ಪಂಚಾಯತ್ ರಾಜ್ ವಿಭಾಗದ ಅಧಿಕಾರಿಗಳು ಹಾಗೂ ಸಂಘದ ಕಾರ್ಯಗಳು ಯಶಸ್ಸಿಗೆ ಕಾರಣ : -ರಾಜ್ಯಾಧ್ಯಕ್ಷ ಹೆಚ್ ಬಸವರಾಜ

**ಪಂಚಾಯತ್ ರಾಜ್ ವಿಭಾಗದ ಅಧಿಕಾರಿಗಳು ಹಾಗೂ ಸಂಘದ ಕಾರ್ಯಗಳು ಯಶಸ್ಸಿಗೆ ಕಾರಣ : ರಾಜ್ಯಾಧ್ಯಕ್ಷ ಹೆಚ್ ಬಸವರಾಜ

*ಪಂಚಾಯತ್ ರಾಜ್ ವಿಭಾಗದ ಅಧಿಕಾರಿಗಳು ಮತ್ತು ನೌಕರರ ಸಂಘದ ರಾಜ್ಯಮಟ್ಟದ ವಾರ್ಷಿಕ ಮಹಾಸಭೆ ಯಶಸ್ವಿ..*

*ಚಿತ್ರದುರ್ಗ*:- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚಾಯತ್ ರಾಜ್ ವಿಭಾಗದ ಅಧಿಕಾರಿಗಳು ಹಾಗೂ ನೌಕರರ ಸಂಘದ 2025-26ನೇ ಸಾಲಿನ ರಾಜ್ಯಮಟ್ಟದ ವಾರ್ಷಿಕ ಮಹಾಸಭೆಯು ಚಿತ್ರದುರ್ಗ ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಗೆ ರಾಜ್ಯಾಧ್ಯಕ್ಷರಾದ ಶ್ರೀ ಹೆಚ್ ಬಸವರಾಜ ಇವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.ರಾಜ್ಯಾಧ್ಯಕ್ಷರಾದ ಶ್ರೀ ಹೆಚ್ ಬಸವರಾಜ , ಸಹಾಯಕ ನಿರ್ದೇಶಕರು (ಆಡಳಿತ), ಇವರು ಮಾತನಾಡಿ “ಸಾಧಿಸುವ ಛಲ, ತಾಳ್ಮೆ ಮತ್ತು ಪರಸ್ಪರ ನಂಬಿಕೆಯಿಂದ ಏನನ್ನು ಬೇಕಾದರೂ ಸಾಧಿಸಬಹುದು.

ನಮ್ಮ ಸಂಘದ ಯಶಸ್ಸಿಗೆ ಇದು ಅತ್ಯುತ್ತಮ ಉದಾಹರಣೆ. ಈಗಾಗಲೇ ಸಾಧಿಸಿರುವುದು ಬಹಳಷ್ಟಿದ್ದರೆ, ಸಾಧಿಸಬೇಕಿರುವುದು ಇನ್ನೂ ಬೆಟ್ಟದಷ್ಟಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ನೌಕರರ ಸಲಹೆ ಮತ್ತು ಸಹಕಾರವು ಈ ದಿಸೆಯಲ್ಲಿ ಅತ್ಯಗತ್ಯ” ಎಂದು ಹೇಳಿದರು. “ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳಲ್ಲಿ ಶೇ.75 ಕ್ಕೂ ಹೆಚ್ಚು ಲಿಪಿಕ ಹುದ್ದೆಗಳು ಖಾಲಿಯಿದ್ದರೂ, ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ವಿಳಂಬವಿಲ್ಲದೇ ಕೆಲಸ ನಿರ್ವಹಿಸುತ್ತಿದ್ದಾರೆ. ಖಾಲಿಯಿರುವ ಸಾವಿರಾರು ಹುದ್ದೆಗಳನ್ನು ಜರೂರಾಗಿ ಭರ್ತಿ ಮಾಡಲು ಸರ್ಕಾರದ ಗಮನವನ್ನು ಸೆಳೆಯಲಾಗುವುದು” ಎಂದು ಅವರು ಭರವಸೆ ನೀಡಿದರು. “ವಿವಿಧ ವೃಂದದ ಸರ್ಕಾರಿ ನೌಕರರ ಜೇಷ್ಠತೆ, ಮುಂಬಡ್ತಿ, ಹುದ್ದೆಗಳ ಉನ್ನತೀಕರಣ ಮತ್ತು ಮುಂಬಡ್ತಿಗೆ ನಿಗದಿಪಡಿಸಿರುವ ಅರ್ಹತಾ ಅವಧಿಯಲ್ಲಿ ಆಗಿರುವ ತಾರತಮ್ಯವನ್ನು ಹೋಗಲಾಡಿಸಲು ಸಂಘದ ಹೋರಾಟವು ಅಛಲವಾಗಿದ್ದು, ಸರ್ಕಾರದ ವಿಶ್ವಾಸವನ್ನು ಪಡೆದು ತಾರತಮ್ಯವನ್ನು ಸರಿಪಡಿಸಲಾಗುವುದು” ಎಂದು ದೃಢವಾಗಿ ತಿಳಿಸಿದರು.ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶ್ರೀ ದೇವರಾಜ್ ಸಿ. ಸಜ್ಜನಶೆಟ್ಟರ್, ವ್ಯವಸ್ಥಾಪಕರು, ಪ್ರಾಸ್ತಾವಿಕ ಭಾಷಣದಲ್ಲಿ, 15-20 ವರ್ಷಗಳಿಂದ ಪದೋನ್ನತಿಯಿಲ್ಲದೇ ಸೊರಗಿದ್ದ ನೂರಾರು ನೌಕರರಿಗೆ ಸಂಘದ ಅಧ್ಯಕ್ಷರಾದ ಶ್ರೀ ಹೆಚ್ ಬಸವರಾಜ ಇವರ ಮಾರ್ಗದರ್ಶನದಲ್ಲಿ2020 ರಲ್ಲಿ ರಚಿತವಾದ ವೃಂದ ಮತ್ತು ನೇಮಕಾತಿ ನಿಯಮಗಳ ಮೂಲಕ ಪದೋನ್ನತಿಯ ದಾರಿ ತೆರೆದಿದ್ದನ್ನು ಶ್ಲಾಘಿಸಿದರು. ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಬಿ ವೃಂದದ ಪತ್ರಾಂಕಿತ ಹುದ್ದೆಗಳ ಸೃಜನೆಯ ಜೊತೆಗೆ, 35 ವರ್ಷಗಳಿಂದ ಲಿಪಿಕ ವರ್ಗದ ನೌಕರರಿಗೆ ಪದೋನ್ನತಿಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸಂಘದ ಹೋರಾಟ ಫಲಿಸಿದೆ ಎಂದು ಅವರು ತಿಳಿಸಿದರು.

