
ಧರ್ಮ ರಕ್ಷಣೆಗೆ ಯುವಕರು ಒಂದಾಗಬೇಕು: ಶೇಖರಪ್ಪ
ಕೊಪ್ಪಳ : ನಗರದಲ್ಲಿ ಸನಾತನ ಮಹಾ ಮಂಡಳಿಯವರು ಸ್ಥಾಪಿಸಿದ್ದ ಗಣೇಶ ಮೂರ್ತಿ ಕಾರ್ಯಕ್ರಮದಲ್ಲಿ ಶೇಖರಪ್ಪ ಮತ್ತೇನ್ನವರ್ ಅವರು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯುವಕರು ಯಾವುದೇ ಜಾತಿ, ಭೇದ ಮಾಡದೇ ಹಿಂದೂ ನಾವೆಲ್ಲ ಒಂದು ಎಂಬ ಮನೋಭಾವನೆಯಿಂದ ಮುನ್ನೆಡೆದಾಗ ಮಾತ್ರ ಧರ್ಮ ರಕ್ಷಣೆ ಸಾಧ್ಯವಾದಿತು ಎಂದು ಯುವಕರಿಗೆ ಕಿವಿಮಾತು ಹೇಳಿದರು.ಯುವಕರು ಯಾರ ಮಾತಿಗೂ ಕಿವಿಗೊಡದೆ, ಶಾಂತತೆಯಿಂದ ಗಣೇಶನ ಮೂರ್ತಿಯನ್ನು ಕಳಿಸಿಕೊಡಬೇಕು ಎಂದರು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಹರಿದು ಅಂಚಿ ಹೋಗಿದ್ದ ಹಿಂದೂ ಸಮಾಜವನ್ನು ಲೋಕಮಾನ್ಯ ಬಾಲಗಂಗಾಧರ ಅವರು ಒಟ್ಟುಗೂಡಿಸುವ ಸಲುವಾಗಿ ಗಣೇಶನ ಹಬ್ಬವನ್ನು ಆಚರಿಸಲು ಪ್ರಾರಂಬಿಸಿದರು.

ಅಂದಿನಿಂದ ಇಂದಿನವರೆಗೆ ಗಣೇಶ ಹಬ್ಬ ವಿಜೃಂಭಣೆಯಿಂದ ನಡೆಯುತ್ತಲೇ ಬಂದಿದೆ ಎಂದರು

. ಈ ವೇಳೆ ಸಿ.ವಿ. ಚಂದ್ರಶೇಖರ್, ಬಸವರಾಜ ಕ್ಯಾವಟರ್, ಹೇಮಲತಾ ನಾಯಕ್ ಸೇರಿದಂತೆ ಅನೇಕರು ಇದ್ದರು.
