
*ಕೆರೆಗೆ ಹಾರಲು ಬಂದ ತಾಯಿ-ಮಕ್ಕಳ ರಕ್ಷಣೆ..
!*ಗದಗ ನಗರದ ಭೀಷ್ಮ ಕೆರೆಗೆ ಹಾರಿ ತನ್ನೆರಡು ಮಕ್ಕಳೊಂದಿಗೆ ಆತ್ಮಹತ್ಯೆಗೆ ಮುಂದಾಗಿದ್ದ ಮಹಿಳೆಯನ್ನು ಟೂರಿಸ್ಟ್ ಪೋಲಿಸರು (ಪ್ರವಾಸಿ ಮಿತ್ರರು) ರಕ್ಷಿಸಿದ ಘಟನೆ ಇಂದು ರವಿವಾರ ನಡೆದಿದೆ

.ಗದಗ ಪಂಚಾಕ್ಷರಿ ನಗರದ ನಿವಾಸಿ ಎನ್ನಲಾದ ಒರ್ವ ಮಹಿಳೆಯು ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ತನ್ನ ಎರಡು ಮುದ್ದಾದ ಗಂಡು ಮಕ್ಕಳೊಂದಿಗೆ ಕೆರೆಗೆ ಹಾರಲು ಬಂದವಳನ್ನು ಪ್ರವಾಸಿ ಮಿತ್ರರಾದ ಎಮ್.ಬಿ.ಹೂಗಾರ್, ಎಮ್.ಎನ್.ಮಾದರ ಹಾಗೂ ಕುಮಾರಿ ಎಸ್.ಎಲ್.ಬುಟ್ಟಿ ರಕ್ಷಿಸಿದ್ದಾರೆ.ತದನಂತರ ೧೧೨ ಪೋಲಿಸ್ ಸಹಾಯವಾಣಿಗೆ ಕರೆ ಮಾಡಿ ತಾಯಿ ಮಕ್ಕಳನ್ನು ಪೋಲಿಸರಿಗೆ ಒಪ್ಪಿಸಿದ್ದು ಹೆಚ್ಚಿನ ವಿಚಾರಣೆಗೆ ಪೋಲಿಸರು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ

.ಒಟ್ಟಾರೆಯಾಗಿ ತಾಯಿ ಮಕ್ಕಳನ್ನು ರಕ್ಷಿಸಿದ ಪ್ರವಾಸಿ ಮಿತ್ರ ತಂಡಕ್ಕೆ ಒಂದು ಹ್ಯಾಟ್ಸಪ್ ಹೇಳಬೇಕಾಗಿದೆ.*
ವರದಿ*✍️ಚಂದ್ರಶೇಖರ ಸೋಮಣ್ಣವರ