ಜಮಖಂಡಿಯಲ್ಲಿ ಮದುವೆ ದಿನವೇ ವರನಿಗೆ ಹೃದಯಾಘಾತ

ಬಾಗಲಕೋಟೆ: ಜಿಲ್ಲೆಯ ಜಮಖಂಡಿಯಲ್ಲಿ ನಡೆದ ಮದುವೆಯೊಂದರಲ್ಲಿ ತಾಳಿ ಕಟ್ಟಿದ ಕೇವಲ 20 ನಿಮಿಷಗಳಲ್ಲೇ ವರ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಈ ಘಟನೆ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದಿದ್ದು, ವರನ ಹಠಾತ್ ಸಾವು ಎರಡೂ ಕುಟುಂಬಗಳಿಗೆ ಆಘಾತ ತಂದಿದೆ.

ಆತ ಹಲವು ಕನಸು ಕಂಡು ಮದುವೆ ಮಂಟಪವೇರಿದ್ದ. ಮದುಮಗಳನ್ನು ಕಂಡು ಖುಷಿಯಿಂದಲೇ ಆತ ತಾಳಿ ಕಟ್ಟಿದ್ದ. ಇಡೀ ನಂದೀಕೇಶ್ವರ ಕಲ್ಯಾಣ ಮಂಟಪದಲ್ಲಿ ಎರಡು ಕುಟುಂಬದವರ ಸಂಭ್ರಮವೋ ಸಂಭ್ರಮ. ಆದರೆ, ಈ ಸಂಭ್ರಮ ಬಹಳ ಕಾಲ ಉಳಿಯಲೇ ಇಲ್ಲ.

ತಾಳಿ ಕಟ್ಟಿ ಕೇವಲ 20 ನಿಮಿಷಗಳಾಗಿ ಇತರ ವಿಧಿವಿಧಾನಗಳು ನಡೆಯುತ್ತಿದ್ದವಷ್ಟೇ. ಈ ವೇಳೆ ವರನಿಗೆ ಹೃದಯಾಘಾತವಾಗಿದೆ. ಅಲ್ಲಿಯೇ ಕುಸಿದು ಬಿದ್ದಿ ಸಾವು ಕಂಡಿದ್ದಾನೆ. ಇದೆಲ್ಲವೂ ಎರಡೂ ಕುಟುಂಬಗಳು ಹಾಗೂ ಆಪ್ತರ ಸಮ್ಮುಖದಲ್ಲೇ ಆಗಿದೆ. ಒಂದೇ ಕ್ಷಣದಲ್ಲಿ ಮದುವೆ ಮನೆ ಸೂತಕದ ಮನೆಯಾಗಿ ಬದಲಾಗಿ ಹೋಯಿತು. ಖುಷಿಯಿಂದ ಮದುಮಗಳನ್ನು ಕಲ್ಯಾಣ ಮಂಟಪದಿಂದ ಕರೆದುಕೊಂಡು ಹೋಗಬೇಕು ಎನ್ನುವ ಆಸೆಯಲ್ಲಿದ್ದ ವರನ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ.

Leave a Reply

Your email address will not be published. Required fields are marked *