ದೊಡ್ಡತಾಂಡೆ: ಡೆಂಗ್ಯೂ ವಿರೋಧಿ ಮಾಸಾಚರಣೆ ಅಡ್ವೋಕೇಸಿ ಸಭೆ ಡೆಂಗೀ ಸೋಲಿಸಲು ನೀರಿನ ಪರಿಕರಗಳನ್ನು“ಪರಿಶೀಲಿಸಿ, ಸ್ವಚ್ಚಗೊಳಿಸಿ, ಮುಚ್ಚಿಡಿ” ಸಿದ್ದಪ್ಪ ಲಿಂಗದಾಳ

ಗದಗ

ಜುಲೈ ೩೧ : ಡೆಂಗ್ಯೂ, ಚಿಕುಂಗುನ್ಯ ರೋಗವು ಈಡಿಸ್ ಇಜಿಪ್ಟೆ ಸೊಳ್ಳೆಯು ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ , ಬ್ಯಾರಲ್ ಡ್ರಂಮ್ ಸಿಮೇಂಟ್‌ಡೋಣಿಯಲ್ಲಿ ಸಂಗ್ರಹಿಸಿದ ನೀರನ ತೊಟ್ಟಿಯಲ್ಲಿ ಟೀ-ಕಾಫಿ ಇತರೆ ಘನ ತ್ಯಾಜ್ಯದಲ್ಲಿ ಲಾರ್ವಾ (ಸೊಳ್ಳೆ) ಬೆಳೆಯುತ್ತವೆ ಆದ್ದರಿಂದ ಡೆಂಗೀ ಸೊಲಿಸಲು ಹೆಜ್ಜೆಗಳು “ಪರಿಶೀಲಿಸಿ, ಸ್ವಚ್ಚಗೊಳಿಸಿ, ಮುಚ್ಚಿಡಿ” ಎಂಬ ಈ ವರ್ಷದ ಘೋಷವಾಕ್ಯವನ್ನು ಆರೋಗ್ಯ ಇಲಖೆಯ ಮಾಹಿತಿಯ ಸದುಉಪಯೋಗವನ್ನು ಪಡೆದು ಡೆಂಗೀ ತಡೆಗಟ್ಟಬೇಕೆಂದು ಆರೋಗ್ಯ ನಿರೀಕ್ಷಣಾಧಿಕಾರಿಗಳದ ಸಿದ್ದಪ್ಪ ಎನ್ ಲಿಂಗದಾಳ ಹೇಳಿದರು.

ಅವರು ಕರ್ನಾಟಕ ಸರ್ಕಾರ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗದಗ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಮತ್ತು ತಾಲುಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಗದಗ, ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಲಕ್ಕುಂಡಿ ಆಯುಷ್ಮಾನ್ ಆರೋಗ್ಯ ಮಂದಿರ ಅಡವಿಸೋಮಾಪೂರ ಇವರುಗಳ ಸಂಯುಕ್ತಾಶ್ರಯದಲ್ಲಿ ದೊಡ್ಡತಾಂಡೆ(ಜಲಶAಕರ ನಗರ೨)ಶ್ರೀಬಲಾಜಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಡೆಂಗ್ಯೂ ವಿರೋಧಿ ಮಾಸಾಚರಣೆ ಅಡ್ವೋಕೇಸಿ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿದರುಯಾವುದೇ ಜ್ವರ ಸಮಸ್ಯೆ ಇದ್ದರೆ ರಕ್ತಪರೀಕ್ಷೆ ಮಾಡಿಕೊಂಡು ಚಿಕಿತ್ಸೆಯನ್ನು ಪಡೆಯಿರಿ ನಿಮ್ಮ ಮನೆಯಲ್ಲಿ ನೀರು ತುಂಬಿರುವ ಪರಿಕರಗಳನ್ನು ವಾರಕ್ಕೊಮ್ಮೆ ಸ್ವಚ್ಚವಾಗಿ ತೊಳೆದು ಒಣಗಿಸಬೇಕು, ನೀರಿನ ಪರಿಕರಗಳನ್ನು ಮುಚ್ಚಬೇಕು. ಮನೆಯ ಕಿಡಕಿಗಳಿಗೆ ಜಾಲರಿಗಳನ್ನು ಬಳಸಬೇಕು ಮತ್ತು ಮಲಗುವಾಗ ಸೊಳ್ಳೆ ಪರದೇಗಳನ್ನು ಬಳಸಬೇಕು, ಲಾರ್ವಾ ನಾಶ ಪಡಿಸಿ ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತಣ ಮಾಡಬೇಕು ಡೆಂಗ್ಯೂ ಭಯಬೇಡ ಮತ್ತು ಸಾಯಂಕಾಲ ಬೇವಿನಸೊಪ್ಪಿನ ದೂಮೀಕರಣ ಮಾಡಬೇಕು ಎಂದು ಹೇಳಿದರು.

ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮುತ್ತಪ್ಪ ಹಟ್ಟಿಮನಿ ಮಾತನಾಡಿ ಡೆಂಗ್ಯೂ ಜ್ವರದಲ್ಲಿ ೩ ವಿಧಗಳು ಇವೆ ೧.ಡೆಂಗ್ಯೂ ಜ್ವರ ೨.ಡೆಂಗ್ಯೂ ರಕ್ತ ಸ್ರಾವ ೩.ಡೆಂಗ್ಯೂ ಶಾಕ ಸಿಡ್ರೋಮ್ ಈ ರೋಗಕ್ಕೆ ನಿಖರವಾದ ಚಿಕಿತ್ಸೆ ಇರುವುದಿಲ್ಲಾ ರೋಗದ ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುವುದು ಅದಕ್ಕಾಗಿ ಈ ಒಂದು ರೋಗದ ಬಗ್ಗೆ ಜನರಿಗೆ ಹೆಚ್ಚಿಗೆ ಅರಿವನ್ನು ಮೂಡಿಸವ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿದ್ದು ಯಾವುದೇ ಜ್ವರ ಸಮಸ್ಯೆ ಇರಲಿ ನಿಮ್ಮ ಮನೆ ಬಾಗಿಲುಗೆ ಬರುವ ಆರೋಗ್ಯ ಸಿಬ್ಬಂದಿಗಳಲ್ಲಿ ಅಥವಾ ಆಶಾ ಕಾರ್ಯಕರ್ತೇಯರಲ್ಲಿ ರಕ್ತ ಪರೀಕ್ಷೆ ಮಾಡಿಸಿಕೋಳ್ಳಿರಿ ಎಂದು ಹೇಳಿದರು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ವಾಯ್ ಎನ್ ಕಡೇಮನಿ ಮಾತನಾಡಿ ಡೆಂಗ್ಯೂ ರೋಗ ಬರದ ಹಾಗೇ ಮುನ್ನೇಚರಿಕೆ ಕ್ರಮಗಳೆಂದರೆ ೧. ಮನೆಯ ಸುತ್ತ ಮುತ್ತ ನೀರು ನಿಲ್ಲದ ಹಾಗೆ ಸ್ವಚ್ಚವಾಗಿ ಇಡಬೇಕು ಮತ್ತು ಮನೆಯ ಒಳಗೆ ನೀರು ತುಂಬುವ ಪಾತ್ರೆಗಳನ್ನು ವಾರಕ್ಕೊಮ್ಮೆ ಸ್ವಚ್ಚವಾಗಿ ತೊಳೆದು ಒಣಗಿಸಿ ನೀರು ತುಂಬಿ ಮೇಲಗಡೆ ಮುಚ್ಚಬೇಕು. ಸೊಳ್ಳೆ ಪರದೇಗಳನ್ನು ಬಳಸಬೇಕು ೨. ರಾಸಾಯನಿಕ ವಿಧಾನ ಧೂಮೀಕರಣ ಮಾಡುವುದು: ೩. ಜೈವಿಕ ನಿಯಂತ್ರಣ ಲಾರ್ವಾಹಾರಿ ಮೀನುಗಳನ್ನು ಸಾಕಾಣೆ ಮಾಡಿ ಲಾರ್ವಾ ನಾಶ ಪಡಿಸುವಂತಹ ಮಹತ್ವದ ಕಾರ್ಯವನ್ನು ಮಾಡಬೇಕೆಂದು ತಿಳಿಸಿದರು .

ಪ್ರಾಸ್ಥಾವಿಕವಾಗಿ ಪ್ರಾಥಮಿಕ ಆರೋಗ್ಯ

ಸುರಕ್ಷಾಧಿಕಾರಿಗಳಾದ ಸವಿತಾ ಪವಾರ ಮಾತನಾಡಿದರು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಅನಿಲ ಕಾರಬಾರಿ ಮತ್ತು ತಾಂಡೆಯ ಹಿರಿಯರು ಮತ್ತು ಆಶಾ ಕಾರ್ಯಕರ್ತೆಯರುಗಳು ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಲಕ್ಷಿö್ಮÃ ಪೂಜಾರ ನಿರೂಪಿಸಿದರು,ಲಲಿತಾ ಅಂಗಡಿ ಸ್ವಾಗತಿಸಿದರು ಕೋನೆಯಲ್ಲಿ ಮಂಜುಳಾ ಆರಿ ವಂದಿಸಿದರು.ಈ ಸುದ್ದಿಯನ್ನು ಪ್ರಕಟಿಸಲು ವಿನಂತಿ ಧನ್ಯವಾದಗಳೋಂದಿಗೆ ಮುತ್ತಪ್ಪ ಹಟ್ಟಿಮನಿ ಆರೋಗ್ಯ ನಿರೀಕ್ಷಣಾಧಿಕಾರಿಗಳು ೮೮೬೭೩೫೬೩೭೫

Leave a Reply

Your email address will not be published. Required fields are marked *