ಸಡಗರ ಸಂಭ್ರಮದಲ್ಲಿ ಜರುಗಿದ ಬಮ್ಮಲಿಂಗೇಶ್ವರ ಜಾತ್ರಾಮಹೋತ್ಸವ.

ಸಡಗರ ಸಂಭ್ರಮದಲ್ಲಿ ಜರುಗಿದ ಬಮ್ಮಲಿಂಗೇಶ್ವರ ಜಾತ್ರಾಮಹೋತ್ಸವ

ಅಫಜಲಪುರ ತಾಲ್ಲೂಕಿನ ಸುಕ್ಷೇತ್ರ ಬಂಕಲಗಾ ಗ್ರಾಮದಲ್ಲಿ ಸೋಮವಾರ ಶ್ರೀ ಗುರು ಬಮ್ಮಲಿಂಗೇಶ್ವರ ಜಾತ್ರಾಮಹೋತ್ಸವ ಸಾವಿರಾರು ಭಕ್ತರ ಮಧ್ಯೆ ಸಡಗರ ಸಂಭ್ರಮದಿಂದ ಜರುಗಿತು. ಶ್ರೀ ಬಮ್ಮಲಿಂಗೇಶ್ವರ ಹಿರೇಮಠದ ಪರಂ ಪೂಜ್ಯ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಭಕ್ತರಿಗೆ ಆಶೀರ್ವಾದ ನೀಡಿದರು.

ತಾಲೂಕಾ ಪಂಚಾಯತ್ ಮಾಜಿ ಅಧ್ಯಕ್ಷ ಶ್ಯಾಮರಾವ್ ಪಾಟೀಲ ಮಾತನಾಡಿ, ಶ್ರೀ ಬಮ್ಮಲಿಂಗೇಶ್ವರ ಜಾತ್ರೆ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ ಎಂದ ಅವರು ಯಾವುದೇ ಜಾತಿ ಹಾಗೂ ಧರ್ಮ ಭೇದವಿಲ್ಲದೆ, ಎಲ್ಲರೂ ಭಾವೈಕ್ಯತೆಯಿಂದ ಜಾತ್ರೆ ಮಹೋತ್ಸವವನ್ನು ಆಚರಿಸುವ ಜಾತ್ರೆಯಾಗಿದೆ, ಎಂದರು. ಜಾತ್ರಾಮಹೋತ್ಸವದ ಅಂಗವಾಗಿ ಬೆಳಿಗ್ಗೆ 6 ಗಂಟೆಗೆ ಮೂಲ ಗದ್ದಿಗೆ ಸಹಸ್ರ ಬಿಲ್ವಾರ್ಚನೆ, ರುದ್ರಾಭಿಷೇಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.ನಂತರ ಮುಂಜಾನೆ 9 ಗಂಟೆಗೆ ಪುರುವಂತರ ಸೇವೆ ,ಗಂಗಾಸ್ಥಾನ ಹಾಗೂ ಶ್ರೀ ಬಮ್ಮಲಿಂಗೇಶ್ವರ ಪಲ್ಲಕಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಕ್ತರ ಜೈಕಾರದೊಂದಿಗೆ ನೆರವೇರಿತು. ಮಧ್ಯಾಹ್ನ 12 ಗಂಟೆಗೆ ಅಗ್ನಿ ಪ್ರವೇಶ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ಜಾತ್ರೆಗೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಮುಸ್ಲಿಂ ಸಮುದಾಯದ ಮುಖಂಡರಾದ ಲಾಲ್ ಮಹ್ಮದ ಅವರು ಕಲ್ಪಿಸಿದರು

.ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯರು ಕಲ್ಲಪ್ಪ ಪ್ಯಾಟಿ, ವಿಠಲ ಜಾಮಗೊಂಡ್, ಗ್ರಾಪಂ ಸದಸ್ಯರು ಗುರುಲಿಂಗಪ್ಪ ನಿರೂಣಿ ಮತ್ತು ಗುರುಲಿಂಗಪ್ಪ ಮಂಟಗಿ, ಮಹಾಂತಪ್ಪ ನೂಲಾ, ಮಲ್ಲಿಕಾರ್ಜುನ ಎಸ್. ಪಾಟೀಲ, ದೂಳಪ್ಪ ಮಂಟಗಿ, ಕರಪ್ಪ ಜಿಡ್ಡಿಮನಿ, ಇಮಾಮ್ ಸಾಹೇಬ ದೇವರಮನಿ, ಉಪನ್ಯಾಸಕ ರಮಜಾನ್ ಮಕಂದರ್, ಶಿಕ್ಷಕ ಜಾಪರ ದೇವರಮನಿ, ಮುಖಂಡರಾದ ಈರಣ್ಣಗೌಡ ಕಡಕೊಳ್, ಸಂಜಯಕುಮಾರ ನೂಲಾ, ಬಸವರಾಜ ಕಾಂಬಳೆ, ದಶರಥ ಬಿರಾದಾರ, ಶಿವಣ್ಣ ಕಾಶಿನಾಥ ಜೇವೂರ, ಮುತ್ತಪ್ಪ ಹೊಸ್ಮನಿ, ತಾಲೂಕಾಧ್ಯಕ್ಷ ದತ್ತಾತ್ರೇಯ ಹರಿಜನ್, ರಮೇಶ ಸುತ್ತಗುಡಿ, ಕಾಶಿನಾಥ ಜಮಾದಾರ ಮತ್ತು ಇತರ ಹಿರಿಯರು ಉಪಸ್ಥಿತರಿದ್ದರು…

Leave a Reply

Your email address will not be published. Required fields are marked *