ಹಿಂಚಗೇರಾ ಗ್ರಾಮದ ಶಿಕ್ಷಕ. ಕೆ.ಎಚ್. ಬಿರಾದಾರಗೆ ಬೆಸ್ಟ್ ಟೀಚರ್ ಅವಾರ್ಡ್.

ಹಿಂಚಗೇರಾ ಗ್ರಾಮದ ಶಿಕ್ಷಕ. ಕೆ.ಎಚ್. ಬಿರಾದಾರಗೆ ಬೆಸ್ಟ್ ಟೀಚರ್ ಅವಾರ್ಡ್

ಅಫಜಲಪುರ: ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ನಡೆದ ಶಿಕ್ಷಕರ ದಿನಾಚರಣೆ ಹಾಗೂ 2025-26ನೇ ಸಾಲಿನ ತಾಲೂಕು ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ ಭವ್ಯವಾಗಿ ನೆರವೇರಿತು.

ಈ ಕಾರ್ಯಕ್ರಮವನ್ನು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.

ಸಂದರ್ಭದಲ್ಲಿ ಹಿಂಚಗೇರಾ ಗ್ರಾಮದ ಸೃಜನಶೀಲ ಶಿಕ್ಷಕರಾದ ಕೆ.ಎಚ್. ಬಿರಾದಾರರ ಅವರಿಗೆ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಹಿನ್ನಲೆ ಭವ್ಯ ಸಮಾರಂಭದಲ್ಲಿ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಯುವರಾಜ ಗಾಡಿ, ತಹಸೀಲ್ದಾರ ಸಂಜೀವಕುಮಾರ ದಾಸರ, ಪುರಸಭೆ ಮುಖ್ಯಾಧಿಕಾರಿ ಸುಹಾಸಿನಿ ಖೇಳಗಿ, ಶ್ರೀ ಮಳೇಂದ್ರ ಸಂಸ್ಥಾನ ಹಿರೇಮಠದ ಪೂಜ್ಯ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಶಿಕ್ಷಕರ ಸಮುದಾಯವು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಶುಭ ಹಾರೈಸಿದರು.

ಕೆ.ಎಚ್.ಬಿರಾದಾರವರಿಗೆ ಪ್ರಶಸ್ತಿ ಬಂದ ಹಿನ್ನಲೆ ಹಿಂಚಗೇರಾ ಗ್ರಾಮಸ್ಥರು , ಹಾಗೂ ಬಿರಾದಾರವರ ವಿದ್ಯಾರ್ಥಿಗಳ ಬಳಗ ಹರ್ಷ ವ್ಯಕ್ತ ಪಡಿಸಿ, ಬಿರಾದಾರ ಶಿಕ್ಷಕರು ಶಿಕ್ಷಣ ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಸಾಧನೆಗೈದು ಇನ್ನು ಅನೇಕ ಪ್ರಶಸ್ತಿಗೆ ಭಾಜನರಾಗಲಿ ಎಂದು ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *