ಶುಭಾಂಶು ಶುಕ್ಲಾ – ಹೆಮ್ಮೆಯ ಗಗನಯಾನಿ.

ಇವರು ಭಾರತೀಯರ ಅಸ್ಮಿತೆ ….ಅಂತರಿಕ್ಷಯಾನ ಕೈಗೊಂಡ ಎರಡನೇ ಭಾರತೀಯ ಶುಭಾಂಶು ಶುಕ್ಲಾ ಅವರ ಕುರಿತು ಲೇಖನ….ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಇಳಿದಾಗ ಹೇಳಿದ ಮಾತು “ಅದು ಮನುಷ್ಯನಿಗೆ ಒಂದು ಸಣ್ಣ ಹೆಜ್ಜೆ, ಮನುಕುಲಕ್ಕೆ ಒಂದು ದೈತ್ಯ ಜಿಗಿತ” ಎಂಬುದು. ಇದು ಬಾಹ್ಯಾಕಾಶ ಪರಿಶೋಧನೆಯಲ್ಲಿ ಒಂದು ದೊಡ್ಡ ಮೈಲಿಗಲ್ಲನ್ನು ಸೂಚಿಸುತ್ತದೆ.1969 ರಲ್ಲಿ ಅಪೊಲೊ 11 ಮಿಷನ್‌ನ ಭಾಗವಾಗಿ, ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರ ಈ ಮಾತು, ತಂತ್ರಜ್ಞಾನ ಮತ್ತು ಮಾನವ ಧೈರ್ಯದ ಸಂಕೇತವಾಯಿತು. ಅವರ ಈ ಹೇಳಿಕೆಯು ಪ್ರಪಂಚದಾದ್ಯಂತದವರಿಗೆ ಪ್ರೇರಣೆಯಾಯಿತು.ನೀಲ್ ಆರ್ಮ್‌ಸ್ಟ್ರಾಂಗ್ ಅವರ ಈ ಮಾತು, ಇಂದಿಗೂ ಚಿರಸ್ಮರಣೀಯವಾಗಿದೆ. ಇದು ಬಾಹ್ಯಾಕಾಶ ಅನ್ವೇಷಣೆಯ ಇತಿಹಾಸದಲ್ಲಿ ಒಂದು ಮಹತ್ವದ ಘಟನೆಯಾಗಿದೆ.ಹಾಗೆಯೇ ಇದು ನಿರಂತರವಾಗಿ ನಡೆಯುತ್ತಿರುವ ಸಂಗತಿಯಾಗಿದೆ. ಹೌದು ಓದುಗರೆ ಬಾಹ್ಯಾಕಾಶ ಯಾನಕ್ಕೆ ಹೋಗುವ ಮೊದಲು ಸಂಗೀತವನ್ನು ಕೇಳುವುದು ನಾಸಾದ ಹಳೆಯ ಮತ್ತು ಪ್ರಮುಖ ಸಂಪ್ರದಾಯವಾಗಿದೆ. ಈ ಕಾರ್ಯಾಚರಣೆಯು ಅತ್ಯಂತ ಒತ್ತಡದಾಯಕ ಮತ್ತು ಅಪಾಯಕಾರಿ. ಅಂತಹ ಸಂದರ್ಭಗಳಲ್ಲಿ ಸಂಗೀತವು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮನಸ್ಸನ್ನು ಶಾಂತವಾಗಿರಿಸುತ್ತದೆ.ಇಂತಹ ಸಂದರ್ಭವನ್ನು ನೆನೆಯಲು ಕಾರಣ ನಮ್ಮ ಹೆಮ್ಮೆಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಮೊನ್ನೆ ಜೂನ್ 25 ರಂದು ಅಂತರಿಕ್ಷಯಾನಕ್ಕೆ ಅಣಿಯಾಗುವಾಗ ಶಾರುಖ್ ಖಾನ್ ಅವರ ‘ಸ್ವದೇಶ್ ಚಿತ್ರದ ‘ಯೇ ಜೋ ದೇಸ್ ಹೈ ತೇರಾ’ ಹಾಡನ್ನು ಕೇಳುತ್ತಾ ನೀರಾಳವಾಗಿ ಗಗನಯಾನ ಮಾಡಿದ್ದು ಸಂತಸದ ಹಾಗೂ ನಮ್ಮ ದೇಶದ ಸುಮಾರು 140 ಕೋಟಿ ಜನ ಅವರ ಬಗ್ಗೆ ಹೆಮ್ಮೆ ಪಡುವ ವಿಷಯವಾಗಿದೆ.#ಯಾರಿವರು ಶುಭಾಂಶು ಶುಕ್ಲಾ…?ಗಗನಯಾತ್ರಿ ಶುಭಾಂಶು ಶುಕ್ಲಾ ಅಂತರಿಕ್ಷಯಾನ ಕೈಗೊಂಡ ಎರಡನೇ ಭಾರತೀಯ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

