
ಒಳ ಮೀಸಲಾತಿ ಜಾರಿ ಮಾಡಿ ಇಲ್ಲ ಕುರ್ಚಿ ಖಾಲಿ ಮಾಡಿ.–. ಮಲ್ಲು ಮಾದರ
ಒಳ ಮೀಸಲಾತಿ ಜಾರಿಗೊಳಿಸುವ..ಅಧಿಕಾರವನ್ನು ಸುಪ್ರೀಂ ಕೋರ್ಟ್ ಆಯಾ ರಾಜ್ಯಗಳಿಗೆ ನೀಡಿದೆ ಅದರಂತೆ ಹರಿಯಾಣ ಪಂಜಾಬ್ ತೆಲಂಗಾಣ ಸೇರಿ ನಾಲ್ಕು ರಾಜ್ಯಗಳಲ್ಲಿ ಈಗಾಗಲೇ ಒಳ ಮೀಸಲಾತಿ ಜಾರಿಯಾಗಿದೆ… ಆದರೆ ಕರ್ನಾಟಕದಲ್ಲಿ ಇದುವರೆಗೂ ಜಾರಿಗೆ ಬಂದಿಲ್ಲ ಮಾದಿಗ ಸಮುದಾಯಕ್ಕೆ ಶೇಕಡ 6% ಕಿಂತಲೂ ಹೆಚ್ಚು ಮೀಸಲಾತಿ ನೀಡಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರ ಗೊಳಿಸಲಾಗುವುದೆಂದು ಮಾದಿಗ ಸಮಾಜದ ಯುವ ಮುಖಂಡ ಮಲ್ಲು ಮಾದರ, ಎಚ್ಚರಿಸಿದರು..
ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಆದೇಶ ಮಾಡಿ ಒಂದು ವರ್ಷ ಕಳೆದಿದೆ ದೇಶದ ನಾಲ್ಕು ರಾಜ್ಯಗಳಲ್ಲಿ ಅದನ್ನು ಈಗಾಗಲೇ ಅನುಷ್ಠಾನ ಮಾಡಿ ಶೋಷಿತರ ಬೆಂಬಲಕ್ಕೆ ನಿಲ್ಲಲಾಗಿದೆ ರಾಜ್ಯ ಸರ್ಕಾರ ದತ್ತಾಂಶದ ನೆಪ ಇಟ್ಟುಕೊಂಡು ಇದುವರೆಗೂ ಒಳ ಮೀಸಲಾತಿ ಜಾರಿ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು…
ಬಾಕ್ಸ್…
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನು ಶೋಷಿತರ ಪರ ಅಂತ ಭಾಷಣ ಮಾಡಿ ಈಗ ಅಧಿಕಾರ ಅನುಭವಿಸುತ್ತಿದ್ದಾರೆ ಆಗಸ್ಟ್ 16ರಂದು ನಡೆಯಲಿರುವ ಅಧಿವೇಶನದಲ್ಲಿ ಒಳ ಮೀಸಲಾತಿ ಘೋಷಿಸಬೇಕು ಇಲ್ಲವಾದಲ್ಲಿ ಕುರ್ಚಿ ತ್ಯಜಿಸಬೇಕು ಎಂದು ಆಗ್ರಹಿಸಿದರು..

