
ಅಗಸ್ಟ್.14 ರಂದು ಶ್ರೀ ಕಪ್ಪತ್ತ ಮಲ್ಲೇಶ್ವರನ ಜಾತ್ರಾ ಮಹೋತ್ಸವಅಗಸ್ಟ್.14 ರಂದು ಶ್ರೀ ಕಪ್ಪತ್ತ ಮಲ್ಲೇಶ್ವರನ ಜಾತ್ರಾ ಮಹೋತ್ಸವ
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹಾಗೂ ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಹೆಸರುವಾಸಿ ಆಗಿರುವ ಕಪ್ಪತ್ತಗುಡ್ಡದಲ್ಲಿ ನೆಲೆಸಿರುವ ಶ್ರೀ ಕಪ್ಪತ್ತ ಮಲ್ಲೇಶ್ವರನ ಜಾತ್ರಾ ಮಹೋತ್ಸವ ಇದೇ ದಿನಾಂಕ 14/8/25 ರಂದು ಗುರುವಾರ ಜರುಗಲಿದೆ.
ದಿನಾಂಕ 14/8/25 ರಂದು ಗುರುವಾರ ಕಪ್ಪತ್ತ ಮಲ್ಲೇಶ್ವರ ಹಾಗೂ ಭ್ರಮಾರಂಭದೇವಿಯ ವಿವಾಹದೊಂದಿಗೆ ಜಾತ್ರಾ ಮಹೋತ್ಸವವು ಮಠದ ಸಂಪ್ರದಾಯದಂತೆ ಸಡಗರ ಸಂಭ್ರಮದೊಂದಿಗೆ ನಡೆಯಲಿದೆ.

ದಿನಾಂಕ 16/8/25 ರಂದು ಶನಿವಾರ ಸಾಯಂಕಾಲ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಶ್ರೀ ಕಪ್ಪತ್ತ ಮಲ್ಲೇಶ್ವರ ಹಾಗೂ ಭ್ರಮಾರಂಭದೇವಿಯ ಮೂರ್ತಿಗಳ ಆಗಮನವಾಗುತ್ತಿದ್ದು ಈ ಸಂರ್ಭದಲ್ಲಿ ಮಠದ ಧರ್ಮಾಧಿಕಾರಿಗಳು ಮೂರ್ತಿಯನ್ನು ಬರಮಾಡಿಕೊಳ್ಳುವ ಕಾರ್ಯಕ್ರಮ ಜರುಗಲಿದೆ.
ದಿನಾಂಕ 17/8/25 ರಂದು ರವಿವಾರ ಬೆಳಿಗ್ಗೆ 11:00 ಗಂಟೆಗೆ ಡಂಬಳ ಗ್ರಾಮದ ದೈವದವರು ಹಾಗೂ ಸಕಲ ಸದ್ಭಕ್ತರಿಂದ ವಿಶೇಷ ಜಾತ್ರಾ ವಿವಾಹ ಕಾರ್ಯಕ್ರಮಗಳು ಜರುಗಲಿವೆ.

ಇತಿಹಾಸ ಪ್ರಸಿದ್ದವಾದ ಶ್ರೀ ಕಪ್ಪತ್ತ ಮಲ್ಲೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಪ್ರತೀವರ್ಷವೂ ಲಕ್ಷಾಂತರ ಭಕ್ತರು ನಾಡಿನ ಮೂಲೆ ಮೂಲೆಗಳಿಂದ ಆಗಮಿಸುತ್ತಾರೆ.
ವರದಿ✍️ಚಂದ್ರಶೇಖರ ಸೋಮಣ್ಣವರ
