
ಸೇವಾ ನಿವೃತ್ತಿ ಹೊಂದಿದ ಮಾಲತೇಶ್ ಶಿಕ್ಷಕರಿಗೆ ಸನ್ಮಾನ
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕಳಸ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆಯನ್ನು ಸಲ್ಲಿಸಿ ಸೇವಾ ನಿವೃತ್ತಿಗೊಂಡ ಶಿಕ್ಷಕ ಮಾಲತೇಶ್.ಎಚ್.ಬಡಪ್ಪನವರ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.

ಮೊದಲು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಸ್.ಬಿ.ನೆಗಳೂರಮಠ, ಎಮ್.ಬಿ.ರಾಯನಗೌಡ್ರ, ಎಮ್.ಆರ್.ಜಿಗಳೂರ, ಆರ್.ಎನ್.ಕೊಡ್ಲಿ ಇವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಮುಖ್ಯೋಪಾದ್ಯಾಯ ಬಿ.ಎಸ್.ಮುಳಗುಂದ ಇವರು ಸ್ವಾಗತಿಸಿದರು. ಶಿಕ್ಷಕ ಶರಣು ನಾಗಣ್ಣವರ ನಿರೂಪಣೆ ಮಾಡಿದರು. ಶಿಕ್ಷಕಿ ಸಲ್ಮಾ ಮೀರಾನವರ ಇವರು ಮಾಲತೇಶ್ ಶಿಕ್ಷಕರ ಬಗ್ಗೆ ಪರಿಚಯಿಸಿದರು. ಶಿಕ್ಷಕಿ ಗೀತಾ ಕಟ್ಟಿಮನಿ ವಂದನಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಭೂದಾನಿ ಮಲಕಾಜಪ್ಪ ಪ್ಯಾಟಿ, SDMC ಅಧ್ಯಕ್ಷ ಎಮ್.ಎನ್.ನಾಗಶೆಟ್ಟಿ ಸೇರಿದಂತೆ ಹಲವು ಶಿಕ್ಷಕರು, ಗುರುಮಾತೆಯರು, ಮುದ್ದು ಮಕ್ಕಳು, ಸಂಪನ್ಮೂಲ ವ್ಯಕಿಗಳು, ಹರ್ಲಾಪುರ ವಲಯದ ಶಾಲೆಯ ಮುಖ್ಯೋಪಾಧ್ಯಾಯರು, SDMC ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ✍️ಚಂದ್ರಶೇಖರ ಸೋಮಣ್ಣವರ
