
*
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸುಗನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬನ್ನಿಕೊಪ್ಪ ಗ್ರೂಪ್ ಮಟ್ಟದ ಕ್ರೀಡಾ ಕೂಟಗಳು ಜರುಗಿದವು.

ಈ ಸಂದರ್ಭದಲ್ಲಿ ಬಾಲಕರ ಕ್ರೀಡಾ ಕೂಟವನ್ನು ಗ್ರಾಮ ಪಂಚಾಯತಿ ಸದಸ್ಯ ಸಿದ್ದಲಿಂಗಯ್ಯ ಹೊಂಬಾಳಿಮಠ ಹಾಗೂ ಬಿಜೆಪಿ ಯುವ ಮುಖಂಡ ಮಹೇಶ್ ಬಡ್ನಿ ಹಾಗೂ ಬಾಲಕೀಯರ ಕ್ರೀಡಾ ಕೂಟವನ್ನು ಶ್ರೀಕಾಂತ್ ಕ್ಯಾಸಕ್ಕಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಮಂಜುನಾಥ್ ಸವಣೂರ ಕಾರ್ಯಕ್ರಮದ ಧ್ವಜಾರೋಹಣವನ್ನು ನೆರವೇರಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ನಾಣಕಿ ನಾಯಕ್ ಇವರು ಕ್ರೀಡಾ ಜ್ಯೋತಿಯನ್ನು ಸ್ವಾಗತಿಸಿದರು.

ಈ ಕಾರ್ಯಕ್ರಮದಲ್ಲಿ ಹಲವು ಶಿಕ್ಷಕರಿಗೆ ಸನ್ಮಾನಿಸಲಾಯಿತು.ಈ ಕ್ರೀಡಾ ಕೂಟದಲ್ಲಿ ಸುಗನಹಳ್ಳಿ, ಬನ್ನಿಕೊಪ್ಪ, ಹಡಗಲಿ, ತಾರಿಕೊಪ್ಪ, ಕೆರಳ್ಳಿ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಈ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣಾಧಿಕಾರಿಗಳು, BRC ಮತ್ತು CRC ಕೇಂದ್ರಗಳ ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಕರ ಸಂಘದ ಅಧ್ಯಕ್ಷರು, ನೌಕರರ ಸಂಘದ ಸದಸ್ಯರು, ಹಲವು ಶಿಕ್ಷಕರು, ಶಿಕ್ಷಕೀಯರು ಗ್ರಾಮ ಪಂಚಾಯತಿ ಸದಸ್ಯರು, ಶಿಕ್ಷಣ ಪ್ರೇಮಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.*

ವರದಿ*✍️ಚಂದ್ರಶೇಖರ ಸೋಮಣ್ಣವರ