
ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸುತ್ತಿರುವ ಪಿಕಪ್ ಕಾಮಗಾರಿ ಸಂಪೂರ್ಣ ಕಳಪೆ.ಬಿಜೆಪಿ ಮುಖಂಡ ಕೆಬಿ ಕೃಷ್ಣೇಗೌಡ ಗಂಭೀರ ಆರೋಪ.
ನಾಯಕನಹಟ್ಟಿ: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ನಾಯಕನಹಟ್ಟಿ ಹೋಬಳಿ ವ್ಯಾಪ್ತಿಯ ಬೋಸದೇವರಹಟ್ಟಿ ಹತ್ತಿರದ ಶಿಡ್ಲಹಳ್ಳದಲ್ಲಿ ನಿರ್ಮಿಸುತ್ತಿರುವ ಪಿಕಪ್ ಮತ್ತು ಕಾಲುವೆ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ ಎಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ ಪಟೇಲ್ ಕೆ ಬಿ ಕೃಷ್ಣೇಗೌಡ ಗಂಭೀರ ಆರೋಪ ಮಾಡಿದರು.

ನಂತರ ಮಾತನಾಡಿದ ಅವರು ಚಿತ್ರದುರ್ಗ ಜಿಲ್ಲಾ ಖನಿಜ ಪ್ರತಿಷ್ಠಾನ ಅನುದಾನದಲ್ಲಿ ಸುಮಾರು ಎರಡು ಕೋಟಿ ರೂಪಾಯಿಗಳನ್ನು ಈ ಕಾಮಗಾರಿಗೆ ಮಂಜೂರು ಮಾಡಿದ್ದು ಸಣ್ಣ ನೀರಾವರಿ ಇಲಾಖೆಯು ಈ ಕಾಮಗಾರಿಯ ಅನುಷ್ಠಾನದ ಹೊಣೆಯನ್ನು ಹೊತ್ತಿದ್ದು, ಈ ಕಾಮಗಾರಿಯೂ ಪ್ರಾರಂಭದಿಂದಲೂ ಕೂಡ ಅವೈಜ್ಞಾನಿಕ ಮತ್ತು ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಿ ನಿರ್ಮಾಣ ಹೊಣೆ ಹೊತ್ತಿರುವ ಸಣ್ಣ ನೀರಾವರಿ ಇಲಾಖೆಯು ಕೈಗೊಂಡಿರುತ್ತದೆ.

ಈ ಪಿಕಪ್ ಕಾಮಗಾರಿಯು ಸಂಪೂರ್ಣವಾಗಿ 40mm ಜಲ್ಲಿಯನ್ನು ಬಳಸಿ ನಿರ್ಮಾಣ ಮಾಡಿರುತ್ತಾರೆ ಹಾಗೂ ಕಳಪೆ ಗುಣಮಟ್ಟದ ಕಬ್ಬಿಣದ ರಾಡುಗಳನ್ನು ಬಳಸಿ ನಿರ್ಮಾಣ ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಇತ್ತೀಚಿಗೆ ನಾವು ಸಣ್ಣ ನೀರಾವರಿ ಇಲಾಖೆಯ ಶಾಖಾಧಿಕಾರಿಗಳಾದ ರಮೇಶ್ ಇವರನ್ನು ಭೇಟಿಯಾಗಿ ಗುಣಮಟ್ಟದ ಕಾಮಗಾರಿಗೆ ಮನವರಿಕೆ ಮಾಡಿದರು ಕೂಡ ಗುಣಮಟ್ಟದ ಕಾಮಗಾರಿಯನ್ನು ಮುಂದುವರಿಸಿರುವುದಿಲ್ಲ, ಮುಂದುವರೆದು ಅಲ್ಪ ಪ್ರಮಾಣದ ಸಿಮೆಂಟ್ ಬಹು ಪ್ರಮಾಣದ ಡಸ್ಟ್ ಅನ್ನು ಬಳಸಿರುತ್ತಾರೆ.
40 ಎಮ್ ಎಮ್ ಜಲ್ಲಿಯನ್ನು ಅಪಾರ ಪ್ರಮಾಣದಲ್ಲಿ ಬಳಸಿ ಕಾಮಗಾರಿಯನ್ನು ನಿರ್ಮಾಣ ಮಾಡಿರುವುದು ಕಂಡುಬಂದಿರುವುದರಿಂದ ಈ ಕಾಮಗಾರಿಯು ಅಕ್ರಮ ನಡೆದಿರುವುದು ನಿಜವಾಗಿರುವುದರಿಂದ ಶಾಖಾಧಿಕಾರಿಗಳಾದ ರಮೇಶ್ ಇವರನ್ನು ಇಲಾಖೆ ವಿಚಾರಣೆ ಕಾಯ್ದಿರಿಸಿ ಅಮಾನತ್ತು ಮಾಡಲು ಸಣ್ಣ ನೀರಾವರಿ ಇಲಾಖೆಯ ಮುಖ್ಯ ಇಂಜಿನಿಯರ್ ಮತ್ತು ಕಾರ್ಯದರ್ಶಿಗೆ ಲಿಖಿತ ದೂರ ನೀಡಲಾಗುವುದು ಎಂದು ಖಡಕ್ಕಾಗಿ ಎಚ್ಚರಿಸಿದರು.
ನಂತರ ಬಿಜೆಪಿ ಮುಖಂಡ ಬಿ ಓಬಯ್ಯ ಗಜ್ಜುಗಾನಹಳ್ಳಿ ಮಾತನಾಡಿ ಜಿಲ್ಲಾ ಖನಿಜ ಪ್ರತಿಷ್ಠಾನದ ಅನುದಾನದಲ್ಲಿ ನಿರ್ಮಾಣಗೊಂಡಿರುವ ಈ ಕಾಮಗಾರಿಯು ಸಂಪೂರ್ಣ ಕಳಪೆಯಾಗಿದ್ದು ಗುತ್ತಿಗೆದಾರರೊಂದಿಗೆ ಅಕ್ರಮಕ್ಕೆ ಕೈಜೋಡಿಸಿರುವ ಸಣ್ಣ ನೀರಾವರಿ ಇಲಾಖೆಯ ಶಾಖಾಧಿಕಾರಿಗಳಾದ ರಮೇಶ್ ಇವರನ್ನು ಕೂಡಲೇ ಅಮಾನತು ಮಾಡಿ ಕಳಪೆ ಕಾಮಗಾರಿಯನ್ನು ಕೈಗೊತ್ತಿಕೊಂಡಿರುವ ಗುತ್ತಿಗೆದಾರರಾದ ಶ್ರವಣ್ ಇವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಈ ಮೂಲಕ ಒತ್ತಾಯಿಸಿದರು.

ಒಂದೊಮ್ಮೆ ಕಳಪೆ ಕಾಮಗಾರಿ ಮುಂದುವರೆಸಿದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಶಾಖಾಧಿಕಾರಿಗಳು ಹಾಗೂ ಸಣ್ಣ ನೀರಾವರಿ ಇಲಾಖೆಯ ವಿರುದ್ಧ ಪ್ರತಿಭಟನೆ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.
