ರೈತರು ಜಿಂಕ್ ತೆಗೆದುಕೊಳ್ಳದಿದ್ದರೆ ಅಂಗಡಿಯವರು ಬದುಕಬೇಕೊ ಬೇಡವೊ..

*ರೈತರು ಜಿಂಕ್ ತೆಗೆದುಕೊಳ್ಳದಿದ್ದರೆ ಅಂಗಡಿಯವರು ಬದುಕಬೇಕೊ ಬೇಡವೊ..!?

*ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಸುತ್ತಮುತ್ತಲಿನ ಹಲವು ಗ್ರಾಮಗಳ ರೈತರು ಹಗಲು ರಾತ್ರಿ ಎನ್ನದೆ ಯೂರಿಯಾ ಗೊಬ್ಬರಕ್ಕಾಗಿ ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ.

ರೈತರು ಬೆಳ್ಳಟ್ಟಿ ಗ್ರಾಮದಲ್ಲಿ ಇರುವ ರಸಗೊಬ್ಬರ ಅಂಗಡಿಗಳ ಮುಂದೆ ಬೆಳಗಾಗುವ ಮೊದಲೆ ಸರದಿ ಸಾಲಿನಲ್ಲಿ ನಿಲ್ಲಬೇಕಾದ ಪರಸ್ಥಿತಿ ಎದುರಾಗಿದೆ.ಅಂಗಡಿ ಮಾಲಿಕರು ರೈತರಿಗೆ ಗೊಬ್ಬರದ ಜೊತೆಗೆ ಹೆಚ್ಚಿನ ಹಣ ನೀಡಿ ಕಡ್ಡಾಯವಾಗಿ ಜಿಂಕ್ ತೆಗೆದುಕೊಳ್ಳಬೇಕೆಂದು ತಾಕೀತು ಮಾಡುತ್ತಿದ್ದಾರೆ.ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾದ ಸಹಾಯಕ ಕೃಷಿ ನಿರ್ಧೇಶಕ ಮನಗೂಳಿ ಇವರು ಮೌನಕ್ಕೆ ಶರಣಾಗಿದ್ದು ಅಂಗಡಿ ಮಾಲಿಕರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆಂದು ರೈತರು ಆರೋಪಿಸುತ್ತಿದ್ದಾರೆ.

ಜಿಂಕ್ ನಿರಾಕರಿಸಿದ ಕೆಲವು ರೈತರು ಸಹಾಯಕ ಕೃಷಿ ನಿರ್ಧೇಶಕರಿಗೆ ಪೋನ್ ಕರೆ ಮಾಡಿದರೆ ಗೊಬ್ಬರದ ಅಂಗಡಿಯವನ ಹೊಟ್ಟಿಗೆ ಹೊಡಿಯಲಿಕ್ಕಾಗಲ್ಲ ಅಂಗಡಿಯವನು ಬದುಕಬೇಕೊ ಬೇಡವೊ ಎಂದು ಎಡಿ ಮನಗೂಳಿಯವರು ಉತ್ತರಿಸುತ್ತಿದ್ದಾರೆಂದು ಅನ್ನಧಾತರು ತಮ್ಮ ದು:ಖವನ್ನು ತೋಡಿಕೊಳ್ಳುತ್ತಿದ್ದಾರೆ.

ಸರ್ಕಾರದ ನಿಯಮದ ಪ್ರಕಾರ ರಸಗೊಬ್ಬರದ ಅಂಗಡಿ ಮಾಲಿಕರು ಅಂಗಡಿ ಮುಂದೆ ಕಡ್ಡಾಯವಾಗಿ ದಾಸ್ತಾನು ಹಾಗೂ ದರಪಟ್ಟಿ ಮಾಹಿತಿಯನ್ನು ಪ್ರದರ್ಶಿಸುವ ಮೂಲಕ ನಿಗದಿತ MRP ದರದಲ್ಲಿಯೆ ರಸಗೊಬ್ಬರವನ್ನು ಮಾರಾಟ ಮಾಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

*ವರದಿ*✍️ಚಂದ್ರಶೇಖರ ಸೋಮಣ್ಣವರ

Leave a Reply

Your email address will not be published. Required fields are marked *