
*ಶಿರಹಟ್ಟಿ ತಾಲೂಕಿನ ವಿವಿಧಡೆ ಸಂಭ್ರಮದ ನಾಗರ ಪಂಚಮಿ*
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನಾದ್ಯಂತ ತುಂಬಾ ಸಡಗರ ಸಂಭ್ರಮದಿಂದ ನಾಗರ ಪಂಚಮಿಯ ಹಬ್ಬವನ್ನು ಆಚರಿಸಲಾಯಿತು.ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ನಾಗ ಮೂರ್ತಿಗೆ ಹಾಲೆರೆಯುವ ಮೂಲಕ ತಂಬಿಟ್ಟು ಉಂಡಿ, ಅಳ್ಳಿಟ್ಟು ಉಂಡಿ, ಶೇಂಗಾ ಉಂಡಿ, ಎಳ್ಳು ಉಂಡಿ, ಬೂಂಧಿ ಉಂಡಿ ಹೀಗೆ ಐದು ತರಹದ ಸಿಹಿ ಉಂಡಿಗಳನ್ನು ಹಾಗೂ ಕಡಲೆ ಕಾಳು ಉಸುಳೆಯನ್ನು ಕಲ್ಲು ನಾಗರನಿಗೆ ನೈವೇದ್ಯ ಮಾಡಿ ದೀಪ ಬೆಳಗಿಸಿ ಮಹಿಳೆಯರು ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಯುವತಿಯರು ವಿಶೇಷವಾಗಿ ವಿವಿಧ ಬಣ್ಣಗಳ ಹೊಸ ಸಾರಿಯನ್ನು ಉಟ್ಟು ಮೆಕ್ಕೆಜೋಳ ಹಾಗೂ ಗೋದಿ ಬೆಳೆಯ ಹಸಿರು ಸಸಿಯನ್ನು ತಲೆಗೆ ಮುಡಿದುಕೊಂಡು ಜೋಕಾಲಿ ಆಡುವ ಮೂಲಕ ತುಂಬಾ ಖುಷಿಯಿಂದ ಸಂಭ್ರಮದೊಂದಿಗೆ ನಾಗ ಪಂಚಮಿ ಹಬ್ಬವನ್ನು ಆಚರಿಸಿದರು.

ಯುವಕರು ನಿಂಬೆ ಹಣ್ಣು ಎಸೆಯುವುದು, ಬಟ್ಟೆಯಿಂದ ಕಣ್ಣು ಕಟ್ಟಿಕೊಂಡು ನಿರ್ಧಿಷ್ಟ ಸ್ಥಳವನ್ನು ಗುರುತಿಸುವುದು, ಹುಸಿ ಹೋಗದೆ ಬೆಂಕಿ ಪೊಟ್ಟಣದ ಕಡ್ಡಿಗಳನ್ನು ಗೀರುವುದು ಹೀಗೆ ಇನ್ನು ಹಲವು ರೀತಿಯ ಜೂಜಾಟಗಳನ್ನು ಆಡುವ ಮೂಲಕ ನಾಗ ಪಂಚಮಿ ಹಬ್ಬವನ್ನು ಆಚರಿಸಿದರು.

.*ವರದಿ*✍️ಚಂದ್ರಶೇಖರ ಸೋಮಣ್ಣವರ