1984ರಲ್ಲಿ ಭಾರತದ ರಾಕೇಶ್‌ ಶರ್ಮಾ ರಷ್ಯಾದ ಗಗನನೌಕೆಯಲ್ಲಿ ಗಗನಯಾನ ಕೈಗೊಂಡಿದ್ದರು. ಅದಾದ 41 ವರ್ಷಗಳ ಬಳಿಕ ಶುಕ್ಲಾ ಅಂತರಿಕ್ಷಯಾನ ಕೈಗೊಂಡು ಯಶಸ್ವಿಯಾಗಿದ್ದಾರೆ.1986 ರಲ್ಲಿ ಉತ್ತರ ಪ್ರದೇಶದ ಲಕ್ನೋದಲ್ಲಿ ಜನಿಸಿದರು. ಶುಭಾಂಶು ಶುಕ್ಲಾ, ಅಲಿಗಂಜ್‌ನ ಸಿಟಿ ಮಾಂಟೆಸ್ಸರಿ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು.1999 ರ ಕಾರ್ಗಿಲ್ ಯುದ್ಧದಿಂದ ಪ್ರೇರಿತರಾಗಿ, ಅವರು ಸ್ವತಂತ್ರವಾಗಿ ಯುಪಿಎಸ್‌ಸಿ ಎನ್‌ಡಿಎ ಪರೀಕ್ಷೆಗೆ ಅರ್ಜಿ ಸಲ್ಲಿಸಿ ಉತ್ತೀರ್ಣರಾದರು.ಅವರು ತಮ್ಮ ಮಿಲಿಟರಿ ತರಬೇತಿಯನ್ನು ಪೂರ್ಣಗೊಳಿಸಿದರು ಮತ್ತು 2005 ರಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡೆದರು.ನಂತರ ಅವರು ಫ್ಲೈಯಿಂಗ್ ಶಾಖೆಗೆ ಆಯ್ಕೆಯಾದರು ಮತ್ತು ಭಾರತೀಯ ವಾಯುಪಡೆಯ ಅಕಾಡೆಮಿಯಲ್ಲಿ ತರಬೇತಿ ಪಡೆದರು. ಜೂನ್ 2006 ರಲ್ಲಿ, ಅವರನ್ನು ಭಾರತೀಯ ವಾಯುಪಡೆಯ ಫೈಟರ್ ಸ್ಟ್ರೀಮ್‌ಗೆ ಫ್ಲೈಯಿಂಗ್ ಆಫೀಸರ್ ಆಗಿ ನಿಯೋಜಿಸಲಾಯಿತು.ಅವರು ಫೈಟರ್ ಜೆಟ್‌ಗಳನ್ನು ಹಾರಿಸಿದ ಅನುಭವ ಹೊಂದಿದ್ದಾರೆ.ಅವರು ಗಗನಯಾತ್ರಿಯಾಗಲು ರಷ್ಯಾಮತ್ತು ಯುನೈಟೆಡ್ ಸ್ಟೇಟ್‌ಸ್‌ನಲ್ಲಿ ವಿಶೇಷತರಬೇತಿಯನ್ನು ಪಡೆದರು. ಅವರು ಸೂಕ್ಷ್ಮಗುರುತ್ವಾಕರ್ಷಣೆ, ತುರ್ತು ನಿರ್ವಹಣೆ ಮತ್ತು ವೈಜ್ಞಾನಿಕಪ್ರಯೋಗಗಳಲ್ಲಿ ಕೆಲಸ ಮಾಡುವಲ್ಲಿ ತರಬೇತಿಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.#ಗ್ರೂಪ್ ಕ್ಯಾಪ್ಟನ್ ಆಗಿ:—ಶುಭಾಂಶು ಶುಕ್ಲಾ ಅವರು ಭಾರತೀಯ ವಾಯುಪಡೆಯ ಪರೀಕ್ಷಾ ಪೈಲಟ್ ಮತ್ತು ಇಸ್ರೋ ಗಗನಯಾತ್ರಿ.ಭಾರತೀಯ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮದ ಭಾಗವಾಗಿ ಬಾಹ್ಯಾಕಾಶಕ್ಕೆ ಹಾರಿದ ನಾಲ್ಕು ಗಗನಯಾತ್ರಿಗಳಲ್ಲಿ ಅವರು ಮೊದಲಿಗರು ಮತ್ತು ಪ್ರಸ್ತುತ ಆಕ್ಸಿಯಮ್-4 ಮಿಷನ್‌ನಲ್ಲಿ ಗ್ರೂಪ್ ಕ್ಯಾಪ್ಟನ್ ಆಗಿದ್ದಾರೆ.#ಆಕ್ಸಿಯಮ್ -4 ಮಿಷನ್ ಪ್ರಾರಂಭ:ಈ ಮಿಷನ್ ಫ್ಲೋರಿಡಾದಲ್ಲಿರುವ ನಾಸಾದ ಲಾಂಚ್ ಕಾಂಪ್ಲೆಕ್ಸ್ 39A ನಿಂದ ಪ್ರಾರಂಭವಾಯಿತು. ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರಯಾನಕ್ಕಾಗಿ ಹೊರಟ ಸ್ಥಳ ಇದು. ಆಕ್ಸಿಯಮ್ -4 ರ ಎಲ್ಲಾ ಪ್ರಯಾಣಿಕರು ವಿಶೇಷ ಬಾಹ್ಯಾಕಾಶ ಸೂಟ್‌ಗಳನ್ನು ಧರಿಸಿ ಉಡಾವಣಾ ಪ್ಯಾಡ್ ತಲುಪಿ ಡ್ರ್ಯಾಗನ್ ಕ್ಯಾಪ್ಸುಲ್ ಸಿ213 ಅನ್ನು ಹತ್ತಿದರು.

