ಯೋಗ ಪ್ರಪಂಚಕ್ಕೆ ನೀಡಿದ ಭಾರತದ ಅದ್ಭುತ ಕೊಡುಗೆ -ಜಿಲ್ಲಾ ನ್ಯಾ. ಶ್ರೀಮತಿ ನಾಗವೇಣಿ

ಗದಗ ( ಕರ್ನಾಟಕ ವಾರ್ತೆ21) ಪ್ರಪಂಚಕ್ಕೆ ಯೋಗದ ಮಹತ್ವದ ಬಗ್ಗೆ ತಿಳಿಸಿಕೊಟ್ಟ ಭಾರತದ ಕೊಡುಗೆ ಅದ್ಭುತ. ಎಲ್ಲಾ ದೈಹಿಕ ಹಾಗೂ ಮಾನಸಿಕ ಕಾಯಿಲೆಗಳಿಗೆ ಯೋಗ ರಾಮಬಾಣವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅದs್ಯಕ್ಷರಾದ ಶ್ರೀಮತಿ ನಾಗವೇಣಿ ಅವರು ತಿಳಿಸಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಆಯುಷ್ಯ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಗದಗ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ 11ನೇ ಅಂತರಾಷ್ಟಿçÃಯ ಂiೆÉÆÃಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯಾವುದೇ ಹಣವಿಲ್ಲದೆ ರೋಗ ಗುಣಪಡಿಸುವ ಶಕ್ತಿ ಯೋಗಕ್ಕಿದೆ, ಯೋಗ ಮಾಡುವುದರಿಂದ ಙõÁ್ಞಪಕಶಕ್ತಿ ವೃದ್ಧಿಸುತ್ತದೆ, ಮಾನಸಿಕ ಮತ್ತು ದೈಹಿಕ ಸಮತೋಲನ ಕಾಪಾಡಲು ಯೋಗ ಸಹಕಾರಿಯಾಗಿದೆ. ಕೆಲಸದ ಮದsÉ್ಯಯು ಕೂಡಾ ಪ್ರತಿದಿನ ಯೋಗ ಪ್ರಾಣಾಯಾಮ ಮಾಡುವುದರಿಂದ ಮನುಷ್ಯ ಮತ್ತು ಮನಸ್ಸು ಲವಲವಿಕೆಯಿಂದ ಉಲ್ಲಾಸದಿಂದ ಇರಲು ಸಾದs್ಯವಾಗುತ್ತದೆ, ಒಂದು ಭೂಮಿ ಒಂದು ಆರೋಗ್ಯ ಈ ವರ್ಷದ ಘೆÀÆÃಷವಾಕ್ಯವಾಗಿದ್ದು, ಆರೋಗ್ಯದ ಕಡೆಗೆ ಎಲ್ಲರೂ ಗಮನಹರಿಸಿ 11ನೇ ಅಂತರಾಷ್ಟಿçÃಯ ಂiÉÉÆÃಗ ದಿನಾಚರಣೆ ನಿಮಿತ್ಯವಾಗಿ ಜರುಗಿದ ಯೋಗಾಸನದ ಕಾರ್ಯಕ್ರಮವನ್ನು ಎಲ್ಲರೂ ಪ್ರತಿದಿನ ಯೋಗಾಸನ ಮಾಡುವುದರ ಮೂಲಕ ತಮ್ಮ ಆರೋಗ್ಯದ ಜೊತೆಗೆ ಸದsÈಡ ಭಾರತ ನಿರ್ಮಾಣಕ್ಕೆ ಕೈಜೋಡಿಸಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅದs್ಯಕ್ಷರಾದ ಶ್ರೀಮತಿ ನಾಗವೇಣಿ ತಿಳಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಗದಗ ಜಿಲ್ಲಾ ವಕೀಲರ ಸಂಘದ ಅದs್ಯಕ್ಷರಾದ ಆರ್.ಜಿ.ಕಲ್ಲೂರ ಅವರು ವಹಿಸಿದ್ದರು.ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗಂಗಾಧರ ಸಿ.ಎಮ್., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್.ಶಿವನಗೌಡ್ರ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರಾದ ಜಿ.ಆರ್.ಶೆಟ್ಟರ, ಪ್ರಧಾನ ದಿವಾಣಿ ನ್ಯಾಯಾಧೀಶರಾದ ದೀಪ್ತಿ ನಾಡಗೌಡ, 1ನೇ ಜೆಎಂಎಫ್‌ಸಿ ನ್ಯಾಯಾಧೀಶÀರಾದ ಶ್ರೀಮತಿ ಶಿಲ್ಪಾ ತಿಮ್ಮಾಪೂರ, 2ನೇ ಜೆಎಂಎಫ್‌ಸಿ ನ್ಯಾಯಾಧೀಶÀರಾದ ಬೀರಪ್ಪ ಕಾಂಬಳೆ ಹಾಗೂ ಗದಗ ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಮ್.ಎ.ನಾಯ್ಕರ, ಉಪಾಧ್ಯಕ್ಷರಾದ ಎಮ್.ಎ.ಸಂಗನಾಳ, ವಕೀಲರ ಸಂಘದ ಸದಸ್ಯರುಗಳು, ಕಾನೂನು ನೆರವು ಅಭಿರಕ್ಷಕ ವಕೀಲರು, ಪ್ಯಾನಲ್ ವಕೀಲರು, ಪಿ.ಎಲ್.ವಿ ಗಳು ಹಾಗೂ ನ್ಯಾಯಾಲಯದ ಸಿಬ್ಬಂದಿ ವರ್ಗ , ವಕೀಲರ ಸಂಘದ ಸದಸ್ಯರುಗಳು, ಕಾನೂನು ನೆರವು ಅಭಿರಕ್ಷಕ ವಕೀಲರು, ಪ್ಯಾನಲ್ ವಕೀಲರು, ಪಿ.ಎಲ್.ವಿ ಗಳು ಹಾಗೂ ನ್ಯಾಯಾಲಯದ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.ಶ್ರೀಮತಿ ಶಶಿಕಲಾ ಜೋಗರಡ್ಡಿ ಅವರು ಯೋಗ ಕಾರ್ಯಕ್ರಮವನ್ನು ಜರುಗಿಸಿಕೊಟ್ಟರು.

Leave a Reply

Your email address will not be published. Required fields are marked *