*ಗಂಗಾವತಿ* : ನಗರದ 6 ನೇ ವಾರ್ಡ್ ನ ರೈತ ಆಲಯ್ಯಸ್ವಾಮಿ ಶಾಸ್ತ್ರಿಮಠ ಇವರ ಸುಪುತ್ರ ವಿನಯ ಶಾಸ್ತ್ರಿಮಠ ಪಿಯುಸಿ ವಿಜ್ಞಾನ ವಿಭಾದಲ್ಲಿ ಶೇ.94 ರಷ್ಟು ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾನೆ.ಇತ್ತೀಚಿನ ವರದಿ ಪ್ರಕಾರ ಉತ್ತರ ಕರ್ನಾಟಕ ಭಾಗದಲ್ಲಿ ವಿಷೇಶವಾಗಿರೈತರ ಮಕ್ಕಳು ಸಾಧನೆ ಮಾಡುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ಪ್ರಾಥಮಿಕ, ಪ್ರೌಢ, ಹಾಗೂ ಪಿಯುಸಿ ವಿಭಾಗಗಳಲ್ಲಿ ಸುಮಾರು ರೈತರ ಮಕ್ಕಳೇ ಮೆಲುಗೈ ಸಾಧಿಸಿರುವುದು ನಮ್ಮ ಜಿಲ್ಲೆಗೆ ಹೆಮ್ಮೆಯಾಗಿದೆ.ನಗರದ ಕೊಟ್ಟೂರುಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯಲ್ಲಿ ಪ್ರೌಢ ಶಿಕ್ಷಣ ಪಡೆದಿದ್ದು, ಎಸ್.ಎಸ್.ಎಲ್.ಸಿಯಲ್ಲಿ ಪರೀಕ್ಷೆಯಲ್ಲಿಯು ವಿನಯ್ ಶೇ.94.56 ಅಂಕ ಪಡೆದು ಶಾಲೆಗೆ ಕೀರ್ತಿ ತಂದಿರುವುದು ಸ್ಮರಿಸಲೇಬೇಕು.ಈ ವಿದ್ಯಾರ್ಥಿಯು ಜುಲೈ ನಗರದ ಶ್ರೀವಿದ್ಯಾನಿಕೇತನ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಾಂಗ ಮಾಡುತಿದ್ದು, ಕಾಲೇಜ್ ಉಪನ್ಯಾಸಕರ ಉತ್ತಮ ಬೋಧನೆ ಹಾಗೂ ಪ್ರಾಚಾರ್ಯರ ಸಹಕಾರದಿಂದ ಉತ್ತಮ ಅಂಕಗಳಿಸಲು ಸಹಕಾರಿಯಾಗಿದೆ ಎಂದು ವಿನಯ್ ಪತ್ರಿಕೆಗೆ ತಿಳಿಸಿದ್ದಾನೆ.ಈ ವಿದ್ಯಾರ್ಥಿಯ ಸಾಧನೆಗೆ ಪಾಲಕರು, ಸ್ನೇಹಿತರು ಹಾಗೂ ಕಾಲೇಜ್ ಆಡಳಿತ ಮಂಡಳಿಯವರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
Related Posts
ಮೊಹರಂ ಹಬ್ಬ ಆಚರಣೆ:ಭಾವೈಕ್ಯತೆಗೆ ಸಾಕ್ಷಿಯಾದ ತಳ್ಳಿಹಾಳ ಗ್ರಾಮ ಹಿಂದುಗಳಿಂದಲೇ ಅಲಾಯ್ ದೇವರ ಪ್ರತಿಷ್ಠಾಪನೆ .
ರೋಣ: ಹಿಂದೂ ಹಾಗೂ ಮುಸ್ಲಿಮರ ಭಾವೈಕ್ಯತೆಯ ಹಬ್ಬ ಎಂದರೆ ಮೊಹರಂ, ತ್ಯಾಗ ಬಲಿದಾನದ ಸಂಕೇತವಾದ ಮೊಹರಂ ಹಬ್ಬವನ್ನು ಮುಸ್ಲಿಮರು ಇಲ್ಲದ ಊರಲ್ಲಿ ಹಿಂದೂಗಳಿಂದ ಅಚರಿಸುತ್ತಾ ಬಂದಿರುವುದು ವಿಶೇಷವಾಗಿದೆ.ತಾಲೂಕಿನ…
ಮೂಗುಬಸವೇಶ್ವರ ದೇವಸ್ಥಾನ ಸ್ಥಳಾಂತರ ಸರಿಯಲ್ಲ- ಗ್ರಾಮಸ್ಥ ಟಿಕ್ಯಾನಾಯಕ್
ಕೊಪ್ಪಳ: ಎಕ್ಸ್ ಇಂಡಿಯಾ ಕಾರ್ಖಾನೆ ಮಾಲೀಕರು ಪುರಾತನ ಹಾಗೂ ನೂರಾರು ವರ್ಷ ಇತಿಹಾಸ ಇರುವ ಮೂಗು ಬಸವೇಶ್ವರ ದೇವಸ್ಥಾನ ಸ್ಥಳಾಂತರ ಮಾಡುವುದು ಸರಿಯಲ್ಲ ಎಂದು ಗ್ರಾಮಸ್ಥ ಟಿಕ್ಯಾನಾಯಕ್…
ಉಳ್ಳಿoಜ ಪಾರ್ವತಿ ಜಯರಾಮ್ ಭಟ್ ನಿಧನ (.ಕುಮಾರ್ ಪೆರ್ನಾಜೆ ಸಹೋದರಿ ಪಾರ್ವತಿ ಭಟ್ ನಿಧನ
ಉಳ್ಳಿoಜ ಪಾರ್ವತಿ ಜಯರಾಮ್ ಭಟ್ ನಿಧನ (…ಕುಮಾರ್ ಪೆರ್ನಾಜೆ ಸಹೋದರಿ ಪಾರ್ವತಿ ಭಟ್ ನಿಧನ …)ಪೆರ್ನಾಜೆ: ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಉಳ್ಳಿoಜ ನಿವಾಸಿ ಕಾಕುಂಜೆ ಜಯರಾಮ್…
