ನಶಾಮುಕ್ತ ಭಾರತ ಅಭಿಯಾನ ವಿದ್ಯಾರ್ಥಿಗಳು ದುಷ್ಟಗಳಿಂದ ದೂರವಿರಬೇಕು : ಮಹಾಂತೇಶ.

ನಶಾಮುಕ್ತ ಭಾರತ ಅಭಿಯಾನ ವಿದ್ಯಾರ್ಥಿಗಳು ದುಷ್ಟಗಳಿಂದ ದೂರವಿರಬೇಕು : ಮಹಾಂತೇಶ

ಗದಗ : ಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಮದ್ಯಪಾನ, ಧೂಮ್ರಪಾನಗಳಂತ ದುಶ್ಚಟಗಳಿಂದ ದೂರಯಿದ್ದು, ದೇಶದ ಆಸ್ತಿಯಾಗಿ ಬೆಳೆಯಬೇಕು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿಗಳಾದ ಮಹಾಂತೇಶ ಕೆ. ಅವರು ಹೇಳಿದರು. ೭೯ನೇ ಸ್ವಾತಂತ್ರö ದಿನಾಚರಣೆ ಅಂಗವಾಗಿ ಹಾಗೂ ನಶಾಮುಕ್ತ ಭಾರತ ಅಭಿಯಾನದ ನಿಮಿತ್ತ ನಗರದ ತೋಂಟದ ಸಿದ್ಧೇಶ್ವರ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಪದವಿ ಪೂರ್ವ ಮಹಾವಿದ್ಯಾಲಯ ಆವರಣದಲ್ಲಿ ಸಸಿ ನಡೆವುದರ ಮೂಲಕ ನಶಾಮುಕ್ತ ಭಾರತ ಅಭಿಯಾನದ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿ, ನಶಾಮುಕ್ತ ಭಾರತ ಅಭಿಯಾನ ಆರಂಭವಾಗಿ ೫ ವರ್ಷ ಕಳೆದಿವೆ. ಆದರೂ ಬಳಕೆಯ ಪ್ರಮಾಣ ಕಡಿಮೆ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದರ ದುಷ್ಪರಿಣಾಮದ ಬಗ್ಗೆ ಯುವ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯವಾಗಿದೆ. ಆದ್ದರಿಂದ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ನಶಾಮುಕ್ತ ಭಾರತ ಅಭಿಯಾನ ಯೋಜನೆಯಡಿಯಲ್ಲಿ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಲ್ಲಿ ಮಾದಕ ವಸ್ತು ಸೇವನೆ ವಿರೋಧಿ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದು ತಿಳಿದರು.

ಸಂದರ್ಭದಲ್ಲಿ ಗದಗ ತಾಲೂಕ ಎಂಆರ್‌ಡಬ್ಲೂ ಖಾಜಾಹಸೇನ ಕಾತರಕಿ, ಕಾಲೇಜಿನ ಪ್ರಾಚಾರ್ಯ ವೈ.ಎಸ್. ಮತ್ತೂರ, ಶಿಲ್ಪಾ ಪಾಟೀಲ, ನಾಗರತ್ನಾ, ಎನ್.ವಿ. ಕಡಗದ, ಕೆ.ಎಸ್. ಮುಲ್ಲಾಫೀರ್, ವಿಜಯಲಕ್ಷಿö್ಮÃ ಕೊಣ್ಣೂರ, ಎಸ್.ಎಸ್. ನಿಲೋಗಲ್ಲ, ಪ್ರತಿಭಾ ಪಟ್ಟೇದ, ಎನ್.ಎಂ.ಮಕಾAದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *