
ಒಳಮೀಸಲಾತಿ ಜಾರಿಯಾಗದಿದ್ದರೆ ರಕ್ತಪಾತ: ಗಣೇಶ್ ಹೊರತಟ್ನಾಳ್ ಎಚ್ಚರಿಕೆ
ಕೊಪ್ಪಳ : ಒಳ ಮೀಸಲಾತಿಗಾಗಿ ನಾಗಮೋಹನ್ ದಾಸ್ ವರದಿಯನ್ನು ಕೂಡಲೇ ಯಥಾರೀತಿ ಜಾರಿ ಮಾಡವಂತೆ ಈಗಾಗಲೇ ಮನವಿ ಮಾಡಿದ್ದು, ಸರ್ಕಾರ ವಿಳಂಬ ನೀತಿ ಅನುಸರಿಸಿದೆ, ಒಳಮೀಸಲಾತಿ ಜಾರಿಗೆ ರಾಜಕೀಯ ಮಾಡಿದ್ರೆ ರಕ್ತಪಾತ ಆಗುತ್ತೆ ಎಂದು ಮಾದಿಗ ಸಮುದಾಯ ಯುವ ಮುಖಂಡ ಗಣೇಶ್ ಹೊರತಟ್ನಾಳ್ ಎಚ್ಚರಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗಣೇಶ್ ಹೊರತಟ್ನಾಳ್, ಸುದೀರ್ಘ ಮೂರು ದಶಕಗಳಿಂದ ಒಳ ಮೀಸಲಾತಿ ಜಾರಿಗಾಗಿ ಮಾದಿಗ ಸಮುದಾಯ ಹೋರಾಟ ಮಾಡುತ್ತಲೇ ಇದೆ, ಕಾಂಗ್ರೆಸ್ ಸಿದ್ದರಾಮಯ್ಯ ಸರ್ಕಾರ ಚುನಾವಣೆ ಮುನ್ನ ಪ್ರಣಾಳಿಕೆಯಲ್ಲಿ ನೀಡಿದ ಒಳಮೀಸಲಾತಿ ಭರವಸೆಯನ್ನು ಮಾತಿನಂತೆ ಈಡೇರಿಸಲಿ, ಕೊಟ್ಟ ಮಾತಿನಂತೆ ನಾಗಮೋಹನ್ ದಾಸ್ ವರದಿಯನ್ನು ಯಥಾರೀತಿ ಜಾರಿ ಮಾಡಲಿ, ಆಗಸ್ಟ್ 16 ಎಂದು ಹೇಳಿದ ಸರ್ಕಾರ ಆಗಸ್ಟ್ 19ಕ್ಕೆ ಮುಂದೂಡಿದೆ, ಇದರಲ್ಲಿ ಏನೋ ಹುನ್ನಾರ ಅಡಿಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇದು ಕಾಂಗ್ರೆಸ್ ನ ವಿಳಂಬ ನೀತಿ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.

ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸಿನಂತೆ ಆದಿ ಕರ್ನಾಟಕ 147199, ಆದಿದ್ರಾವಿಡ 320641, ಆದಿ ಆಂಧ್ರ 7114 ಜನ ಸಂಖ್ಯೆ ಇದ್ದು ಇದನ್ನು ‘ಇ’ ಪ್ರವರ್ಗದಲ್ಲಿ ಗುರಿತಿಸಲಾಗಿದೆ, ‘ಇ’ ಗುಂಪಿನಲ್ಲಿ ಮೂಲ ಜಾತಿಹೇಳದೆ ಆದಿದ್ರಾವಿಡ ಎಂದು ಗುರುತಿಸಿಕೊಂಡವರು 320641 ಜನ ಇದ್ದಾರೆ.ಇವರಲ್ಲಿ ಬಹುತೇಕರು ಪೌರಕಾರ್ಮಿಕರಿದ್ದಾರೆ.
ಮಾದಿಗ ಸಮುದಾಯದವರಾಗಿದ್ದಾರೆ, ಹಾಗಾಗಿ ಸರ್ಕಾರ ಎಚ್ವರಿಕೆಯಿಂದ ಹೆಜ್ಜೆ ಇಡಬೇಕು ಎಂದು ತಿಳಿಸಿದರು.