ಉಡಾವಣೆಗೆ ಮೊದಲು, ಅವರು ಸ್ಪೇಸ್‌ಎಕ್ಸ್ ಮತ್ತು ನಾಸಾ ತಂಡಗಳೊಂದಿಗೆ ಅಗತ್ಯ ತಾಂತ್ರಿಕ ಪರಿಶೀಲನೆಗಳನ್ನು ಪೂರ್ಣಗೊಳಿಸಿದರು.ನಾಸಾ, ಇಸ್ರೊ, ಆ್ಯಕ್ಸಿಯಂ ಸ್ಪೇಸ್‌ ಹಾಗೂ ಇಲಾನ್‌ ಮಸ್ಕ್‌ ಒಡೆತನ ಸ್ಪೇಸ್‌ಎಕ್ಸ್‌ ಜಂಟಿಯಾಗಿ ಈ ಬಾಹ್ಯಾಕಾಶ ಕಾರ್ಯಕ್ರಮ ಕಮಾಂಡರ್ ಪೆಗ್ಗಿ ವಿಟ್ಸನ್ ನೇತೃತ್ವದಲ್ಲಿ, ಶುಕ್ಲಾ, ಹಂಗರಿಯ ಟಿಬೊರ್ ಕಾಪು, ಪೋಲೆಂಡ್‌ನ ಸ್ಲಾವೋಜ್ ವಿಸ್‌ನೀವ್‌ಸ್ಕಿ ಕೂಡ ಐಎಸ್‌ಎಸ್‌ಗೆ ತೆರಳಿದ್ದಾರೆ.#ಭಾರತದ ಎರಡನೇ ಯಶಸ್ವಿ ಗಗನಯಾನಿ..ಭಾರತೀಯ ಗಗನಯಾನಿ ಶುಭಾಂಶು ಶುಕ್ಲಾ ಹಾಗೂ ಇತರ ಮೂವರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕೊಂಡೊಯ್ಯಲಿರುವ ‘ಆ್ಯಕ್ಸಿಯಂ–4’ ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಜೂನ್‌ 25 ರಂದು ಮಧ್ಯಾಹ್ನ 12.01ಕ್ಕೆ (ಭಾರತೀಯ ಕಾಲಮಾನ) ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ಪ್ರಯಾಣ ಬೆಳೆಸಿದ್ದಾರೆ.ಶುಭಾಂಶು ಶುಕ್ಲಾ ಅಲ್ಲದೆ, ಹಂಗರಿ ಮತ್ತು ಪೋಲೆಂಡ್‌ನ ಗಗನಯಾತ್ರಿಗಳಿರುವ ಗಗನನೌಕೆಯನ್ನು ಹೊತ್ತ ಸ್ಪೇಸ್‌ಎಕ್ಸ್‌ನ ‘ಫಾಲ್ಕನ್‌–9’ ರಾಕೆಟ್ ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಚಿಮ್ಮಿತು.#ಬಾಹ್ಯಾಕಾಶದಿಂದ ಶುಕ್ಲಾ ಅವರ ಉತ್ಸಾಹಭರಿತ ಸಂದೇಶ….”ನಮಸ್ಕಾರ, ನನ್ನ ಪ್ರೀತಿಯ ದೇಶವಾಸಿಗಳೇ.! ಎಂತಹ ಸವಾರಿ.! 41 ವರ್ಷಗಳ ನಂತರ ನಾವು ಮತ್ತೊಮ್ಮೆ ಬಾಹ್ಯಾಕಾಶಕ್ಕೆ ಮರಳಿದ್ದೇವೆ. ಇದು ಅದ್ಭುತ ಸವಾರಿ. ನಾವು ಸೆಕೆಂಡಿಗೆ 7.5 ಕಿಲೋಮೀಟರ್ ವೇಗದಲ್ಲಿ ಭೂಮಿಯ ಸುತ್ತ ಸುತ್ತುತ್ತಿದ್ದೇವೆ. ನನ್ನ ಹೆಗಲ ಮೇಲೆ ಕೆತ್ತಲಾದ ತಿರಂಗವು ನಾನು ನಿಮ್ಮೆಲ್ಲರೊಂದಿಗೂ ಇದ್ದೇನೆ ಎಂದು ಹೇಳುತ್ತದೆ. ನನ್ನ ಈ ಪ್ರಯಾಣವು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಗೆ ಆರಂಭವಲ್ಲ ಆದರೆ ಭಾರತದ ಮಾನವ ಬಾಹ್ಯಾಕಾಶ ಕಾರ್ಯಕ್ರಮಕ್ಕೆ. ನೀವೆಲ್ಲರೂ ಈ ಪ್ರಯಾಣದ ಭಾಗವಾಗಬೇಕೆಂದು ನಾನು ಬಯಸುತ್ತೇನೆ. ನಿಮ್ಮ ಎದೆಯೂ ಸಹ ಹೆಮ್ಮೆಯಿಂದ ಉಬ್ಬಬೇಕು… ಒಟ್ಟಾಗಿ, ಭಾರತದ ಮಾನವ ಬಾಹ್ಯಾಕಾಶ ಕಾರ್ಯಕ್ರಮವನ್ನು ಪ್ರಾರಂಭಿಸೋಣ. ಜೈ ಹಿಂದ್..! ಜೈ ಭಾರತ್..!”ಒಟ್ಟಾರೆಯಾಗಿ ಆಕ್ಸಿಯಮ್ -4 ತಂಡವು ಈಗ ಐಎಸ್‌ಎಸ್‌ನಲ್ಲಿ ತನ್ನ ಎರಡು ವಾರಗಳ ವೈಜ್ಞಾನಿಕ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ.ಇದರಲ್ಲಿ ಮಧುಮೇಹಕ್ಕೆ ಸಂಬಂಧಿಸಿದ ಸಂಶೋಧನೆಯೂ ಸೇರಿದೆ.ವಿವಿಧ ದೇಶಗಳ ಗಗನಯಾತ್ರಿಗಳಿಗೆ ವೇದಿಕೆಯನ್ನುಒದಗಿಸುವುದು ಹಾಗೂ ಬಾಹ್ಯಾಕಾಶದಿಂದ ಭೂಮಿಯ ಜನರಲ್ಲಿ ಸ್ಫೂರ್ತಿ ಮತ್ತು ಜಾಗೃತಿಯನ್ನು ಹರಡುವುದು.ಬಾಹ್ಯಾಕಾಶದಲ್ಲಿ ಹೊಸ ತಂತ್ರಜ್ಞಾನಗಳನ್ನುಪರೀಕ್ಷಿಸುವುದು ಮತ್ತು ಅಭಿವೃದ್ಧಿಪಡಿಸುವುದು ಈ ಮಿಷನ್ ಉದ್ದೇಶವಾಗಿದೆ.ಹೀಗಾಗಿ ಭಾರತ ಸೇರಿದಂತೆ ಪ್ರಪಂಚದಾದ್ಯಂತದ ಜನರು ಅವರಿಗೆ ಶುಭ ಹಾರೈಸುತ್ತಿದ್ದಾರೆ ಮತ್ತು ಅವರು ಈ ಕಾರ್ಯಾಚರಣೆಯ ಯಶಸ್ಸಿಗೆ ಭಾಗವಾಗಿದ್ದಾರೆ ಎಂದು ಹೇಳಿದರೆ

ತಪ್ಪಾಗಲಾರದು.ವಂದನೆಗಳೊಂದಿಗೆ..ಕೃಪೆ :ಆಕ್ಸಿಯಮ್-4 ಮಿಷನ್‌#ಲೇಖನ:ಬಸವರಾಜ ಎಮ್ ಯರಗುಪ್ಪಿಶಿಕ್ಷಕರು, ಹವ್ಯಾಸಿ ಬರಹಗಾರರುಸಾ ಪೊ ರಾಮಗೇರಿ ತಾ ಲಕ್ಷ್ಮೇಶ್ವರ ಜಿ ಗದಗದೂರವಾಣಿ 9742193758ಮಿಂಚಂಚೆ basu.ygp@gmail.comBasavaraj M Yaraguppi,AM@GLPS Muktinagar.At Po:Ramageri,TQ:LaxmeshwarDist:Gadag-582116Email ID:basu.ygp@gmail.comMob No:9742193758.

Leave a Reply

Your email address will not be published. Required fields are marked *