ಮದರ್ ತೇರಸಾ ಪಿಯು ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಸ್ವಾಗತ ಸಮಾರಂಭ.

ಸುದ್ದಿ 8 ಅಫಜಲಪುರ 1

ಮದರ್ ತೇರಸಾ ಪಿಯು ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಸ್ವಾಗತ ಸಮಾರಂಭ

ಅಫಜಲಪುರ: ಪಟ್ಟಣದ ಮದರ್ ತೇರಸಾ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸೋಮವಾರ ಶಿಕ್ಷಕರ ದಿನಾಚರಣೆ ಹಾಗೂ 2025-26ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಹೂವಿನ ಶುಭಾಶಯಗಳ ಮೂಲಕ ಗೌರವ ಸಲ್ಲಿಸಿದರು. ಕಾಲೇಜಿನ ಪ್ರಾಂಶುಪಾಲ ಯಲ್ಲಾಲಿಂಗ ಆರ್. ಪೂಜಾರಿ ಮುಖ್ಯ ಭಾಷಣ ಮಾಡುತ್ತಾ, ಶಿಕ್ಷಕರ ದಿನದ ಮೂಲ ತಾತ್ಪರ್ಯ ಮತ್ತು ಗುರು-ಶಿಷ್ಯರ ನಡುವಿನ ನಂಟಿನ ಮಹತ್ವವನ್ನು ನೆನಪಿಸಿದರು.

ಹೊಸ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲೂ ಚುರುಕಾಗಿ ಪಾಲ್ಗೊಳ್ಳಬೇಕೆಂದು ಅವರು ತಿಳಿಸಿದರು.ಎನ್.ಎಮ್.ಇ.ಎಸ್. ಸಂಸ್ಥೆ ಅಧ್ಯಕ್ಷ ಸಲೀಂ ಇಬ್ರಾಹಿಂ ಶೇಖ ಅವರು ಅಧ್ಯಕ್ಷೀಯ ಭಾಷಣ ನೀಡಿದರು. “ಗುರುಗಳ ಮಾರ್ಗದರ್ಶನವೇ ವಿದ್ಯಾರ್ಥಿಗಳ ಭವಿಷ್ಯ ಕಟ್ಟುವ ಆಧಾರ. ಶಿಕ್ಷಣ ಕೇವಲ ಪಾಠಪುಸ್ತಕದ ಜ್ಞಾನವಲ್ಲ, ಬದಲಿಗೆ ವ್ಯಕ್ತಿತ್ವ ವಿಕಸನಕ್ಕೆ ದಾರಿ ತೋರುವ ಶಕ್ತಿ” ಎಂದು ಅವರು ಹೇಳಿದರು. ಜೊತೆಗೆ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ವಿವರಿಸಿದರು.ನೋಬಲ್ ಪ್ರೌಢಶಾಲೆಯ ಮುಖ್ಯಗುರು ಗೌಸ್ ಪಟೇಲ ಅವರು ಶಿಕ್ಷಣದ ಹಾದಿಯಲ್ಲಿ ಶ್ರಮ, ನಿಯಮಿತತೆ ಹಾಗೂ ಗುರುಸ್ಮರಣೆ ಎಷ್ಟು ಮುಖ್ಯವೆಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾದ ಸಂಜುಕುಮಾರ ದುಬೆ, ಖಾಜಾ ಹುಷೇನ್ ನಿಗಿನಾಳ, ಬೋಧಕರಾದ ಯಲ್ಲಾಲಿಂಗ ಆರ್. ಪೂಜಾರಿ, ಯಲ್ಲಾಲಿಂಗ ಪ್ಯಾಟಿ, ಸಂಜೀವಕುಮಾರ ಟಪ್ಪಾ, ನಿಂಗಣ್ಣ ಪೂಜಾರಿ, ಪ್ರಶಾಂತ ಅಂಜುಟಗಿ, ರಫೀಕ್ ಮುಜಾವರ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶೋಭೆ ತಂದರು. ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿ ಸಮಾರಂಭಕ್ಕೆ ಹಿರಿಮೆಯನ್ನು ಸೇರಿಸಿದರು.ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿ, ಉತ್ತಮ ಅಂಕಗಳನ್ನು ಪಡೆದು ಕಾಲೇಜಿನ ಹೆಗ್ಗಳಿಕೆಯಾಗಲು ಪ್ರತಿಜ್ಞೆ ಮಾಡಿದರು.

Leave a Reply

Your email address will not be published. Required fields are marked *