*ಸಂಘದ ಸಾಧನೆಗಳು:* ಸಂಘದ ನಿರಂತರ ಹೋರಾಟದ ಫಲವಾಗಿ, 2020 ರಲ್ಲಿ ರಚಿತವಾದ ವೃಂದ ಮತ್ತು ನೇಮಕಾತಿ ನಿಯಮಗಳ ಮೂಲಕ ರಾಜ್ಯದ ವಿವಿಧ ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೂರಾರು ಸರ್ಕಾರಿ ನೌಕರರಿಗೆ ಪದೋನ್ನತಿಯ ದಾರಿ ಸುಗಮವಾಯಿತು. ಸಂಘದ ಅಧ್ಯಕ್ಷರ ಮತ್ತು ತಂಡದ ತಂತ್ರಗಾರಿಕೆಯನ್ನು ಎಲ್ಲರೂ ಮುಕ್ತ ಕಂಠದಿಂದ ಶ್ಲಾಘಿಸಿದರು.

ಒಂದೇ ಇಲಾಖೆಯಲ್ಲಿ ಮೂರು ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚಿಸಿದ್ದು, ಒಂದು ಇಲಾಖೆ ಒಂದು ವೃಂದ ಮತ್ತು ನೇಮಕಾತಿ ನಿಯಮಗಳು ಎಂಬ ಕುರಿತು ಸರ್ಕಾರದ ಗಮನ ಸೆಳೆದು ಈ ದಿಸೆಯಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.2025-2030 ರ ಅವಧಿಗೆ ಜಿಲ್ಲೆಗೊಬ್ಬರಂತೆ ನಿರ್ದೇಶಕರನ್ನು ಆಯ್ಕೆ ಮಾಡಿ, ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯ್ತು.

ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳ ನೌಕರರ ಕುಂದು ಕೊರತೆಗಳನ್ನು ಆಲಿಸಿ, ಅಧ್ಯಕ್ಷರು ಸಭೆಯಲ್ಲಿಯೇ ಕೆಲವು ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು. ಉಳಿದ ಸಮಸ್ಯೆಗಳಿಗೆ ಸರ್ಕಾರ ಮತ್ತು ಆಯುಕ್ತರ ಗಮನಕ್ಕೆ ತಂದು ಪರಿಹರಿಸುವ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲೆಯಿಂದ ರಾಜ್ಯಾಧ್ಯಕ್ಷರು, ಪದಾಧಿಕಾರಿಗಳು ಮತ್ತು ಹೊಸದಾಗಿ ನೇಮಕಗೊಂಡ ನಿರ್ದೇಶಕರನ್ನು ಸನ್ಮಾನಿಸಲಾಯಿತು

.ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಕಾರ್ಯಾಲಯದ ಸಹಾಯಕ ನಿರ್ದೇಶಕರಾದ ಶ್ರೀ ದಾದಾಪೀರ್, ವ್ಯವಸ್ಥಾಪಕರಾದ ಶ್ರೀ ಸುನೀಲ್, ಶ್ರೀ ಷಣ್ಮುಖ ಮತ್ತು ಇತರ ನೌಕರರನ್ನು ಸಂಘದ ವತಿಯಿಂದ ಗೌರವಿಸಲಾಯಿತು.ಕಾರ್ಯಕ್ರಮವು ಶ್ರೀ ತಿಪ್ಪೇಸ್ವಾಮಿ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಸಂಘದ ಉಪಾಧ್ಯಕ್ಷರಾದ ಶ್ರೀ ಭೈರೇಶ್ ವ್ಹಿ.ಎಸ್, ವ್ಯವಸ್ಥಾಪಕರು, ಸ್ವಾಗತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಶ್ರೀ ವೆಂಕಟೇಶ್ ತಿಮ್ಮನಾಯ್ಕರ್, ಶ್ರೀ ಜಯಪ್ರಕಾಶ್ ಚವ್ಹಾಣ್, ಶ್ರೀ ಡಿ. ಲಕ್ಷ್ಮೀಕಾಂತ, ಖಜಾಂಚಿಯಾದ ಶ್ರೀ ಬಾಪುಗೌಡ ಪಾಟೀಲ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲಾ ಮತ್ತು ತಾಲೂಕು ಪಂಚಾಯತಗಳಿಂದ ನೂರಾರು ಅಧಿಕಾರಿಗಳು ಮತ್ತು ನೌಕರರು ಭಾಗವಹಿಸಿದ್ದರು. ಕೊನೆಯಲ್ಲಿ, ವಂದನಾರ್ಪಣೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

Leave a Reply

Your email address will not be published. Required fields are marked *