ ಚಿಕಿತ್ಸೆ ಮುಂದೆವರೆದಿದೆ. ತಾವು ಕಡು ಬಡವರಿದ್ದು , ಶೀತದ ವಾತಾವರಣವಿದ್ದು. ಯಾವುದೇ ಅಡ್ಡಪರಿಣಾಮವಾಗದಂತೆ ಜಾಗ್ರತೆ ವಹಸಲಾಗಿದೆ , ಗಾಯ ಮತ್ತಷ್ಟು ಉಲ್ಭಣವಾಗದಂತೆ ತಾವು ತೀವ್ರ ನಿಗಾವಹಿಸಿರುವುದಾಗಿ ತಾಯಿ ಶೃತಿ ತಿಳಿಸಿದ್ದಾರೆ. *ಮೂರು ದಿನವಾದರೂ ಯಾರೂ.. ಬಂದಿಲ್ಲ , ಏನೂ.. ವಿಚಾರಿಸಿಲ್ಲ..!?*- ಆ21 ರಂದು ಗುರುವಾರದಂದು ಘಟನೆ ನಡೆದಿದ್ದು , ಮಾದ್ಯಮಗಳಿಗೆ ತಡವಾಗಿ ತಿಳಿದು ಬಂದಿದೆ. ಆದರೆ ಸ್ಥಳೀಯ ಆಡಳಿತಾದಿಕಾರಿಗಳು ಜನಪ್ರತಿನಿಧಿಗಳು , ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು. ನಾಯಿ ದಾಳಿಗೊಳಗಾದ ಮಗುವಿನ ಸ್ಥಿತಿಗತಿಯನ್ನು ವಿಚಾರಿಸಲು , ಗಾಯಾಳು ಮಗುವಿನ ಮನೆಗೆ ಈವರೆಗೂ ಭೇಟಿ ನೀಡಿಲ್ಲವೆಂದು ಮಗುವಿನ ತಾಯಿ ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಜರುಗಿ ಎರೆಡು ಮೂರು ದಿನಗಳಾದರೂ ಕೂಡ , ಸಂಬಂಧಿಸಿದಂತೆ ಯಾರೂ ಈವರೆಗೆ ಯೋಗಕ್ಷೇಮ ತಮ್ಮ ಮಗುವಿನ ಯೋಗಕ್ಷೇಮ ವಿಚಾರಿಸಲು ಬಂದಿಲ್ಲ. ಇದೆಂತಹ ದೌರ್ಭಾಗ್ಯವಾಗಿದೆ ನೋಡಿ , ನಾವು ಕಡು ಬಡವರು ದಲಿತರು ಎನ್ನೋ ಕಾರಣಕ್ಕೆ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಅದೇ ಮುನ್ಸಿಪಲ್ಟಿ ಮೆಂಬರ್ ಮಕ್ಕಳು ಸಂಬಂಧಿಕರಿಗೆ ಅಧಿಕಾರಿಗಳಿಗೆ ಅಥವಾ ಅವರ ಮಕ್ಕಳಿಗೆ , ನಾಯಿ ಕಚ್ಚಿದ್ದರೆ ಇಷ್ಟೊತ್ತಿಗಾಗಲೇ ಪೇಪರನ್ವರು ಟೀವಿಯವರು ಜಗ್ಗಾಡಿ ಜಗ್ಗಾಡಿ ವರದಿ ಮಾಡುತ್ತಿದ್ದರು. ಶಾಸಕರು ಮನೆಗೆ ಬರುತ್ತಿದ್ದರು ಪಪಂ ಮೆಂಬರ್ ಗಳೆಲ್ಲಾ , ನಾಯಿ ದಾಳಿಗೊಳಗಾದವರ ಮನೆ ಅಂಗಳದಲ್ಲೇ ಕುರ್ಚಿ ಹಾಕಿಕೊಂಡು ಕೂರುತ್ತಿದ್ದರು. ಅಧಿಕಾರಿಗಳು ಹಗಲು ರಾತ್ರಿ ದಾಳಿಗೊಳಗದಾವರ ಅಂಗಳದಲ್ಲೇ , ಉಳಿದು ಕೊಂಡು ಯೋಗ ಕ್ಷೇಮ ವಿಚಾರಿಸುತ್ತಿದ್ದರು. ನಮ್ಮ ದುರಾದೃಷ್ಟಕ್ಕೆ ನಾವು ಕಡು ಬಡವರು ಕೂಲಿ ಕಾರ್ಮಿಕರು , ದಲಿತ ಬಡಜನಾಗಂದವರು ಈ ಕಾರಣಕ್ಕೆ ನಮ್ಮ ಮಗು ಗಂಭೀರವಾಗಿ ಗಾಯವಾಗಿದ್ದರೂ ಕೂಡ. ಕಳೆದ ಮೂರು ದಿನಗಳಿಂದಲೂ , ಯಾರೊಬ್ಬರೂ ಕೂಡ ಮನೆ ಕಡೆ ದಾವಿಸಿಲ್ಲ ಎಂದು ಮಗುವಿನ ತಾಯಿ ಶೃತಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ನಾಯಿ ದಾಳಿಯಿಂದಾಗಿ ತನ್ನ ಮಗು ಗಂಭೀರವಾಗಿ ಗಾಯಗೊಂಡಿದ್ದು , ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದೆ. ಘಟನೆ ಜರುಗಿ ಮೂರು ದಿನಗಳಾದರೂ ಕೂಡ , ಗಾಯದ ಸ್ಥಿತಿ ಗತಿ ಸುಧಾರಿಸಿಲ್ಲ ನೋವು ಕಡಿಮೆಯಾಗಿಲ್ಲ ವಿಪರೀತ ಭಾವು ಉಂಟಾಗಿದೆ. ಖಾಸಗೀ ಆಸ್ಪತ್ರೆಯ ಲ್ಲಿ ಚಿಕಿತ್ಸೆ ಪಡೆಯಲು ಅಶಕ್ತರಾಗಿದ್ದು , ಹೆಚ್ಚಿನ ಅಗತ್ಯ ಚಿಕಿತ್ಸೆಯನ್ನು ಒದಗಿಸುವ ಆರ್ಥಿಕ ಶಕ್ತಿ ತನ್ನ ಬಳಿ ಇಲ್ಲವೆಂದು. ಗಾಯ ಗುಣಮುಖವಾಗುವವರೆಗೆ ನಿರಂತರ ಚಿಕಿತ್ಸೆ ಒಸಗಿಸಬೇಕಿದ್ದು, ನಿರಂತರ ಚಿಕಿತ್ಸೆ ದೊರಕಿಸುವ ಶಕ್ತಿ ತನ್ನ ಬಳಿ ಇಲ್ಲ ಎಂದು ಮಗುವಿನ ತಾಯಿ ಶೃತಿ ಅಳಲು ತೋಡಿಕೊಂಡಿದ್ದಾರೆ. ಗಾಯಾಳು ಮಗುವಿನ ಮನಗೆ ಜನಪ್ರತಿನಿಧಿಗಳು , ಪಪಂ ಅಧಿಕಾರಿಗಳು ಶಾಸಕರ ಕಚೇರಿಯ ಸಿಬ್ಬಂದಿಯವರು ಶೀಘ್ರವೇ ಭೇಟಿ ನೀಡಿ. ವಸ್ತು ಸ್ಥಿತಿಯನ್ನರಿತು ಅಗತ್ಯ ನೆರವು ನೀಡಬೇಕಿದ್ದು , ಗಾಯಳು ಮಗುವಿನ ಕುಟುಂಬಕ್ಕೆ ಸಾಂತ್ವಾನ ಹಾಗೂ ಧೈರ್ಯ ತುಂಬ ಬೇಕಿದೆ. ಮತ್ತು ಗಾಯಾಳು ಮಗುವಿಗೆ ಅಗತ್ಯ ಚಿಕಿತ್ಸೆ ದೊರಕಿಸುವ ನಿಟ್ಟಿನಲ್ಲಿ , ಸೂಕ್ತ ಕ್ರಮಗಳನ್ನು ಸಂಬಂಧಿಸಿದ ಇಲಾಖಾಧಿಕಾರಿಗಳು ಕೈಗೊಳ್ಳಬೇಕಿದೆ. ಅಗತ್ಯ ಆರ್ಥಿಕ ಪರಹಾರ ಚಿಕಿತ್ಸಾ ನೆರವುಗಳನ್ನು , ಜನಪ್ರತಿನಿಧಿಗಳು ಅಧಿಕಾರಿಗಳು ಶೀಘ್ರವೇ ಒದಗಸಬೇಕಿದೆ. ಈ ನಿಟ್ಟಿನಲ್ಲಿ ಪಪಂ ಅಧಿಕಾರಿಗಳು ಜನಪ್ರತಿನಿಧಿಗಳು , ಗಾಯಾಳು ಮಗುವಿನ ಮನೆಗೆ ಭೇಟಿ ನೀಡಬೇಕೆಂದು ವಂದೇ ಮಾತರಂ ಜಾಗೃತಿ ವೇದಿಕೆ. ಮಾದಿಗ ದಂಡೋರ ಹೋರಾಟ ಸಮತಿ , ದಲಿತ ಸಂಘರ್ಷ ಸಮಿತಿ , ಬಾಬು ಜಗ ಜೀವನ್ ರಾಮ್ ಸಂಘ, ಅಂಬೇಡ್ಕರ್ ಸಂಘ ಸೇರಿದಂತೆ. ವಿವಿದ ಸಂಘಟನೆಗಳ ಪದಾಧಿಕಾರಿಗಳು , ಈ ಮೂಲಕ ಒತ್ತಾಯಿಸಿದ್ದಾರೆ. *ಬೀದಿ ನಾಯಿಗಳ ನಿಯಂತ್ರಿಸುವಂತೆ ಒತ್ತಾಯ*- ಪಟ್ಟಣದ ಪ್ರತಿ ಗಲ್ಲಿ ಗಲ್ಲಿಗಳಲ್ಲಿ , ಹತ್ತಾರು ಬೀದಿನಾಯಿಗಳಿವೆ. ಅವು ರಸ್ತೆಗಳಲ್ಲಿಯೇ ಸಂಸಾರ ನಡೆಸಿ ರಸ್ತೆ ಬದಿಯಲ್ಲಿಯೇ ಸಂತಾನ ಹೆಚ್ಚಿಸಿಕೊಳ್ಳುತ್ತಿವೆ , ಅವು ಮಕ್ಕಳ ಮಹಿಳೆಯರ ವೃದ್ಧರ ಮೇಲೆ ದಾಳಿ ಮಾಡುತ್ತಿವೆ. ಮನೆಯಂಗಳದಲ್ಲಿ ಕಟ್ಟಿಹಾಕಿರುವ ದನಕರು ಸಾಕು ಪ್ರಾಣಿಗಳನ್ನು ತಿಂದು ತೇಕುತ್ತಿವೆ, ಮಕ್ಕಳ ಮೇಲೆ ದಾಳಿ ಪ್ರಕರಣಗಳು ಅತೀ ಹೆಚ್ಚಾಗಿ ಜರುಗುತ್ತಿವೆ. ನಾಯಿಗಳು ರಸ್ತೆಯಲ್ಲಿಯೇ ಮಲಗುತ್ತಿದ್ದು , ವಾಹನ ಸವಾರರು ತೀವ್ರ ಆತಂಕದಿಂದ ವಾಹನ ಚಲಾಯಿಸುವ ದುಸ್ಥಿತಿ ನಿರ್ಮಾಣವಾಗಿದೆ. ಕೆಲವು ಸಾರಿ ನಾಯಿಗಳು ಚಲಿಸುವ ವಾಹನಗಳ ಮೇಲೆ ಎರಗುತ್ತಿದ್ದು , ವಾಹನದಿಂದ ಬಿದ್ದು ಗಂಭೀರಗೊಂಡಿರುವ ಸಾಕಷ್ಟು ಘಟನೆಗಳ ಸಾಕ್ಷ್ಯಗಳಿವೆ. ಕಾರಣ ಬೀದಿನಾಯಿಗಳ ಸಂಖ್ಯೆ ನಿಯಂತ್ರಣ ಹಾಗೂ ದಾಳಿ ತಡೆಯು ನಿಟ್ಟಿನಲ್ಲಿ , ಶಾಸಕರು ಸೇರಿದಂತೆ ಜನಪ್ರತಿನಿಧಿಗಳು , ಹಾಗೂ ತಾಲೂಕಾಡಳಿತ ಸೇರಿದಂತೆ. ಸ್ಥಳೀಯ ಆಡಳಿತಾಧಿಕಾರಿಗಳು , ಶೀಘ್ರವೇ ಅಗತ್ಯ ಕ್ರಮಗಳನ್ನು ಜರುಗಿಸಬೇಕೆಂದು ನಾಗರೀಕರು ಈ ಮೂಲಕ ಆಗ್ರಹಿಸಿದ್ದಾರೆ. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428*

