
ಕಷ್ಟದ ಕುಲುಮೆಯಲ್ಲಿ ಅರಳಿದ ಪ್ರತಿಭೆ: ಪರಿಶುದ್ಧವಾದ ಮಣ್ಣಿನಿಂದ ಗಣೇಶ್ ಮೂರ್ತಿ ತಯಾರಿಸಿದ ಬಾಲಕಚಿಣ್ಣರ ಚಿಲಿಪಿಲಿಯಿಂದ ಗಣೇಶನ ಮೂರ್ತಿ ಪ್ರತಿಷ್ಠಾಪನೆ
ಕುಷ್ಟಗಿ ತಾಲೂಕಿನ ಹೊಮ್ಮಿನಾಳ ಕುಗ್ರಾಮದಲ್ಲಿ ಅರಳಿದ ಪ್ರತಿಭೆಗೆ ಮತ್ತೊಂದು ಸಾಕ್ಷಿಯಾಗಿದೆಕಲೆ ಎಲ್ಲರನ್ನು ಕೈಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ ಎನ್ನುವುದಕ್ಕೆ ತಾಜಾ ನಿದರ್ಶನ ಸಮೀಪದ ಹೊಮ್ಮಿನಾಳ ಗ್ರಾಮದ ಲಕ್ಷ್ಮಣ್ ಕುಟುಂಬದಲ್ಲಿ ಬೆಳೆದು ಕಷ್ಟಕೋಟಲೆಗಳ ನಡುವೆ ಮಣ್ಣಿನಿಂದ ವಿವಿಧ ದೇವರ ಮೂರ್ತಿ ಮಾಡುವ ಚಿತ್ರ ಕಲಾ ಕ್ಷೇತ್ರದಲ್ಲಿ ಅಭಿಷೇಕ್ ನವಲಹಳ್ಳಿ ಸಾಧನೆ ಮಾಡಿದ್ದಾನೆ.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಮ್ಮಿನಾಳದಲ್ಲಿ 6ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯಾದ ಅಭಿಷೇಕ್ ಈತನು ವಿದ್ಯಾಭ್ಯಾಸದ ಜೊತೆಗೆ ಮಣ್ಣಿನಲ್ಲಿ ವಿವಿಧ ಭಂಗಿಯ ಮೂರ್ತಿಗಳನ್ನು ಮಾಡುತ್ತಾನೆ.ಗಣೇಶ್ ಚತುರ್ಥಿ ಅಂಗವಾಗಿ ಪರಿಶುದ್ಧವಾದ ಮಣ್ಣಿನಿಂದ ಗಣೇಶ್ ಮೂರ್ತಿಯನ್ನು ರೆಡಿ ಮಾಡಿ ಗಣೇಶ ಹಬ್ಬದ ದಿನದಂದು ಪ್ರತಿಷ್ಠಾಪನೆ ಮಾಡಿದ್ದಾನೆಂದು ಸ್ಥಳೀಯರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರುಗಣಪತಿ ಬಪ್ಪ ಮೋರಿಯ.. ಸರ್ವರಿಗೂ 2025ರ ಗೌರಿ ಗಣೇಶ ಹಬ್ಬದ ಶುಭಾಶಯಗಳು.!
ಗಣೇಶ ಚತುರ್ಥಿ ಹಬ್ಬವು ಶಿವ ಪಾರ್ವತಿ ಸುತನಾದ ಗಣೇಶನನ್ನು ಭೂಮಿಗೆ ಆಹ್ವಾನಿಸುವ ದಿನವಾಗಿದೆ. ಈ ಹಬ್ಬದ ಸಮಯದಲ್ಲಿ 10 ದಿನಗಳ ಕಾಲ ಗಣೇಶನು ಭೂಮಿಯ ಮೇಲೆ ನೆಲೆಸುತ್ತಾನೆ ಎನ್ನುವ ಇದೀಗ ಎಲ್ಲೆಡೆ ಗೌರಿ–ಗಣೇಶ ಹಬ್ಬದ ಸಂಭ್ರಮದ ಶುರುವಾಗಿದೆ. ಮೂರ್ತಿಗಳು ಎಲ್ಲೆಡೆಯೂ ರಾರಾಜಿಸುತ್ತಿವೆ. ಆದರೆ, ಇದೀಗ ಜನರಲ್ಲಿಯೂ ಪರಿಸರ ಸ್ನೇಹಿ ಗಣೇಶ ವಿಗ್ರಹಗಳ ಬಗ್ಗೆ ಆಸಕ್ತಿ ಹೆಚ್ಚಾಗಿದ್ದು, ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ.ನಂಬಿಕೆಯಿದೆ. ಗೌರಿ ಗಣೇಶ ಹಬ್ಬದ ದಿನದಂದು ನಾವು ನಮ್ಮ ಪ್ರೀತಿ ಪಾತ್ರರೊಂದಿಗೆ, ಸ್ನೇಹಿತರೊಂದಿಗೆ ಅಥವಾ ಕುಟುಂಬದ ಸದಸ್ಯರೊಂದಿಗೆ ಶುಭಾಶಯಗಳನ್ನು ಹಂಚಿಕೊಳ್ಳುವ ಮೂಲಕ ಅವರಿಗೆ ಗಣೇಶನ ಆಶೀರ್ವಾದವನ್ನು ಕೋರುತ್ತೇವೆ. ಗಣೇಶ ಮೂರ್ತಿ ತಯಾರಿಕೆ ಮಾಡುವುದು ಕಲೆ. ಹಬ್ಬದೊಂದಿಗೆ ಕಲೆಗೂ ಪ್ರೋತ್ಸಾಹ ನೀಡಿದಂತಾಗುತ್ತದೆ. ಪರಿಸರ ಉಳಿಸುವುದು ಎಲ್ಲರ ಜವಾಬ್ದಾರಿ.

ಆದಷ್ಟು ಪರಿಸರಸ್ನೇಹಿ ಗಣಪತಿ ಪೂಜೆ ಮಾಡೋಣ. ಬಸವರಾಜ್ ಹಳ್ಳಿ
