ತಡೆ ಹಿಡಿದ ತಳವಾರರ ಎಸ್ಟಿ ಪ್ರಮಾಣ ಪತ್ರ ವಿತರಣೆ ಮಾಡದಿದ್ದರೆ ಸಿ.ಎಂ.ಗೆ ಕಪ್ಪು ಬಾವುಟ ಕಾದಿದೆ

ಸುದ್ದಿ 12 ಅಫಜಲಪುರ 2*ತಡೆ ಹಿಡಿದ ತಳವಾರರ ಎಸ್ಟಿ ಪ್ರಮಾಣ ಪತ್ರ ವಿತರಣೆ ಮಾಡದಿದ್ದರೆ ಸಿ.ಎಂ.ಗೆ ಕಪ್ಪು ಬಾವುಟ ಕಾದಿದೆ*

ಅಫಜಲಪುರ:ರಾಜ್ಯದಲ್ಲಿರುವ ತಳವಾರ ಮತ್ತು ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್.ಟಿ) ಪಟ್ಟಿಗೆ 2020ರಲ್ಲಿ ರಾಷ್ಟ್ರಪತಿಗಳ ಮುದ್ರೆಯೊಂದಿಗೆ ಕೇಂದ್ರ ಸರ್ಕಾರ ಸೇರ್ಪಡೆಗೊಳಿಸಿತ್ತು.

ಬಳಿಕ ತಾಲೂಕು ತಹಸೀಲ್ದಾರರು ತಳವಾರರಿಗೆ ಎಸ್.ಟಿ. ಜಾತಿ ಪ್ರಮಾಣ ಪತ್ರಗಳನ್ನು ವಿತರಿಸುತ್ತಿದ್ದರು. ಆದರೆ ಸುಮಾರು ನಾಲ್ಕೈದು ತಿಂಗಳಿಂದ ಕಲಬುರ್ಗಿ ಜಿಲ್ಲೆಯಲ್ಲಿ ಅನೇಕ ನೆಪಗಳನ್ನು ಹೇಳಿ ನೈಜ ತಳವಾರರಿಗೆ ಅಧಿಕಾರಿಗಳು ಪ್ರಮಾಣ ಪತ್ರ ನೀಡುವಲ್ಲಿ ನಿರ್ಲಕ್ಷ್ಯ ತೋರಲಾಗುತ್ತಿದೆ.ಇದರ ಪರಿಣಾಮವಾಗಿ ಸಮಾಜದವರು ಹಲವು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಹಾಗೂ ಶಿಷ್ಯವೇತನ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳಿಗಾಗಿ ಪ್ರಮಾಣ ಪತ್ರ ಇಲ್ಲದೆ ಅಲೆದಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರವು ಗಂಭೀರ ಗಮನ ಹರಿಸದೆ ಇರುವುದನ್ನು ತಳವಾರ ಸಮಾಜ ತೀವ್ರವಾಗಿ ಖಂಡಿಸಿದೆ

.ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘದ ನೇತೃತ್ವದಲ್ಲಿ ಬೃಹತ್ ಹೋರಾಟದ ಪೂರ್ವಭಾವಿ ತಯ್ಯಾರಿ ತಾಲೂಕಿನ ವಿವಿದ ಗ್ರಾಮಗಳಲ್ಲಿ ಸಮಾಜದ ಪ್ರಮುಖ ಮುಖಂಡರೊಂದಿಗೆ ಚರ್ಚೆಸಿ ಪೂರ್ವ ತಯಾರಿ ನಡೆಯುತ್ತಿದ್ದು, ಸಂಘದ ಅಧ್ಯಕ್ಷ ಸಂತೋಷ ತಳವಾರ ಹಾಗೂ ಯುವ ಮುಖಂಡರಾದ ಶರಣು ದಿವಾಣಜಿ, ಮರೆಪ್ಪ ಜಮಾದಾರ ಬನ್ನೆಟ್ಟಿ ,ಮಹಾಂತೇಶ ಪಾಟೀಲ, ಅವರು ಮಾತನಾಡಿ – “ಹಿಂದಿನ ದಿನಗಳಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಲಬುರ್ಗಿ ಪ್ರವಾಸದ ವೇಳೆ ಕಪ್ಪು ಬಾವುಟ ಪ್ರದರ್ಶಿಸಿ ಬೇಡಿಕೆ ಸಲ್ಲಿಸಿದ್ದೇವೆ. ಆದರೆ ಇದುವರೆಗೆ ಸರ್ಕಾರದಿಂದ ಯಾವುದೇ ತೃಪ್ತಿಕರ ನಿರ್ಧಾರ ಕೈಗೊಳ್ಳಲಾಗಿಲ್ಲ.

ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಪ್ಟೆಂಬರ್ 16 ಅಥವಾ 17ರಂದು ಕಲಬುರ್ಗಿಗೆ ಬರುವ ಸಂದರ್ಭದಲ್ಲಿ ಮತ್ತೊಮ್ಮೆ ಕಪ್ಪು ಬಾವುಟ ಪ್ರದರ್ಶನ ನಡೆಸಲಾಗುತ್ತದೆ” ಎಂದು ಎಚ್ಚರಿಸಿದರು. “ಕಲಬುರ್ಗಿ ಹಾಗೂ ಯಾದಗಿರಿ ಸೇರಿದಂತೆ ವಿವಿಧ ಜಿಲ್ಲೆಯ ಪ್ರತಿಯೊಬ್ಬ ಸಮಾಜದ ಸದಸ್ಯರೂ ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ತಡೆ ಹಿಡಿದ ಎಸ್.ಟಿ. ಪ್ರಮಾಣ ಪತ್ರ ವಿತರಣೆ ಮಾಡಿದರೆ ಮಾತ್ರ ಹೋರಾಟ ಹಿಂತೆಗೆದುಕೊಳ್ಳಲಾಗುವುದು.

ಇಲ್ಲದಿದ್ದರೆ ಕಪ್ಪು ಬಾವುಟ ಹೋರಾಟವನ್ನು ತೀವ್ರಗೊಳಿಸಲಾಗುವುದು” ಎಂದು ಮುಖಂಡರು ಎಚ್ಚರಿಕೆ ನೀಡಿದ್ದಾರೆ.ಈ ಹೋರಾಟದ ನಿರ್ಧಾರ ಈಗಾಗಲೇ ಜಿಲ್ಲೆಯ ರಾಜಕೀಯ ಹಾಗೂ ಸಾಮಾಜಿಕ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರದ ಮುಂದಿನ ಕ್ರಮವೇ ಹೋರಾಟದ ತೀವ್ರತೆಯನ್ನು ನಿರ್ಧರಿಸಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *