ಡಂಬಳದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರೈತರು

ಡಂಬಳದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರೈತರು

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಹೋಬಳಿ ರೈತರು ಕಂದಾಯ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿತು.ರೈತರು ತಮ್ಮ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಡಂಬಳ ನಾಡಕಛೇರಿಯ ಉಪ ತಹಶೀಲ್ದಾರ್ ಎಸ್.ಎಸ್.ಬಿಚ್ಚಾಲಿ ಇವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರು ಗದಗ ಜಿಲ್ಲೆಯಲ್ಲಿ ಒರಿಯಂಟಲ್ ಇನ್ಸ್ಯೂರೆನ್ಸ್ ಕಂಪನಿಯವರು ರೈತರಿಗೆ ಸರಿಯಾಗಿ ಬೆಳೆವಿಮೆ ಹಣವನ್ನು ನೀಡುತ್ತಿಲ್ಲ.

ಹಣ ತುಂಬಿದ ಶೇಕಡಾ 75 ರಷ್ಟು ರೈತರ ಕಣ್ಣಿಗೆ ಮಣ್ಣೆರಚಿ ಹೊಂದಾಣಿಕೆ ಹಾಗೂ ಸಮಪಾಲು ಮಾಡಿಕೊಂಡ ಶೇಕಡಾ 25 ರಷ್ಟು ರೈತರಿಗೆ ಮಾತ್ರ ಹಣ ಖಾತೆಗೆ ಜಮೆಯಾಗುತ್ತಿದ್ದು ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕೆಂದು ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು

.ಮುಂದುವರಿದು ಕೃಷಿ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರೈತರು ಎಷ್ಟು ಜಮೀನುಗಳಿಗೆ ಭೇಟಿ ನೀಡಿದ್ದೀರಿ. ರೈತರಿಗೆ ಏನೇನು ಮಾಹಿತಿ ನೀಡಿದ್ದೀರಿ ಹಾಗೂ ಎಷ್ಟು ರೈತರಿಗೆ ತರಭೇತಿ ನೀಡಿದ್ದೀರಿ ಎಂದು ಚೆನ್ನಾಗಿ ಕ್ಲಾಸ್ ತೆಗೆದುಕೊಂಡರು.

ಸಂದರ್ಭದಲ್ಲಿ ಮುಂಡರಗಿ ತಾಲೂಕು ಹಾಗೂ ಗದಗ ಜಿಲ್ಲಾ ಮಟ್ಟದ ರೈತ ಸಂಘದ ಮುಖಂಡರು ಹಾಗೂ ಹಲವು ರೈತರು ಉಪಸ್ಥಿತರಿದ್ದರು.

*ವರದಿ*✍️ಚಂದ್ರಶೇಖರ ಸೋಮಣ್ಣವರ

Leave a Reply

Your email address will not be published. Required fields are marked *