ಅಂದುಕೊಳ್ಳಿ, ಇಲ್ಲವೇ ಹೊಂದುಕೊಳ್ಳಿ.”ನಾನು ಅಂದುಕೊಂಡ ಹಾಗೆ ಏನೂ ಆಗುತ್ತಿಲ್ಲ-ಯುವ ಲೇಖಕಿ- ಸಿಂಚನ ಜಿ ಎನ್.

ಈ ಜೀವನ ತುಂಬಾ ಬೇಜಾರು ನನಗೆ ಅಂತ ಆಗಾಗ ನನಗೆ ನನ್ನ ಸ್ನೇಹಿತರು ಹೇಳುತ್ತಲೇ ಇರುತ್ತಾರೆ. ನಾನು ಆಗ ಅವರಿಗೆ ನೀಡುವ ಒಂದು ಪರಿಹಾರವೇ ಅಂದುಕೊಳ್ಳಿ ಇಲ್ಲವೇ ಹೊಂದುಕೊಳ್ಳಿ. ಬದುಕು ಬಂದಂತೆ ಸ್ವೀಕರಿಸಬೇಕು .ಅದರಲ್ಲೂ ಬದುಕಲ್ಲಿ ಒಂದಷ್ಟು ಕನಸುಗಳನ್ನು ಇಟ್ಟುಕೊಳ್ಳಬೇಕು, ಅದಕ್ಕೆ ಸಂಬಂಧಪಟ್ಟಂತೆ ಹಗಲು ರಾತ್ರಿ ದುಡಿಯಬೇಕು. ಪ್ರಯತ್ನ ಸತತವಾಗಿರಬೇಕು ಫಲದ ಬಗ್ಗೆ ಚಿಂತಿಸದೆ ಪ್ರಯತ್ನ ಪಡಲೇಬೇಕು .ಆದರೆ ಅಕಸ್ಮಾತ್ ಸೋತಾಗ ಕುಗ್ಗದೆ ಛಲ ಬಿಡದೆ ಅಂದುಕೊಂಡದ್ದು ಆಗಿಲ್ಲವೆಂಬ ನೋವುಗಳು ಇಲ್ಲದೆ. ಆಗಿರುವ ಪರಿಸ್ಥಿತಿಗೆ ಹೊಂದಿಕೊಳ್ಳಬೇಕು. ನಮ್ಮ ಮನಸ್ಥಿತಿ ಸದಾ ಕಾಲ ನಮಗೆ ಎಲ್ಲಾ ರೀತಿಯಲ್ಲೂ ಅಚ್ಚುಕಟ್ಟಾದ, ತೃಪ್ತಿಕರವಾದ, ನಾಜುಕದ ಜೀವನವನ್ನು ಕೇಳುತ್ತಿರುತ್ತದೆ. ಸ್ನೇಹಿತರೆ ಒಮ್ಮೆ ಯೋಚಿಸಿ, ಒಂದು ಉದಾಹರಣೆ ತಿಳಿಸುವೆ. ಆಸ್ಪತ್ರೆ ಹೋಗಿ ದಾಖಲಾದ ರೋಗಿಯ ಜೊತೆಯಲ್ಲಿ ಇರುವವರು ನನಗೆ ಪ್ರತಿದಿನ ರಾತ್ರಿಯಂತೆ ಸುಖನಿದ್ರೆ ಬೇಕು, ಮಲಗಬೇಕು ಬೇಗನೆ ಎಂದರೆ ಸಾಧ್ಯವೇ?ಹಾಗೆ ಗರ್ಭಗುಡಿಯ ಒಳಗೆ ಪೂಜಿಸುವ ಅರ್ಚಕರು ಇನ್ಯಾವುದೋ ಮೈಲಿಗೆ ಕೆಲಸಗಳು ಮಾಡಲು ಸಾಧ್ಯವೇ? ಪ್ರಕೃತಿ ಪ್ರತಿಯೊಬ್ಬರಿಗೂ ಅವರದೇ ಆದಂತಹ ಕೆಲಸ ಕಾರ್ಯಗಳನ್ನು ಸಹಜವಾಗಿ ನಿರ್ಣಯಿಸಿದೆ. ಅದಕ್ಕೆ ಬೆಲೆ ಕೊಡೋಣ. ಹತ್ತು ವರ್ಷಗಳಿಂದ ಕಂಡ ಕನಸು ನನಸಾಗಲಿಲ್ಲ ಎಂದು ಯಾವ ಪೋಷಕರಾದರು ತಮ್ಮ ಮಕ್ಕಳ ಮೇಲೆ ಹೊರೆ ಹಾಕಿ ನಿಂದಿಸಿರುವುದನ್ನು ಕಂಡಿದ್ದೀರಾ? ಯಾಕಂದ್ರೆ ಪೋಷಕರ ಅನುಭವದ ಎದುರು ಹೊಂದಾಣಿಕೆ ಗೆದ್ದಿದೆ ಹೊರತು.ಅಂದುಕೊಂಡದ್ದಲ್ಲ ಮೊದಮೊದಲಿಗೆ ನನ್ನ ಬರವಣಿಗೆ ಕೂಡ ಕನಸಾಗಿತ್ತು. ಅಂದುಕೊಳ್ಳುತ್ತಿದ್ದೆ ಹಾಗೆಯೇ ಬರೆಯುತ್ತಿದೆ. ಕಾಲಕ್ರಮೇಣ ಶಿಕ್ಷಣದಿಂದ ವೃತ್ತಿಯ ಜೀವನಕ್ಕೆ ಕಾಲಿಟ್ಟಾಗ ನಿಧಾನವಾಗಿ ಬರಹ ಕಡಿಮೆಯಾಗುತ್ತಾ ಬಂದಿದೆ. ಹಾಗಂತ ಪೂರ್ತಿ ಬರೆಯುದನ್ನೇ ನಿಲ್ಲಿಸಿದೆ ಎಂಬ ಅರ್ಥವಲ್ಲ. ಸಮಯ ಸಿಕ್ಕಾಗ ಮನಸ್ಸಿನಲ್ಲಿ ಆಸಕ್ತಿ ಇರುವಾಗ ಬರೆಯುತ್ತೇನೆ. ಸಮಯಕ್ಕೆ ನಾನು ಹೊಂದಿಕೊಂಡಿದ್ದೇನೆ. ಎಷ್ಟೋ ಸಂಬಂಧಗಳು ಕೂಡ ಹೀಗೇನೇ ಮೊದಲು ನೀವು ಅವರೊಂದಿಗೆ ಹೀಗಿರಬೇಕು ,ಹಾಗಿರಬೇಕು, ಅಷ್ಟು ಮುದ್ದು ಮಾಡಬೇಕು, ಇಷ್ಟು ಬಂದಿದೆ ಪ್ರೀತಿ ಕೊಡಬೇಕು ಅವರೊಂದಿಗೆ ಈ ಸ್ಥಳಗಳಿಗೆ ಭೇಟಿ ನೀಡಬೇಕು ಎಂಬೆಲ್ಲ ಕನಸುಗಳು ಕಾಣ್ತೀರ. ಆದರೆ ಸತ್ಯವೇ ಬೇರೆಯಾಗಿರುತ್ತದೆ. ಅವರು ನಿಮ್ಮವರೇ, ನೀವು ಅವರನ್ನು ಮೊದಲಿಗೆ ಒಪ್ಪಿಕೊಳ್ಳಿ. ಅವರು ನಿಮಗೆ ನೀಡಲು ಸ್ವಲ್ಪವೂ ಸಮಯ ಅವರ ಬಳಿಯೇ ಇರುವುದಿಲ್ಲ. ನಿಮಗೆ ಅನಿಸಿದ್ದು ಅವರಿಗೂ ಅನ್ನಿಸಬೇಕು ಎಂಬ ಯಾವುದೇ ನಿಯಮಗಳಿಲ್ಲ. ನಿಮ್ಮ ಬದುಕು ನೀವು ನಿಮಗಿಂತ ಅವರಿಗೆ ಹೆಚ್ಚಿನ ಆಗಿರುವುದಿಲ್ಲ, ನಿಮ್ಮ ಆಸಕ್ತಿಗಳೆಲ್ಲ ಅವರಿಗೆ ಹಿತ ಶಕ್ತಿಗಳಲ್ಲ. ಇಂತಹ ಸಂದರ್ಭದಲ್ಲಿ ವ್ಯಕ್ತಿಗಳ ಜೊತೆಗೆ ಜೀವನ ಸಾಗಿಸಲೇಬೇಕು ಎಂಬ ಹಠ ಇರಬೇಕು. ಆ ಹಠಕ್ಕೆ ನಾವು ನಮ್ಮ ಸಂಬಂಧಗಳಿಗೆ ಸೋತು ಬೆಲೆ ಕೊಟ್ಟು ಬಾಗಿ ಹೊಂದಿಕೊಳ್ಳುವುದೇ ಉತ್ತಮ. ಪ್ರಕೃತಿ ಅಷ್ಟೇ ರೀ ಬೇಸಿಗೆಯಲ್ಲಿ ಸೆಕೆಗೆ ಹೊಂದಿಸುತ್ತೆ ಮಳೆಗಾಲದಲ್ಲಿ ಮಳೆಗೆ ಮನುಷ್ಯನನ್ನು ಹೊಂದಿಸುತ್ತೆ ಚಳಿಗಾಲದಲ್ಲಿ ಚಳಿಗೆ ಮೈ ಒಡ್ಡಬಾರದೆಂಬ ಯೋಚನೆ ಜೊತೆಗೆ ಮನುಷ್ಯ ಚಳಿಗೆ ಹೊಂದುತ್ತಾನೆ. ವಿಷಯ ಯಾವುದೇ ಇರಲಿ ವ್ಯಕ್ತಿ ಯಾರೇ ಇರಲಿ, ಸಮಯ ಎಂತದ್ದೇ ಆಗಿರಲಿ ಸ್ಥಳ ಎಲ್ಲೇ ಇರಲಿ ಬದುಕುವ ಜಾಣತನ ನಮ್ಮಲ್ಲಿರಬೇಕು. ಉತ್ತಮ ಬದುಕಿಗಾಗಿ ಮಾನಸಿಕ ನೆಮ್ಮದಿಗಾಗಿ ನಿಮ್ಮವರ ಖುಷಿಗಾಗಿ ಬದುಕಿನಲ್ಲಿ ಮೊದಲು ಅಂದುಕೊಳ್ಳಿ ಅಂದುಕೊಂಡದ್ದು ಆಗಲಿಲ್ಲ ಅನ್ನುವ ಸಂದರ್ಭದಲ್ಲಿ ಆಗಿರುವ ಸಂದರ್ಭದಲ್ಲಿ ಹೊಂದುಕೊಳ್ಳಿ ಇದೇ ಕಲಿಯುಗದ ತಾತ್ಪರ್ಯ ಶುಭವಾಗಲಿ ಸ್ನೇಹಿತರೆ.

ಸಿಂಚನ ಜಿ ಎನ್* *ಯುವ ಲೇಖಕಿ*

Leave a Reply

Your email address will not be published. Required fields are marked *