
ಪಾಲಿಟೆಕ್ನಿಕ್ ಅತಿಥಿ ಉಪನ್ಯಾಸಕರ ಆಶಾಕಿರಣ ಎಸ್ ,ವಿ,ಸಂಕನೂರ್ ಬೆಂಗಳೂರು,- ಸರ್ಕಾರಿ ಪಾಲಿಟೆಕ್ನಿಕ್ ಅತಿಥಿ ಉಪನ್ಯಾಸಕರಿಗೆ ಸದಾ ಬೆನ್ನೆಲುಬಾಗಿ ನಿಂತು ಸೂಕ್ತಮಾರ್ಗದರ್ಶನ ಮಾಡುತ್ತಾ ನಾವೆಲ್ಲರೂ ಕಾರ್ಯ ಪ್ರವೃತ್ತರಾಗುವಂತೆ ಮಾಡಿದ ಕೀರ್ತಿ ಮತ್ತು 7500 ವೇತನದಿಂದ 12500 ವೇತನ ಮಾಡಿಸಿದ್ದು ಕೂಡಾ ವಿಧಾನ ಪರಿಷತ್ ಸದಸ್ಯರಾಗಿರುವ ಎಸ್ ವಿ ಸಂಕನೂರರವರಿಗೆ ಸಲ್ಲುತ್ತದೆ.
ಸರ್ಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರ ಸಂಘ ಅಸ್ತಿತ್ವಕ್ಕೆ ಬಂದ ನಂತರ ನಮ್ಮ ಎಲ್ಲ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತ ನಮ್ಮೆಲ್ಲರ ಸಂಕಷ್ಟದ ಹಾದಿಯನ್ನು ಸುಗಮಗೊಳಿಸಿದ ಶಿಕ್ಷಣ ಪ್ರೇಮಿ ಹಾಗೂ ವಿಧಾನಪರಿಷತ್ ಸದಸ್ಯರು ಆಗಿರುವ ಎಸ್ ವಿ,ಸಂಕನೂರ್ ಅವರಿಗೆ ಸಲ್ಲುತ್ತದೆ ಎಂದು ತಾಂತ್ರಿಕ ಶಿಕ್ಷಣ ಪರಿಷತ್ತಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರ ಸಮಸ್ಯೆ ಹಾಗೂ ಸವಾಲುಗಳು ಕುರಿತು ಜರುಗಿದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಅರಕಾಲಿಕ ಉಪನ್ಯಾಸಕ ಸಂಘದ ಪದಾಧಿಕಾರಿಗಳು ತಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡು ಸ್ಪಂದಿಸಿದ ಉನ್ನತ ಶಿಕ್ಷಣ ಸಚಿವರಾದಡಾ.ಎಮ್.ಸಿ. ಸುಧಾಕರ್‌ರವರು ಸೂಕ್ತ ಮಾರ್ಗದರ್ಶನ ಮಾಡಿದ ಎಸ್ ವಿ ಸಂಕನೂರ ರವರನ್ನುಮನತುಂಬಿ ನೆನೆದು ಅಭಿನಂದಿಸಿದರು,ಪ್ರತಿ ತಿಂಗಳಲ್ಲಿ ಕೇವಲ ೧೨,೫೦೦ ರೂಗಳಲ್ಲಿ ಕಾರ್ಯನಿರ್ವಹಿಸುತ್ತ ಬಂದ ನಮಗೆಲ್ಲ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ನಮ್ಮಗಳ ಕುರಿತು ಮಾತನಾಡಿ೨೦೨೪-ಜನೇವರಿಯಲ್ಲಿ, ಸೇವಾನುಭವದ ಆಧಾರದ ಮೇಲೆ ಐದುಸಾವಿರ, ಆರುಸಾವಿರ, ಏಳುಸಾವಿರ, ಎಂಟುಸಾವಿರ ವರಗೆ ಹೆಚ್ಚಿಸಿದ್ದು ಮಾತ್ರವಲ್ಲದೇ ಅದೇ ವರ್ಷದ ೨೦೨೪-ಅಗಸ್ಟನಲ್ಲಿ ೨೨ಸಾವಿರ, ೨೪ಸಾವಿರ, ೨೬ಸಾವಿರ ಮತ್ತು ೨೮ ಸಾವಿರ ರೂ.ಗಳವರೆಗೆ ಹೆಚ್ಚಿಸಿ, ಈ ಪೂರ್ವದಲ್ಲಿ ಕೇವಲ ೧೨೫೦೦/- ರೂ ವೇತನ ಪಡೆಯುತ್ತಿದ್ದ ಪಾಲಿಟೆಕ್ನಿಕ್ ಅತಿಥಿ ಉಪನ್ಯಾಸಕ ಇಂದು ಅತಿಹೆಚ್ಚು ಅಂದರೆ, ೩೮ ಸಾವಿರ ರೂ.ಗಳವರೆಗೆ ವೇತನ ಪಡೆಯುತ್ತಿದ್ದು ಇದಕ್ಕೆ ಮೂಲ ಕಾರಣ ನಮಗೆ ಸೂಕ್ತ ಮಾರ್ಗ ದರ್ಶನನೀಡಿ ನಾವು ಹತಾಶರಾದಾಗಲೆಲ್ಲ ನಮ್ಮಲ್ಲಿ ಸ್ಪೂರ್ತಿಯನ್ನು ತುಂಬಿ ನಿರಂತರ ಕಾರ್ಯ ಶೀಲರಾಗುವಂತೆ ಮಾಡಿದ ಕೀರ್ತಿ ಶ್ರೀಯುತರಿಗೆಸಲ್ಲುತ್ತದೆ

.ಎಂದು ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಮನತುಂಬಿ ನೆನೆದರು, ಉಪನ್ಯಾಸಕ ರಿಗೆ ಸ್ಪಂಧಿಸುವ ಮೂಲಕ ವೇತನ ಮಾತ್ರವಲ್ಲದೆ, ಆರೋಗ್ಯವಿಮೆ, ಐದುಲಕ್ಷ ಇಡಿಗಂಟು ಮಾತೃತ್ವರಜೆ, ನೇಮಕಾತಿಯಲ್ಲಿ ಕೃಪಾಂಕ ಕೌನ್ಸಿಲಿಂಗ್‌ನಲ್ಲಿ ಸರಳಿಕರಣ ಈಎಲ್ಲ ಸವಲತ್ತುಗಳನ್ನು ನೀಡುವಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ತಿಳಿಯಪಡಿಸಿದ ಕೀರ್ತಿ ಎಸ್ ವಿ ಸಂಕನೂರ್ ಅವರಿಗೆ ಸಲ್ಲುತ್ತದೆ.

ಸರ್ಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರ ಸಂಘದ ಅಧ್ಯಕ್ಷರು. ಉಪಾಧ್ಯಕ್ಷರು, ಸರ್ವ ಪದಾಧಿಕಾರಿಗಳು ರಾಜ್ಯದ ಎಲ್ಲಾ ಸರ್ಕಾರಿ ಪಾಲಿಟೆಕ್ನಿಕ್ ಗಳ ಅರಕಾಲಿಕ ಉಪನ್ಯಾಸಕರು ಅಭಿನಂದಿಸಿದ್ದಾರೆ.,