
ಬಾಲ ನ್ಯಾಯ ಖಾಯ್ದೆ ಅಡಿ ಮಕ್ಕಳ ರಕ್ಷಣೆ ,ಪಾಲನೆ ಮತ್ತು ಪೋಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ವಾಗಿದೆ: ಡಾ.ದುರಗೇಶ
ಗದಗ(ಕರ್ನಾಟಕ ವಾರ್ತೆ) ಸಪ್ಟೆಂಬರ್4:ಅನಾಥ,ಏಕ ಪಾಲಕ,ಭಿಕ್ಷಾಟನೆ ಮಾಡುತ್ತಿದ್ದ ಮಕ್ಕಳನ್ನು ದೈವಾಂಶ ಮಕ್ಕಳೆಂದು ತಿಳಿದು ಅವರ ಪಾಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ದುರಗೇಶ ಅವರು ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಸಭಾಭವನದಲ್ಲಿ ಗುರುವಾರ ಜರುಗಿದ ಮಕ್ಕಳ ರಕ್ಷಣೆ ಮತ್ತು ಪಾಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಾಲಮಂದಿರದಲ್ಲಿರುವ ಮಕ್ಕಳ ಪಾಲನೆಯನ್ನು ಚೆನ್ನಾಗಿ ಮಾಡವುದು ನಮ್ಮೆಲ್ಲರ ಆದ್ಯ ಕರ್ತವ್ಯ ವಾಗಿದೆ,ಸಮಿತಿಯಲ್ಲಿರುವ ಸರ್ವ ಸದಸ್ಯರು ಜೆ ಜೆ ಆ್ಯಟ್ ಕುರಿತು ಸಮಗ್ರವಾಗಿ ತಿಳಿದುಕೊಳ್ಳಬೇಕು ಅಂದಾಗ ಸಮಿತಿಯಿಂದ ಉತ್ತಮ ಕಾರ್ಯ ಕೈಗೊಂಡು ಮಕ್ಕಳನ್ನು ರಕ್ಷಿಸಿ ಪಾಲನೆ ಮಾಡಬಹುದಾಗಿದೆ ಬಾಲಮಂದಿರದಲ್ಲಿ ಕೆಲವು ಮಕ್ಕಳು ಅತಿಯಾಗಿ ತುಂಟತನ ಚೇಷ್ಠೆ ಮಾಡುತ್ತಿರುತ್ತಾರೆ ಅಂತಹವರನ್ನು ಗಮನಿಸಿ ಅವರನ್ನು ಬೇರೆ ಕೆಲಸಗಳಲ್ಲಿ ತೊಡುಗುವಂತೆ ಮಾಡಬೇಕು ಎಂದರು
ಮಕ್ಕಳ ರಕ್ಷಣೆ ಮತ್ತ ಪಾಲನೆಗೆ ನೇಮಿಸಿದ ಸಮಿತಿಯು ಪ್ರತಿ ತಿಂಗಳು ಸಂಬಂಧಿಸಿದ ಬಾಲಂಮದಿರಗಳಿಗೆ ಭೇಟಿ ನೀಡಿ ಅಲ್ಲಿನ ವಾಸ್ತವ ಸ್ಥಿತಿ ಯನ್ನು ತಿಳಿದುಕೊಳ್ಳಬೇಕು,ಅಲ್ಲಿರುವ ಕುಂದು ಕೊರತೆಗಳನ್ನು ಸರ್ಕಾರದ ಗಮನಕ್ಕೆ ತರಬೇಕು ಮತ್ತು ಅಲ್ಲಿರುವ ಮಕ್ಕಳ ಬೇಡಿಕೆಗಳನ್ನು ತಿಳಿಯಬೇಕು, ಇಂತಹ ಸಂದರ್ಭದಲ್ಲಿ ಎಲ್ಲರ ಪಾಲ್ಗೊಳುವಿಕೆ ಅತ್ಯವಶ್ಯಕವಾಗಿದೆ ಸಮಾಜದಲ್ಲಿರುವ ಮಕ್ಕಳ ಭವಿಷ್ಯವನ್ನು ನಿರ್ಮಾಣ ಮಾಡಲು ದೊರೆತ ಅವಕಾಶ ಎಂದು ಭಾವಿಸಿ ಎಲ್ಲರು ಕಾರ್ಯ ಮಾಡಬೇಕು ಜಿಲ್ಲಾಡಳಿತದಿಂದ ಬಾಲಮಂದಿರದಲ್ಲಿರುವ ಮಕ್ಕಳಿಗೆ
ವಿದ್ಯಾಭ್ಯಾಸ ಮಾಡಲು ಅನುಕೂಲ ಕಲ್ಪಿಸಲಾಗುತ್ತದೆ ಮತ್ತು ಕಿತ್ತೂರು ಚೆನ್ನಮ್ಮ,ಮೊರಾರ್ಜಿ ದೇಸಾಯಿ ಅಂತಹ ಶಾಲೆಗಳಲ್ಲಿ ಪ್ರಮುಖ್ಯತೆ ನೀಡಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಡಾ ದುರಗೇಶ ಅವರು ತಿಳಿಸಿದರು.

ಸಭೆಯಲ್ಲಿ ಮಕ್ಕಳ ರಕ್ಷಣಾಧಿಕಾರಿ ರಫೀಕಾ ಹಳ್ಳೂರ ಮಾತನಾಡಿ ಜಿಲ್ಲೆಯಲಿರುವ ಸರ್ಕಾರಿ ಮತ್ತು ಖಾಸಗಿ ಬಾಲಮಂದಿರ ಅಂಕಿ ಅಂಶ ನೀಡಿದರು,ಹಾಗು ಸರ್ಕಾರಿ ಬಾಲ ಮಂದಿರ ನಿರ್ಮಾಣಕ್ಕೆ ಬೇಕಾದ ಅನುದಾನಕ್ಕೆ ಈಗಾಗಲೇ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ಸಭೆಗೆ ಆಗಮಿಸಿದ ಬಾಲಮಂದಿರದ ಮುಖ್ಯಸ್ಥರು ಬಾಲಮಂದಿರದಲ್ಲಿರುವ ಮಕ್ಕಳ ಮಾಹಿತಿಯನ್ನು ಸಭೆಗೆ ತಿಳಿಸಿದರು.
ಸಭೆಯಲ್ಲಿ ಬಾಲಂಮದಿರದ ಮುಖ್ಯಸ್ತರು ಬಾಲ ಮಕ್ಕಳ ರಕ್ಷಣೆ ಮತ್ತು ಪಾಲನಾ ಸಮಿತಿಯ ಸದಸ್ಯರು ಹಾಜರಿದ್ದರು.
