ಸಂಘದ ಶಕ್ತಿಯೇ ಧೀ ಶಕ್ತಿ.. ಷೇರುದಾರರು ಕಡ್ಡಾಯವಾಗಿ ಸಹಕಾರ ಸಂಘದಲ್ಲಿಯೇ ಆರ್ಥಿಕ ವ್ಯವಹಾರ ನಡೆಸಿ ಸಂಘದ ಸಮಗ್ರವಾದ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕು.ಶಾಸಕ ಮಂಜು ಕರೆ.

ಸಂಘದ ಶಕ್ತಿಯೇ ಧೀ ಶಕ್ತಿ.. ಷೇರುದಾರರು ಕಡ್ಡಾಯವಾಗಿ ಸಹಕಾರ ಸಂಘದಲ್ಲಿಯೇ ಆರ್ಥಿಕ ವ್ಯವಹಾರ ನಡೆಸಿ ಸಂಘದ ಸಮಗ್ರವಾದ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕು.ಶಾಸಕ ಮಂಜು ಕರೆ.

.ಕೃಷ್ಣರಾಜಪೇಟೆ

.ಸಂಘದ ಶಕ್ತಿಯೇ ಧೀ ಶಕ್ತಿಯಾಗಿರುವುದರಿಂದ ಷೇರುದಾರರು ಕಡ್ಡಾಯವಾಗಿ ಸಂಘದಲ್ಲಿಯೇ ಹಣಕಾಸು ಸೇರಿದಂತೆ, ಉಳಿತಾಯ ವ್ಯವಹಾರ ಮಾಡುವ ಮೂಲಕ ಸಂಘದ ಸಮಗ್ರವಾದ ಅಭಿವೃದ್ಧಿಗೆ ಮುನ್ನುಡಿ ಬರೆದು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ಶಾಸಕ ಹೆಚ್.ಟಿ.ಮಂಜು ಕರೆ ನೀಡಿದರು.ಅವರು ಇಂದು ಕೆ.ಆರ್.ಪೇಟೆ ಪಟ್ಟಣದ ರಾಮದಾಸ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಕೃಷ್ಣರಾಜಪೇಟೆ ತಾಲೂಕು ಗ್ರಾಜುಯೇಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಕೃಷ್ಣರಾಜಪೇಟೆ ತಾಲೂಕು ಗ್ರಾಜುಯೇಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಕೇವಲ 400 ಜನ ಪದವೀಧರರು ಷೇರುದಾರರಾಗಿದ್ದು ಸೊಸೈಟಿಯು ಏಳೂವರೆ ಲಕ್ಷ ರೂಪಾಯಿಗಳಿಗೂ ಹೆಚ್ಚಿನ ಲಾಭಗಳಿಸಿ ಅಭಿವೃದ್ಧಿಯ ಪಥದತ್ತ ಮುನ್ನಡೆಯುತ್ತಿದೆ

. ಪದವೀಧರ ಬಂಧುಗಳ ಅವಶ್ಯಕತೆಗೆ ಪೂರಕವಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡುತ್ತಾ , ಪ್ರಗತಿಯ ದಿಕ್ಕಿನಂತ ಸಾಗುತ್ತಿರುವ ಸಂಘದಿಂದಾಗಿ ನಿರುದ್ಯೋಗಿ ಪದವೀಧರರಿಗೆ ಆರ್ಥಿಕವಾಗಿ ಶಕ್ತಿ ಬಂದಿದ್ದು ಸ್ವಾಬಲಂಬನೆ ಸಾಧಿಸಿ ಮುನ್ನಡೆಯಲು ದಾರಿ ದೀಪವಾಗಿದೆ ಎಂದು ಹೇಳಿದ ಶಾಸಕ ಮಂಜು ಕೃಷ್ಣರಾಜಪೇಟೆ ತಾಲೂಕಿನಲ್ಲಿರುವ ಎಲ್ಲಾ ಪದವೀಧರರು ಕಡ್ಡಾಯವಾಗಿ ಸಂಘಕ್ಕೆ ಶೇರುದಾರರಾಗುವ ಮೂಲಕ ಸಂಘವು ಇನ್ನೂ ಬೆಳೆದು ಹೆಮ್ಮರವಾಗಿ ದೊಡ್ಡ ಬ್ಯಾಂಕ್ ಆಗಿ ಪರಿವರ್ತನೆ ಹೊಂದುವ ದಿಕ್ಕಿನಲ್ಲಿ ಸಹಕಾರ ಮನೋಭಾವನೆಯಿಂದ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು. ಕೃಷ್ಣರಾಜಪೇಟೆ ತಾಲೂಕು ಗ್ರಾಜುಯೆಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಡಾ. ಅಂಚಿ ಸಣ್ಣ ಸ್ವಾಮಿಗೌಡ ಅವರು ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಪದವೀಧರ ಬಂಧುಗಳಿಗೆ ಆರ್ಥಿಕ ಸ್ವಾವಲಂಬನೆ ನೀಡುವ ಸದುದ್ದೇಶದಿಂದ ಆರಂಭವಾದ ಸೊಸೈಟಿಯು ದಿನದಿಂದ ದಿನಕ್ಕೆ ಅಭಿವೃದ್ದಿ ಹೊಂದುತ್ತ ಪ್ರಗತಿಯ ದಿಕ್ಕಿನತ್ತ ಮುನ್ನಡೆಯುತ್ತಿದೆ.

