ಕ್ರೀಡೆ ಇಲ್ಲದ ಜೀವನ ಕೀಡೆ ತಿಂದ ಹಣ್ಣಿನಂತೆ : ಅಯ್ಯಪ್ಪ ಸುರುಳ

ಕ್ರೀಡೆ ಇಲ್ಲದ ಜೀವನ ಕೀಡೆ ತಿಂದ ಹಣ್ಣಿನಂತೆ : ಅಯ್ಯಪ್ಪ ಸುರುಳ

ಕುಷ್ಟಗಿ : ವಿದ್ಯಾರ್ಥಿಗಳ ಜೀವನದಲ್ಲಿ ಕ್ರೀಡೆ ಅತ್ಯವಶ್ಯಕವಾಗಿದ್ದು, ದೈಹಿಕ ಬೆಳವಣಿಗೆಗೆ ಕ್ರೀಡೆ ಅತ್ಯಮೂಲ್ಯವಾಗಿದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡೆಯಲ್ಲಿ ಭಾಗವಹಿಸಬೇಕು. ಕ್ರೀಡೆ ಇಲ್ಲದವನ ಜೀವನ ಕೀಡೆ ತಿಂದ ಹಣ್ಣಿನಂತಾಗುತ್ತದೆ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಅಯ್ಯಪ್ಪ ಸುರುಳ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ಅವರು ತಾಲೂಕಿನ ಅಡವಿಭಾವಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದುಟಗಿಯಲ್ಲಿ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ದೈಹಿಕ ಆರೋಗ್ಯಕ್ಕೆ ಕ್ರೀಡೆ ಸಹಾಯಕವಾಗಿದ್ದು, ಶೈಕ್ಷಣಿಕ ಮತ್ತು ಸಾಮಾಜಿಕ ಜೀವನದ ಅವಿಭಾಜ್ಯ ಅಂಗವಾದ ಕ್ರೀಡೆಗೆ ನಾವು ಮಹತ್ವ ಕೊಟ್ಟು ವಿಜೇತರಾದ ಮಕ್ಕಳನ್ನು ತಾಲೂಕ ಮಟ್ಟಕ್ಕೆ ಕಳಿಸೋಣ ಎಂದರು.

ಕ್ರೀಡಾ ಧ್ವಜಾರೋಹಣ ಮಾಡಿದ ಎಸ್ ಡಿ ಎಂ ಸಿ ಅಧ್ಯಕ್ಷರಾದ ನೀಲಪ್ಪ ನಾಯ್ಕ ಮಾತನಾಡಿ, ಈ ಕ್ರೀಡೆಯಲ್ಲಿ ಭಾಗಿಯಾದ ಎಲ್ಲ ಮಕ್ಕಳು ನಮ್ಮವೇ ಎಂಬ ಮನೋಭಾವದಿಂದ ನಾವೆಲ್ಲರೂ ಪ್ರೋತ್ಸಾಹ ಕೊಟ್ಟು ಮುಂದಿನ ಹಂತಕ್ಕೆ ಕಳಿಸುವ ಕಾರ್ಯ ನಮ್ಮೆಲ್ಲರ ಮೇಲಿದೆ.

ಇದನ್ನು ಜವಾಬ್ದಾರಿಯಿಂದ ನೆರವೇರಿಸೋಣ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಯರಾದ ಬಸವರಾಜ್ ಕೊಡಗಲಿ ವಹಿಸಿದ್ದರು, ಕ್ಲಸ್ಟರ್ ವ್ಯಾಪ್ತಿಯ ಎಲ್ಲ ಶಾಲೆಗಳ ಮುಖ್ಯೋಪಾಧ್ಯಯರು ಭಾಗಿಯಾಗಿದ್ದರು.ವೇದಿಕೆ ಮೇಲೆ ಗ್ರಾಪಂ ಸದಸ್ಯರಾದ ಯಮನಪ್ಪ ಬಿಂಗಿ, ಶೇಖರಪ್ಪ ಜಗ್ಗಲ್ ಹಾಗೂ ಸರ್ವ ಸದಸ್ಯರು ಇದ್ದರು.

ಕಾರ್ಯಕ್ರಮವನ್ನು ಸ.ಶಿ.ಮಂಜುನಾಥ್ ಹಿರೇಮಠ್ ನಿರೂಪಿಸಿದರು.ವಿಧಯಾರ್ಥಿಗಳು ಪ್ರಾರ್ಥಿಸಿದರು.

ಶಿಲ್ಪಾ ಹಿರೇಮಠ ಸ್ವಾಗತಿಸಿದರೆ, ಸ.ಶಿ‌. ದೀಪಾ ಚಿಲಾಪುರ ವಂದಿಸಿದರು.ಪ್ರತಿಜ್ಞಾ ವಿಧಿಯನ್ನು ಸಂಗನಗೌಡ ನಾಗೋಡ್ ದೈಹಿಕ ಶಿಕ್ಷಕರು ಬೋಧಿಸಿದರು. ಸದರಿ ಕ್ರೀಡಾಕೂಟಗಳನ್ನು 10 ಜನ ದೈಹಿಕ ಶಿಕ್ಷಕರು ಯಶಸ್ವಿಗೊಳಿಸಿದರು.ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

Leave a Reply

Your email address will not be published. Required fields are marked *