
ಬಲ್ಡೋಟಾ ಹೋರಾಟಕ್ಕೆ ಸಾಥ್…
ಕ್ರಿಯಾ ವೇದಿಕೆ ಸಭೆಯಲ್ಲಿ ಶಾಸಕ ಸಂಸದರ ಭರವಸೆ
ಕೊಪ್ಪಳ: ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ಮೂಲಕ ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಸಭೆಯಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಬಲ್ಡೋಟಾ ಹೋರಾಟಕ್ಕೆ ಸಾಥ್ ನೀಡುವದಾಗಿ ಭರವಸೆ ನೀಡಿದರು.
ಈ ವೇಳೆ ಹೋರಾಟಗಾರರು ಮತ್ತು ಪತ್ರಕರ್ತರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ಜನಜಾನುವಾರುಗಳಿಗೆ ಬಸಾಪುರ ಕೆರೆ ಬಳಸಲು ಬಿಡುವದಕ್ಕೆ ಮಾರ್ಗೋಪಾಯ ಹುಡುಕಲು ತಿಳಿಸಿದರು
.ಕಾರ್ಖಾನೆ ಅವರು ಮಾಡಿದ ದೂರುಗಳಿಗೆ ಪ್ರತಿಯಾಗಿ ಹೋರಾಟಗಾರರು ಮತ್ತು ರೈತರು ಕೊಟ್ಟ ದೂರನ್ನು ಸಹ ಪರಿಗಣಿಸಬೇಕು ಹಾಗೂ ಹೋರಾಟಗಾರರ ಮೇಲಿನ ಸುಳ್ಳು ದೂರುಗಳಿಗೆ “ಬಿ” ರಿಪೋರ್ಟ್ ಹಾಕುವಂತೆ ಮಾತನಾಡುವದಾಗಿ ಸಭೆಯಲ್ಲಿ ಹೇಳಿದರು.

. ಅಲ್ಲದೇ ಮುಖ್ಯ ಮಂತ್ರಿಗಳ ಬಳಿಗೆ ನಿಯೋಗ ತೆಗೆದುಕೊಂಡು ಹೋಗಿದ್ದು, ಅಲ್ಲಿಯೇ ಸಿಎಂ ಅವರು ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದ್ದರು, ಮೊನ್ನೆ ಹೊಸಪೇಟೆ ಗೆ ಬಂದಾಗಲೂ ಕಾರ್ಖಾನೆ ಅತ್ಯಂತ ಊರಿನ ಸಮೀಪ ಇರುವ ಸಮಸ್ಯೆ ಸಹ ತೋರಿಸಿ ವಿವರಿಸಲಾಗಿದೆ. ಸರಕಾರ ಜನರ ವಿರುದ್ಧ ಆಲೋಚನೆ ಮಾಡುವದಿಲ್ಲ ಎಂದೂ ಹೇಳಿದರು.ಸಂಸದ ಕೆ. ರಾಜಶೇಖರ ಹಿಟ್ನಾಳ ಅವರು ಮಾತನಾಡಿ, ಜನರ ಪರವಾಗಿ ಕೆಲಸ ಮಾಡಲು ತಾವು ಹೋರಾಟದ ಭಾಗವಾಗುವದಾಗಿ ಹೇಳಿದ ಅವರು, ಸಚಿವರು ಸಹ ಕಾರ್ಖಾನೆ ಬಾಧಿತರ ಸ್ಥಳಕ್ಕೆ ಆಗಮಿಸುವರು.
ಕಾರ್ಖಾನೆ ಸಿಬ್ಬಂದಿ ಕುರಿಗಾಯಿ, ಧನಗಾಯಿಗಳ ಮೇಲೆ ಮಾಡಿದ ಹಲ್ಲೆ ದೌರ್ಜನ್ಯ ತಪ್ಪು ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ ಸ್ವಲ್ಪ ಸಮಯಾವಕಾಶ ಕೊಡಿ ಸಮಸ್ಯೆ ಇತ್ಯರ್ಥಪಡಿಸುತ್ತೇವೆ ಎಂದರು.
ಜಂಟಿ ಕ್ರಿಯಾ ವೇದಿಕೆ ಮುಖಂಡರಾದ ಅಲ್ಲಮಪ್ರಭು ಬೆಟ್ಟದೂರು ಅವರು ಮಾತನಾಡಿ ತುರ್ತಾಗಿ ನಾಲ್ಕು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು ಅದರಲ್ಲಿ ಬಳ್ದೋಟ ಕಾರ್ಖಾನೆ ವಿಸ್ತೀರ್ಣ ಸಂಪೂರ್ಣವಾಗಿ ಹಿಂಪಡೆಯುವುದು ತುರ್ತಾಗಿ ಬಸಾಪುರ ಕೆರೆಯನ್ನು ಜನಜಾನುವಾರುಗಳಿಗೆ ಮುಕ್ತವಾಗಿ ಇಡುವುದು ಕಂಪನಿ ಮಾಡಿರುವ ಸುಳ್ಳುಗಳನ್ನು ಹಿಂಪಡೆಯುವುದು ಹಾಗೂ ಕಂಪನಿ ಸಿಬ್ಬಂದಿ ಹಲ್ಲೆ ಮಾಡಿದ ದೇವಪ್ಪ ಹಾಲಳ್ಳಿ ಅವರಿಗೆ ನೆರವು ನೀಡುವುದು ಸೇರಿದಂತೆ ಹೋರಾಟಕ್ಕೆ ಪೂರ್ಣ ಪ್ರಮಾಣದ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಕರಡಿ ಸಂಗಣ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಹೋರಾಟ ಸಮಿತಿ ಪ್ರಮುಖರಾದ ಡಿ. ಎಚ್. ಪೂಜಾರ್, ಕೆ.ಬಿ. ಗೋನಾಳ್, ರಾಜು ಬಾಕಳೆ, ಮಂಜುನಾಥ ಜಿ. ಗೊಂಡಬಾಳ, ನಜೀರ್ ಸಾಬ್ ಮೂಲಿಮನಿ, ಮಹಾಂತೇಶ್ ಕೊತಬಾಳ, ಮುದುಕಪ್ಪ ಹೊಸಮನಿ, ರಮೇಶ್ ತುಪ್ಪದ್, ಡಾ. ಮಂಜುನಾಥ್ ಸಜ್ಜನ್, ಭೀಮಸೇನ್ ಕಲ್ಕೇರಿ, ಕರಿಯಪ್ಪ ಗುಡಿಮನಿ, ಕಾಶಪ್ಪ ಚಲುವಾದಿ ಸೇರಿ ಅನೇಕರಿದ್ದರು.