ಕೃಷ್ಣರಾಜಪೇಟೆ ತಾಲೂಕಿನಲ್ಲಿರುವ ಎಲ್ಲಾ ನಿರುದ್ಯೋಗಿ ಪದವೀಧರರು ಕಡ್ಡಾಯವಾಗಿ ಸಂಘದ ಶೇರುದಾರರಾಗುವ ಜೊತೆಗೆ ಸಂಘದಲ್ಲಿ ಉಳಿತಾಯ ಖಾತೆ, ಆರ್ ಡಿ ಖಾತೆ ಸೇರಿದಂತೆ ಫಿಕ್ಸೆಡ್ ಡಿಪಾಸಿಟ್ ಅನ್ನು ಇಟ್ಟು ಸಂಘವು ವೇಗವಾಗಿ ಅಭಿವೃದ್ಧಿ ಹೊಂದುವ ದಿಕ್ಕಿನಲ್ಲಿ ಕೈಜೋಡಿಸಿ ಕೆಲಸ ಮಾಡಬೇಕು ಎಂದು ಕೈಮುಗಿದು ಮನವಿ ಮಾಡಿದರು. ಸಂಘದ ಉಪಾಧ್ಯಕ್ಷ ಡಿ.ಆರ್. ಮರಿಸ್ವಾಮಿಗೌಡ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಮಾಜಿ ಅಧ್ಯಕ್ಷ ಪದ್ಮೇಶ್, ಶಿಕ್ಷಣ ಇಲಾಖೆಯ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ. ರಮೇಶ್, ರಾಜ್ಯ ಆರ್‌ಟಿಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಶಿಕ್ಷಣ ಇಲಾಖೆಯ ವಿಶ್ರಾಂತ ಆಯುಕ್ತರಾದ ಕೆ.ಗೋಪಾಲ್, ಆಡಳಿತ ಮಂಡಳಿಯ ನಿರ್ದೇಶಕರಾದ ಎಸ್ ನಾಗರಾಜು, ಮುತ್ತುರಾಜು, ಪುಟ್ಟಸ್ವಾಮಿ, ಸಿ. ನಿರಂಜನ್, ಎಚ್.ಟಿ.ಮಹದೇವ, ಡಿ.ಆರ್. ನಾಗೇಶ್, ಕೆ.ಆರ್.ಮಹೇಶ್, ಅನಿಲ್ ಕುಮಾರ್.ಸಿ.ಎಂ, ಸುಮಾ, ವಿ.ಕೆ. ಸ್ವರೂಪ, ಚಂದ್ರು ಸೇರಿದಂತೆ ನೂರಾರು ಷೇರುದಾರರು ಹಾಗೂ ಚುನಾಯಿತ ಜನಪ್ರತಿನಿಧಿಗಳು ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಚರ್ಚೆ ನಡೆಸಿದರು.

ಸಂಘದ ಕಾರ್ಯದರ್ಶಿ ಲಕ್ಷ್ಮಿ ಮಂಜೇಗೌಡ ಅವರು ಸಂಘದ ವರದಿಯನ್ನು ಮಂಡಿಸಿದರು, ಇದೇ ಸಂದರ್ಭದಲ್ಲಿ ಈ ಸ್ಟಾಂಪಿಂಗ್ ಆಪರೇಟರ್ ನಗ್ಮಾ ಭಾನು ಅವರ ಸೀಮಂತ ಕಾರ್ಯಕ್ರಮವನ್ನು ಸಂಘದ ಶೇರುದಾರರು ಹಾಗೂ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಸಂಭ್ರಮದಿಂದ ಆಚರಿಸಿದ್ದು ವಿಶೇಷವಾಗಿತ್ತು.

.*ವರದಿ.ಎಂ.ಕೆ.ಹರಿಚರಣತಿಲಕ್, ಕೃಷ್ಣರಾಜಪೇಟೆ, ಮಂಡ್ಯ*.

Leave a Reply

Your email address will not be published. Required fields are marked *