
*ಅ.೧ ರಂದು ಮುಂಡರಗಿ ಪಟ್ಟಣಕ್ಕೆ ಚಿತ್ರನಟಿ ಪ್ರೇಮಾ ಆಗಮನ*
ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಅಗಸ್ಟ್.೧ ರಂದು ಸಾಯಂಕಾಲ ನಡೆಯಲಿರುವ ಜಾನಪದ ಗೀತೆಗಳ ರಸಮಂಜರಿ ಕಾರ್ಯಕ್ರದಲ್ಲಿ ಚಿತ್ರನಟಿ ಪ್ರೇಮಾ ಇವರು ಪಾಲ್ಗೊಳ್ಳಲಿದ್ದಾರೆ.
ಶಿರಹಟ್ಟಿ ಮೀಸಲು ವಿಧಾನಸಭೆ ಕ್ಷೇತ್ರದ ಶಾಸಕ ಡಾ.ಚಂದ್ರು ಲಮಾಣಿ ಇವರ ಜನ್ಮ ದಿನದ ಆಚರಣೆಯ ನಿಮಿತ್ಯವಾಗಿ ಮುಂಡರಗಿ ಪಟ್ಟಣದ ಶ್ರೀ ಅನ್ನದಾನೇಶ್ವರ ಕಾಲೇಜು ಮೈಧಾನದಲ್ಲಿ ಅಗಸ್ಟ್.೧ ರಂದು ಶುಕ್ರವಾರ ಸಾಯಂಕಾಲ ಜರುಗಲಿರುವ ಜಾನಪದ ಗೀತೆಗಳ ರಸಮಂಜರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಚಿತ್ರನಟಿ ಪ್ರೇಮಾ ಆಗಮಿಸಲಿದ್ದಾರೆ.

*ವರದಿ*✍️ಚಂದ್ರಶೇಖರ ಸೋಮಣ್ಣವರ