ಸಿದ್ದರಾಮಯ್ಯನವರು 2013-2018 ರ ವರೆಗೆ ಸಿಎಂ ಇದ್ದಾಗಲೂ ವಿಳಂಬ ಧೋರಣೆ ಅನುಸರಿಸಿದ್ದಾರೆ. ಸಿದ್ದರಾಮಯ್ಯ ಅವರು ಮೂರು ಸಚಿವರ ಕೈಗೊಂಬೆಯಾಗಿದ್ದಾರೆ. ಆಗಸ್ಟ್ 1ಕ್ಕೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಒಂದು ವರ್ಷ ಕಳೆದ್ರೂ, ಸಿದ್ದರಾಮಯ್ಯ ಸರ್ಕಾರ ಇನ್ನು ವಿಳಂಬ ನೀತಿ ಅನುಸರಿಸುತ್ತಿದೆ. ಒಳಮೀಸಲಾತಿ ಜಾರಿಯಾಗದೇ, ನೇಮಕಾತಿಗಳು ಸಹ ನೆನಗುದಿಗೆ ಬಿದ್ದಿವೆ, ಸಿದ್ದರಾಮಯ್ಯ ಸರ್ಕಾರ ಕಾಲಹರಣ ನೀತಿಯನ್ನು ಪಕ್ಕಕ್ಕೆ ಇಟ್ಟು ಆಗಸ್ಟ್ 19 ಕ್ಕೆ ಒಳಮೀಸಲಾತಿ ಜಾರಿ ಮಾಡಬೇಕು, ಇಲ್ಲವಾದರೆ ಉಗ್ರಹೋರಾಟ, ರಕ್ತಪಾತ ಖಚಿತ ಎಂದರು.

ಇನ್ನೋರ್ವ ಮಾದಿಗ ಮುಖಂಡ ಮಲ್ಲಿಕಾರ್ಜುನ ಪೂಜಾರ ಮಾತನಾಡಿ ಆಗಸ್ಟ್ 19 ನೇ ದಿನಾಂಕದಂದು ಸರಕಾರ ಶಿಫಾರಸ್ಸು ಮಾಡಿ ಗೌರವಾನ್ವಿತ ರಾಜ್ಯಪಾಲರ ಅಂಕಿತ ಬೀಳದಿದ್ದರೆ ಕೊಪ್ಪಳ ಜಿಲ್ಲೆ ಬಂದ್ ಗೆ ಕರೆ ನೀಡಲಾಗುವುದೆಂದು ಎಚ್ಚರಿಕೆ ನೀಡಿದರು.
ಈ ಪತ್ರಿಕಾ ಗೋಷ್ಠಿಯಲ್ಲಿ ಮಾದಿಗ ಸಮುದಾಯದ ಮುಖಂಡರಾದ ಹನುಮೇಶ್ ಕಡೆಮನಿ, ರಾಮಣ್ಣ ಚೌಡಕಿ, ನಿಂಗಪ್ಪ ಮೈನಳ್ಳಿ, ಮಂಜುನಾಥ್ ಮುಸಲಾಪುರ, ಮಾರುತೆಪ್ಪ ಬಿಕನಳ್ಳಿ, ಶಂಕರ್ ನರೇಗಲ್, ಸುಧೀರ್ ಕಾತರಕಿ, ಬಸವರಾಜ್ ಮ್ಯಗಳಮನಿ ಇತರರು ಇದ್ದರು.
ಇಂದು (ಸೋಮವಾರ) ಕೊಪ್ಪಳ ಶಾಸಕರ ಮನೆಯ ಮುಂದೆ ತಮಟೆ ಚಳುವಳಿ
ಆ.18 ರಂದು ಕೊಪ್ಪಳ ನಗರದ ವೈಟ್ ಹೌಸ್ ಮನೆ ಮುಂದೆ ಬೆಳಗ್ಗೆ 10:30 ಘಂಟೆಗೆ ಕೊಪ್ಪಳ ಶಾಸಕರ ಮನೆಯ ಮುಂದೆ ಸದನದಲ್ಲಿ ಒಳ ಮೀಸಲಾತಿ ಬಗ್ಗೆ ಧ್ವನಿ ಎತ್ತುವಂತೆ ತಮಟೆ ಚಳುವಳಿ ಮಾಡಲಾಗುವದು ಹಾಗಾಗಿ ಮಾದಿಗ ಸಮುದಾಯದ ಹಿರಿಯರು ಮತ್ತು ಯುವಕ ಮಿತ್ರರು ಎಲ್ಲರೂ ಭಾಗವಸಬೇಕಾಗಿ ವಿನಂತಿ.
ಸ್ಥಳ : ಕೊಪ್ಪಳ ನಗರದ ಲೋಕೋಪಯೋಗಿ ಇಲಾಖೆ ಹತ್ತಿರ ಕಾವ್ಯಾನಂದ ಪಾರ್ಕ್ ಹತ್ತಿರ ಸೇರಬೇಕೆಂದು ಮನವಿ ಮಾಡಿದರು.
