ಸರ್ವಪಲ್ಲಿ ರಾಧಾಕೃಷ್ಣನ್ 137ನೇ ಜಯಂತಿ ಅಂಗವಾಗಿ ಅದ್ದೂರಿ ಶಿಕ್ಷಕರ ದಿನಾಚರಣೆ.

ವರದಿ ಲಕ್ಷ್ಮಣ್ ನವಲಹಳ್ಳಿ ಕುಷ್ಟಗಿ

ಕುಷ್ಟಗಿ:ಪಟ್ಟಣದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ 137ನೇ ಜಯಂತಿ ಅಂಗವಾಗಿ ಅದ್ದೂರಿ ಶಿಕ್ಷಕರ ದಿನಾಚರಣೆ

ಕುಷ್ಟಗಿ: ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ತಾಲ್ಲೂಕ ಮಟ್ಟದ ~ಶಿಕ್ಷಕರ ದಿನಾಚರಣೆ~ಯನ್ನು ಶನಿವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಪಟ್ಟಣದ ರಾಜ ಬೀದಿಯಲ್ಲಿ ನಡೆದ ಡಾ.ರಾಧಾಕೃಷ್ಣನ್ ಅವರ ಭಾವಚಿತ್ರದ ಆಕರ್ಷಕ ಮೆರವಣಿಗೆಯಲ್ಲಿ ತಾಲ್ಲೂಕಿನ ಪ್ರಾಥಮಿಕ, ಪ್ರೌಢ, ಕಿರಿಯ ಕಾಲೇಜುಗಳ ನೂರಾರು ಶಿಕ್ಷಕ ಶಿಕ್ಷಕಿಯರು ಪಾಲ್ಗೊಂಡಿದ್ದರು.ಕಲಾ ವಾದ್ಯಮೇಳದೊಂದಿಗೆ ಮೆರವಣಿಗೆಯುದ್ದಕ್ಕೂ ಹೆಜ್ಜೆ ಹಾಕಿದ ಕೆಲ ಶಿಕ್ಷಕರು ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸುತ್ತಿದ್ದುದು ಕಂಡುಬಂದಿತು. ಡಾ|| ಸರ್ವಪಲ್ಲಿ ರಾಧಾಕೃಷ್ಣನ್‌ರವರ 137ನೇ ಜನ್ಮ ದಿನೋತ್ಸವ ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಶಿಕ್ಷಕರ ದಿನಾಚರಣಾ ಸಮಿತಿ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸಹಯೋಗದಲ್ಲಿ, ಕ್ರೈಸ್ತ ದಿ ಕಿಂಗ್ ಶಾಲೆಯಲ್ಲಿ ಆಯೋಜನೆಗೊಂಡಿದ್ದ, ‘ತಾಲೂಕ ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭ’ ಕಾರ್ಯಕ್ರಮದಲ್ಲಿ ಘನ ಉಪಸ್ಥಿತಿ ಸ್ಥಳೀಯ ಶಾಸಕರು ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರಾದ ದೊಡ್ಡನಗೌಡ ಎಚ್ ಪಾಟೀಲ್ ಭಾಗವಹಿಸಿದ್ದರು.

ಸಂದರ್ಭದಲ್ಲಿ ಕಾಡಾ ಅಧ್ಯಕ್ಷರಾದ ಹಸನಸಾಬ್ ದೋಟಿಹಾಳ್,ವಿಶೇಷ ಉಪನ್ಯಾಸಕರಾದ ಬಸವರಾಜ ಸಿದ್ದಪ್ಪ ಹಂಚಲಿ, ಶರಣಪ್ಪ ತೆಮ್ಮಿನಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಗದೀಶಪ್ಪ,ಗುರಪ್ಪ ಕುರಿ, ರೆವರೆಂಡ್ ಫಾದರ್ ಜಾನ್ ಪೀಟರ್ ವ್ಯವಸ್ಥಾಪಕರು ಕ್ರೈಸ್ತ ದಿ ಕಿಂಗ್ ಶಾಲೆ, ಇನ್ನಿತರ ಅತಿಥಿ ಗಣ್ಯರು, ವಿವಿಧ ಇಲಾಖೆ ಮತ್ತು ಸಂಘ ಸಂಸ್ಥೆಗಳ ಅಧ್ಯಕ್ಷರು, ನಿರ್ದೇಶಕರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗು ಸಾರ್ವಜನಿಕರು ಉಪಸ್ಥಿತರಿದ್ದರು.ಗುರುರ್ ಬ್ರಹ್ಮ ಗುರುರ್ ವಿಷ್ಣು ಗುರುರ್ ದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರವೇ ನಮಃಅಜ್ಞಾನ, ಅಂಧಕಾರವನ್ನು ದೂರ ಮಾಡಿ, ಜ್ಞಾನಪ್ರಕಾಶದ ಮಾರ್ಗ ತೋರಿಸುವ ಅಸಾಧಾರಣ ವ್ಯಕ್ತಿತ್ವವೇ ಗುರು.

Leave a Reply

Your email address will not be published. Required fields are marked *